‘ಸಾಹಿತ್ಯ ಮತ್ತು ಭಾಷೆ ಕುರಿತು’ – ಪುಸ್ತಕಲೋಕ
ಸಾಹಿತ್ಯ ಮತ್ತು ಭಾಷೆ (೧೯೮೦) ಶಾಂತಿನಾಥ ದೇಸಾಯಿ , ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರು ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಮ್ಮ ಮಾತಾಪಿತೃಗಳ ನೆನಪಿಗಾಗಿ ‘ಮಾಸ್ತಿ ರಾಮಸ್ವಾಮಿ ತಿರುಮಲಮ್ಮ” ದತ್ತಿ ಉಪನ್ಯಾಸ ಮಾಲೆಯಲ್ಲಿ, ಶಾಂತಿನಾಥ ದೇಸಾಯರು ಕೊಟ್ಟ ಎರಡು ಉಪನ್ಯಾಸಗಳ ಪುಸ್ತಕರೂಪ ‘ಸಾಹಿತ್ಯ ಮತ್ತು ಭಾಷೆ’. ಎರಡು ವಿಭಾಗಗಳನ್ನು ಹೊಂದಿರುವ ಈ ಕಿರುಹೊತ್ತಿಗೆ ಬಳಸಿ (೪೯ ಪುಟಗಳು) ಇಪ್ಪತ್ತನೆ ಶತಮಾನದಲ್ಲಿ ಭಾಷಾಶಾಸ್ತ್ರದ ಶಿಸ್ತಿನಿಂದ ಸಾಹಿತ್ಯವನ್ನು ಅಭ್ಯಯಿಸುವ ಕ್ರಮವನ್ನು ಪರಿಚಯಿಸುತ್ತದೆ. ಸಾಹಿತ್ಯ ಭಾಷೆಯಲ್ಲೇ ಘಟಿಸುವ ಕ್ರಿಯೆಯಾದ್ದರಿಂದ ಭಾಷೆಯ ಸಾಧ್ಯ್ದತೆ, ಮತಿ ಎರಡೂ ಹೇಗೆ ಸಾಹಿತ್ಯವನ್ನು ಸೃಜಿಸುವಲ್ಲಿ ತಮ್ಮ ಅನನ್ಯತೆಯನ್ನು ಪಡೆದುಕೊಳ್ಳುತ್ತವೆ ಎಂಬುದು ಈ ಪುಸ್ತಕದ ವಸ್ತು. ಸಾಹಿತ್ಯವೆಂದರೆ ಭಾಷೆಯ ವಿಶಿಷ್ಟರೂಪ ಎಂಬ ನಿಲುವಿನಿಂದ ಶೈಲಿಶಾಸ್ತ್ರಾ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತದೆಂದು ದೇಸಾಯರು ತೋರಿಸಲು ಪ್ರಯತ್ನಿಸಿದ್ದಾರೆ ….