ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು
ಕನ್ನಡಕ್ಕೆ ಶಾಸ್ತ್ರೀಯ(ಅಭಿಜಾತ) ಭಾಷೆಯ ಸ್ಥಾನ ಸಿಕ್ಕಿರುವುದು ಸಂತೋಷದ ಮತ್ತು ಸಂಕಟದ ವಿಷಯ. ಸಂತೋಷ ಏಕೆಂದರೆ ಕನ್ನಡದ ಹಿರಿಮೆ. ಹಳಮೆ, ಉತ್ಕ್ರುಷ್ಟತೆಗಳನ್ನು ಭಾರತ ಸರಕಾರವು ಕೊನೆಗೂ ಗುರುತಿಸಿರುವುದು ಸಂಕಟದ ವಿಷಯವೇಕೆಂದರೆ ಕಾನೂನಿನ ನೆವ ಓದಿ ಶಾಸ್ತ್ರೀಯ ಸ್ಥಾನವನ್ನು ತಡೆಗತ್ತಿರುವುದು. ಈ ಸಂದಿಗ್ದ ಪರಿಸ್ಥಿಯಲ್ಲಿ ಈಗ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಹೋರಾಡಿದ ವಿದ್ವಾಂಸರ ಮತ್ತು ಕರ್ನಾಟಕ ಸರಕಾರದ ಕೈಗೆ ಸಕ್ಕೆ ಕಡ್ಡಿಯನ್ನು ಚೀಪಲು ಕೊಟ್ಟಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಸಂಗತಿಯನ್ನು ನಾನಿಲ್ಲಿ ಸ್ಪಷ್ಟಪಡಿಸಬೇಕು, ಶಾಸ್ತ್ರೀಯ ಭಾಷೆ ಎಂದರೆ ಸಾಹಿತ್ಯ, ಅದರಲ್ಲೂ ಹಳೆಗನ್ನಡ ಸಾಹಿತ್ಯ ಎಂಬ ಸಾಮಾನ್ಯ ನಂಬಿಕೆಯೊಂದು ನಮ್ಮ ವಿದ್ವಾಂಸರಲ್ಲಿ ಮನೆಮಾಡಿದಂತೆ ತೋರುತ್ತಿದೆ. ಇನ್ನೊಂದಿಷ್ಟು ಹಿದಕ್ಕೆ ಹೋಗಿ ಶಾಸನಗಳ ಮೂಲಕ ನಮ್ಮ ಭಾಷೆಯ ಹಳಮೆಯನ್ನು ಗುರುತಿಸಿಯಾರು. ಆದರೆ ಇಷ್ಟಕ್ಕೆ ನಮ್ಮ…