Browsed by
Tag: Biographies

ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಪುಸ್ತಕ ವಿಮರ್ಶೆ

ವ್ಯಕ್ತಿ ಮೂಲತಃ ಕ್ರಿಯಾತ್ಮಕನಾದ ಅವನ ಅಭಿವ್ಯಕ್ತಿಯೂ ಸಹ radical ಆಗಿರುತ್ತದೆ. ಇದರ ಮೂಲಕ ತನ್ನ ಸಮಾಜಕ್ಕೆ ಸ್ಪಂದಿಸುತ್ತಾನೆ. ಈ ರೀತಿ ಸ್ಪಂದಿಸುವುದಕ್ಕಾಗಿ ಒಂದು ಮಾಧ್ಯಮವನ್ನು ಕಂಡುಕೊಳ್ಳುತ್ತಾನೆ.ಸಮಾಜದ ಸಂಕೀರ್ಣತೆಯೊಡನೆ ಬೆರೆತು ಸಂಕೀರ್ಣ ಅನುಭವವನ್ನು ಪಡೆಯುತ್ತಾನೆ.

l2ಸಮಕಾಲೀನ ಸಮಸ್ಯೆಯನ್ನು ಅಭಿವ್ಯಕ್ತಿಸುವಾಗ ತಕ್ಷಣ ಯಾವ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆಗ ಆತ ಬುದ್ದಿವಂತನಾಗಿದ್ದರೆ suggestive ಆಗುತ್ತಾನೆ. ಈ ರೀತಿ suggestive ಆಗಿ ಸಮಾಜಕ್ಕೆ ತನ್ನ ಮಾಧ್ಯಮದಿಂದ ಜನರನ್ನು ಯೋಚನೆಗೆ ತೊಡಗಿಸುತ್ತಾನೆ. ಈ ರೀತಿ ಲಂಕೇಶರು ತಮ್ಮ ಮಾಧ್ಯಮಗಳನ್ನು ಬದಲಾಯಿಸುತ್ತಾ ಬಂದು ಈಗ ಒಂದು ವಿಶಾಲ canvas ಉಳ್ಳ ಮಾಧ್ಯಮವನ್ನು ತಲುಪಿದ್ದಾರೆ. ಸಾಹಿತ್ಯ ಕೇವಲ ‘ವಿದ್ಯಾವಂತ’ ರಿಗೆ ಮಾತ್ರ ತಲುಪುವ ಮಾಧ್ಯಮ. ಆದರೆ ಸಿನಿಮಾ ಶ್ರಾವಣ – ದೃಶ್ಯಗಳಿಂದ ಕೂಡಿದ್ದು ‘ವಿದ್ಯಾವಂತ’ ಅವಿದ್ಯಾವಂತರವರೆಗೂ ತಲುಪುವ ಮಾಧ್ಯಮ. ಈ ಮಾಧ್ಯಮವನ್ನು ಬಳಸಿಕೊಂಡಾಗ ಸಿನಿಮಾ ಲಿಪಿಕಾರ ಆತನ ಅಭಿವ್ಯಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದು ಮುಖ್ಯ , ಇದರ ಆಧಾರದ ಮೇಲೆ ಅವನ ಸೋಲು ಗೆಲುವು ನಿಂತಿರುವುದು.

ಶ್ರವಣ ದೃಶ್ಯ ಮಾಧ್ಯಮದ ಮತ್ತೊಂದು ಅಂಶ ಮನಸ್ಸಿನಲ್ಲಿರುವುದನ್ನು ತೆರೆಯ ಮೇಲೆ ಹೇಗೆ ಮೂಡಿಸುವುದು(visualization) ಎಂಬುದು. ಈ ಶಕ್ತಿ ಲಂಕೇಶರಿಗೆ ಮೂಲತಹವಾಗಿ ತಿಳಿದುಬಂದಿದೆ ಎಂಬುದನ್ನು ಅವರ ‘ಪಲ್ಲವಿ’ ಮತ್ತು ‘ಅನುರೂಪ’ಗಳನ್ನೂ ನೋಡಿದಾಗ ತಿಳಿಯುತ್ತದೆ. ಉದಾಹರಣೆಗೆ ‘ಅನುರೂಪ’ದ ಪ್ರಿನ್ಸಿಪಾಲರು ಕಾಲೇಜಿನಲ್ಲಿ ಬಹಳ ಶಿಸ್ತು (strict) ಎನ್ನುವುದನ್ನು ಸ್ಥಾಪಿಸಲು ಎಷ್ಟು ಸೂಕ್ಷ್ಮ ವಿವರಗಳನ್ನು ಇದ ಸುತ್ತ ನೇಯ್ದಿದ್ದಾರೆ  ! ಉಪಾಧ್ಯಾಯರು ಪಾಠ ಮಾಡುವುದನ್ನು ಪ್ರಿನ್ಸಿಪಾಲರು ಕದ್ದು ಪರೀಕ್ಷಿಸುವುದು, ಹುಡುಗರು ಕಾಲೇಜು ಆವರಣದಲ್ಲಿ ಉಚ್ಚೆ ಹುಯ್ದದ್ದಕ್ಕೆ , ಕಾಲೇಜಿಗೆ ಹೊತ್ತಾಗಿ ಬಂದಿದ್ದಕ್ಕೆ, ಹುಡುಗಿಯೊಡನೆ ಓಡಾಡುತ್ತಾನೆ ಎನ್ನುವುದಕ್ಕೆಲ್ಲ fine ಹಾಕುವುದು. ಎಲ್ಲರನ್ನೂ ಕುರಿಯಂತೆ ಬೆಳೆಸುವುದನ್ನು ಬಹಳ ಚೆನ್ನಾಗಿ ಕಟ್ಟಿದ್ದಾರೆ. ಇದನ್ನು ಬರೀ ಮಾತಿನಲ್ಲಿ ಹೇಳಿಸಬಿಡಬಹುದಾಗಿತ್ತು. ಆದರೆ ಮೇಲೆ ಹೇಳಿದ ವಿಷಯವನ್ನು ಸ್ಥಾಪಿಸಲು ಲಂಕೇಶರು ಪಟ್ಟಿರುವ ಶ್ರಮ ಅಗಾಧವಾದದ್ದು ಮತ್ತು ಪರಿಣಾಮಕಾರಿಯಾದದ್ದು . ಇದನ್ನು ಸಾಧಿಸುವುದು ಕಷ್ಟವಾದುದು. ನೂರು ಪದಗಳಲ್ಲಿ ಹೇಳುವುದನ್ನು ಪರಿಣಾಮಕಾರಿಯಾಗಿ ಒಂದೇ ದೃಶ್ಯದಲ್ಲಿ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬಹುದು ಎಂದು ಹೇಳಿಕೊಳ್ಳುವ ಮಾಧ್ಯಮದಲ್ಲಿ ಮಾತಿನಲ್ಲಿ ನಿಸ್ಸತ್ವವಾಗಿ ಹೇಳುವುದನ್ನು ಅದೇ ಸಿನಿಮಾ ಮಾಧ್ಯಮದಲ್ಲಿ ಸ್ಫಳಕಾರಿಯಾಗಿ ಸಾಧಿಸುವುದೂ ಎಷ್ಟು ಕಷ್ಟ ಎಂಬುದು ತಿಳಿಯುತ್ತದೆ. ಇದೇ ಲಂಕೇಶರ ಮಹತ್ವಪೂರ್ಣವಾದ (visualiztion), ಈ ರೀತಿಯ visualization ಇಲ್ಲದಿದ್ದರೆ ‘ಕಾಲೇಜುರಂಗ’ದಂತಹ ಸೂಕ್ಷ್ಮವಸ್ತು (suble theme) ಹೇಗೆ ನಿಸಿಮಾ ಮಾಧ್ಯಮದಲ್ಲಿ ನಿರ್ಜೀವವಾಗುತ್ತದೆ ಎಂಬುದನ್ನು ಕಾಣಬಹುದು.

ಸಿನಿಮಾಕ್ಕಾಗಿಯೇ ಬರೆದ ಕಥೆಗಳು ಯಾವುವು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಸಂಸ್ಕಾರ , ವಂಶವೃಕ್ಷ , ಕಾಡು ಮುಂತಾದ ಕಾದಂಬರಿಗಳ ಸಿನೆಮಾಗಳಾದಾಗ ಹೊರಬಿದ್ದ ಪ್ರತಿಕ್ರಿಯೆಗಳು, ಆದರೆ ಲಂಕೇಶರು ಸಿನೆಮಾಕ್ಕಾಗಿಯೇ ಕಥೆಯನ್ನು ಬರೆದು ಅದರಲ್ಲೇ ಬಹುಪಾಲು ಯಶಸ್ಸು ಗಳಿಸಿರುವ್ದು ಶ್ಲಾಘನೀಯ ಮತ್ತು ಆವರೇ ಹೇಳಿಕೊಂಡಿರುವಂತೆ ಅವರು ಈಗ ಸಿನೆಮಾ ಮಾಧ್ಯಮದ ಮೂಲಕ ಬರೆಯುತ್ತಿರುವುದು ಅವರ ಅಭಿವ್ಯಕ್ತಿಯ ವಿಕಾಸವನ್ನು ಸೂಚಿಸುತ್ತದೆ. ಸತ್ತ ಹಾವುಗಳನ್ನು ಕಲಾತ್ಮಕವಾಗಿ ಹೊಡೆಯಲು ಪ್ರಯತ್ನಪಡುವ ‘ಪ್ರಾಯೋಗಿಕ’ ಎಂದು ಹೇಳಿಕೊಂಡು ಕುಣಿಯುವ ಜನರಿಗೆ ‘ಅನುರೂಪ’ ಒಂದು ಒಳ್ಳೆಯ ಸವಾಲನ್ನು ಎಸೆಯುತ್ತದೆ. ಮುಂದೆ ಈ ಜನರು ಇದಕ್ಕೆ ಯಾವ ರೀತಿಯ ‘ಸಿನಿಮೀಯಾ’ಪ್ರತಿಕ್ರಿಯೆಯನ್ನು ಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಲಂಕೇಶರು ‘ಪಲ್ಲವಿ’ಯಾ ನಾಯಕಿ ಹತ್ತಿರ ‘ಈ ಕಥೆ ನನ್ನದು ಆಗಿರಬಹುದು , ನಿಮ್ಮದು ಆಗಿರಬಹುದು (ನಿಮ್ಮ ಜೀವನದಲ್ಲೂ ನೀವು ಯಾರನ್ನಾದರೂ ಪ್ರೀತಿಸಿರಬಹುದು . ಆದರೆ ನಾನೇನೂ ಹೇಮಮಾಲಿನಿ ಅಲ್ಲ, ಮಾಲ ಸಿಂಹ ಅಲ್ಲ, ನಾನು ಪ್ರೀತಿಸುವವನು ಧರ್ಮೇಂದ್ರ ಅಲ, ರಾಜೇಶ್ ಖನ್ನ ಅಲ್ಲ, ಆದರೂ ನಾವಿಬ್ಬರೂ ಪ್ರೀತಿಸುವುದು ತಪ್ಪೇ .” )ಎಂದು ಹೇಳಿಸಿ ಪ್ರೇಕ್ಷಕರನ್ನು ಒಳಗು(involve) ಮಾಡುತ್ತಾರೆ. ಆದರೆ ಅಷ್ಟೇ ಸುಲಭವಾಗಿ ಸಿನೆಮಾದ ಅಂತರ ಧ್ವನಿ ಬಹುತೇಕ ನೋಡುಗರನ್ನು ಒಳಗು ಮಾಡಿಸುವುದಿಲ್ಲ. ಈ ರೀತಿ ಮಾಡಿಸದೆ thesis ನಲ್ಲೆ anti-thesis ತಂದಿದ್ದಾರೆ. ಇದು ‘ಪಲ್ಲವಿ’ಯಾ ಪರಿಮಿತಿ ಕೂಡ. ಆದರೆ ‘ಅನುರೂಪ’ದಲ್ಲಿ ಮಾವೋ ಮೂಲಕ ಮಾರ್ಕ್ಸಿಸಂ ಬಗ್ಗೆ ಹೇಳಿಸಿ ಅದು ಈ ನೆಲದಲ್ಲಿ ಸಾದ್ಯವಿಲ್ಲ ಎಂದು ಮೊದಲಲ್ಲಿ ವಾದಿಸಿ ಕೊನೆಗೆ ನಾಯಕ ಒಬ್ಬಂಟಿಯಾಗಿ ಹೋರಾಡಲಾರದ ಮುಳುಗುತ್ತಿರುವ ಸೂರ್ಯದೊಡನೆ ಮುಳುಗಿ ಹೋಗುತ್ತಿರುವುದನ್ನು ತೋರಿಸಿದಾಗ ಇದೆ anti-thesis ಸ್ಥಾಪಿತವಾಗಿದೆ ಎಂದೂ ಅಥವಾ ನಮ್ಮ ಸಮಾಜ ಇನ್ನೂ ಈ ಯಾವ ಪ್ರತಿಕ್ರಿಯೆಗೂ ಸ್ಪಂದಿಸಲು ಹದವಾಗಿಲ್ಲವೆಂದು ಮೇಲು ನೋಟಕ್ಕೆ ಅನ್ನಿಸಿದರು ಅದು ಅ ರೀತಿ ಆಗುವುದಿಲ್ಲ. ಏಕೆಂದರೆ ಈಗಿನ ನಮ್ಮ ಸಮಾಜದಲ್ಲಿ ಶಂಕರನಂಥ ಯುವಕರು ಪಡುತ್ತಿರುವ ಪರಿಭ್ರಮಣೆಯೇ ಒಂದು ಸೀಮಿತ ಆಗಿರುವಾಗ ಮತ್ತು ಶಂಕರನೇ ತಯಾರು ಮಾಡಿದ ವಿದ್ಯಾರ್ಥಿಗಳು ಅವನ ಮೇಲೆ ಎರಗಿಬಿದ್ದಾಗ ತನ್ನತಹ ಅಂದರೆ ಸಮಾಜಕ್ಕೆ ಪ್ರತಿಕ್ರಿಯೆ ತೋರಿಸುವ ಅನೇಕ ಯುವಕರನ್ನು ತಯಾರು ಮಾಡಿದ್ದಾನಲ್ಲ ಎನ್ನಿಸುತ್ತದೆ. ಇಲ್ಲಿ ಶಂಕರನ ಸೋಲು ಲಂಕೇಶರ ಸೋಲು ಲಂಕೇಶರ ಜಯ ಎಂಬುದನ್ನು ಗಮನಿಸಬೇಕು. ಈ ದೃಷ್ಟಿಯಿಂದ ಲಂಕೇಶರು ಅನುರೂಪದಲ್ಲಿ ಪಲ್ಲವಿಗಿಂತ ಒಂದು ಹೆಜ್ಜೆ ಮುಂದೆ ಬಂದಿದ್ದಾರೆ ಎನ್ನಿಸುತ್ತದೆ.

ಬರೇ ಮಾತುಗಳಿಗೆ ಒತ್ತುಕೊಟ್ಟು ನಟರ ಬಾಯಿಯಲ್ಲಿ ಮಾತುಗಳನ್ನೇ ತುಂಬಿ ಹೇಳಬೇಕಾದ ವಿಷಯವನ್ನು ನಿಸ್ಸತ್ವಗೊಳಿಸುವ ನಿಜ ಜೀವನದಿಂದ ಬೇರೆಯೇ l1ಆದ ಜಗತ್ತನ್ನು ಸೃಷ್ಟಿಸುವ ಕಮರ್ಷಿಯಲ್ ಚಿತ್ರಗಳು ಅದರಿಂದ ಹೊರಬಿದ್ದು, ಮೂಕರೇ ಏನೋ ಎನ್ನಿಸುವಂತೆ ಮಾಡಿ ಕಲಾತ್ಮಕ ಸಿನಿಮಾಗಳನ್ನು ಸೃಷ್ಟಿಸ ಹೊರಟವರಿಬ್ಬರಿಗೂ ಲಂಕೇಶ್ ಅನುರೂಪದಲ್ಲಿ ಕೈಕೊಟ್ಟು ಮೊನಚಾದ ಮಾತುಗಳಿಂದಲೂ ಕಲಾತ್ಮಕ ಸಿನೆಮಾದವರ ಕಲಾತ್ಮಕ ಅಭಿವ್ಯಕ್ತಿಯನ್ನೂ (aristic expression) ಉಳಿಸಿಕೊಂಡು ಬಂದಿರುವದು ಕಾಣದ ಸಿನೆಮಾದ ವಿಪರ್ಯಾಸ(extremities)ದ ಕಂದರವನ್ನು ಬಂಧಿಸುವ ಸೇತುವೆಯಾಗಿದೆ. ಅಂದ ಮಾತ್ರಕ್ಕೆ ಈ ರೀತಿ compromise ಮಾಡಿಕೊಂಡು ತಯಾರುಮಾಡಿದ ಸಿನೆಮಾಗಳಿಲ್ಲವೆಂದಲ್ಲ. ಉದಾಹರಣೆಗೆ ಸಿದ್ದಲಿಂಗಯ್ಯನವರ ‘ಭೂತಯ್ಯನ ಮಗ ಅಯ್ಯು’ ಇದು ಎಲ್ಲಾ ವರ್ಗಗಳಿಗೂ ಪ್ರಿಯವಾಯಿತು. ಆದರೆ ಈ ರೀತಿಯ compromisationನ ಭರದಲ್ಲಿ ಮೂಲಭೂತವಾಗಿ ಏನು ಹೇಳುಬೇಕೆಂದಿರುವರೋ ಅದನ್ನು ಮರೆತಿರುವುದು. ಈ ದೃಷ್ಟಿಯಿಂದ ನೋಡಿದಾಗಲೂ ಅನುರೂಪ ಅಸಫಲತೆಯನ್ನು ಕಾಣದೆ ಸಫಲತೆಯನ್ನು ಕಂಡಿರುವುದು . ಆದರೆ ಇಲ್ಲಿಯೂ ಮತ್ತೊಂದು ಪ್ರಶ್ನೆ ಎದ್ದು ಕಕಾಣುತ್ತದೆ ಅದೆಂದರೆ ಅನುರೂಪದಂತಹ compromise ಚಿತ್ರವೂ ‘ಕಲಾತ್ಮಕ’ ಚಿತ್ರದಂತೆಯೇ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗದೆ ಇರುವುದು. ಏಕೆಂದರೆ ಮೊದಲೇ ತಿಳಿಸಿರುವಂತೆ ಸಿನೆಮಾ ಒಂದು ಶಕ್ತಿಯುತ ಮಾಧ್ಯಮ. ಅದು ಹೆಚ್ಚು ಜನರನ್ನು ತಲುಪುವಂತಹುದು . ಇದು ಶೈಕ್ಷಿಣಕವಾಗಿ (educative) ಹೆಚ್ಚು ಜನರನ್ನು ಎಚ್ಚರಿಸಬೇಕು. ಅಂದರೆ ಯಾವ ವರ್ಗವನ್ನು ಎಚ್ಚರಿಸಬೇಕೋ ಆ ವರ್ಗಕ್ಕೆ ಚಿತ್ರ ಎಷ್ತರಮಟ್ಟಿಗೆ ಹತ್ತಿರವಾಗಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ಅತೀ ಬುದ್ದಿವಂತಿಕೆಯನ್ನು ಬಿಟ್ಟು ಇನ್ನು ಸ್ವಲ್ಪ ಸಡಿಲವಾಗಬೇಕಾಗುತ್ತದೆ.

ಹಾಗೆಂದಾಕ್ಷಣ  ಈಗಿರುವ ಯಾವ ಕಲಾತ್ಮಕತೆಯನ್ನೂ ತ್ಯಾಗಮಾಡದೆ  ಜನಗಳಿಗೆ ತಲುಪುವ ಹಾಗೆ (communicate) ಚಿತ್ರವನ್ನು ತರುವ ನಿಜವಾದ ಪ್ರಯತ್ನ ನಡೆಸಿದರೆ ಲಂಕೇಶರು ತುಳಿದಿರುವ ಹಾದಿ ಸುಗುಮವಾಗುತ್ತದೆ. ಈ ರೀತಿಯಿಂದೊಂದು ರೀತಿಯ ಬುದ್ದಿ ಜೀವಿಗಳೇ ಕೇಂದ್ರೀಕೃತ (centralize) ಆಗಿರುವ ಚಿತ್ರಗಳು ವಿಕೇಂದ್ರಕರಣವಾಗಿ ಹೆಚ್ಚು ಜನರನ್ನು ಆಲೋಚಿಸಲು ಹಚ್ಚಬೇಕು. ಆದರೆ ಇದನ್ನು ಹೇಗೆ ಸಾಧಿಸಬೇಕೆಂಬುದನ್ನು ಈಗ ಸಧ್ಯಕ್ಕೆ ಹೇಳುವುದು ಕಷ್ಟವಾಗುತ್ತದೆ. ಆದರೆ ಲಂಕೇಶ್ ಅವರು ಈ ರೀತಿಯ ತೊಳಲಾಟದಿಂದ (conflict) ಅನುರೂಪದಲ್ಲಿ ಒಂದು ಸುತ್ತು ಬಿಡಿಸಿಕೊಂಡು ಬಂದಿರುವುದೇ ದೊಡ್ಡ ಸಾಹಸವಾಗಿದೆ ಮತ್ತು ಸಮಾಧಾನ ಕೊಡುವಂಥದ್ದು , ಭರವಸೆಯನ್ನು ಮೂಡಿಸುವಂಥದ್ದು ಆಗಿದೆ.

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯

21ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ ಈಚಿನದೆಂದು ಕಂಡು ಬರುತ್ತದೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಖಂಡಗಳಲ್ಲಿ ಬದುಕಿರುವ ಅನೇಕ ಸಮಾಜದಲ್ಲಿ ಇನ್ನು ತಮ್ಮ ಭಾಷೆಯನ್ನೂ ಬರವಣಿಗೆಗೆ ಅಳವಡಿಸಿಕೊಂಡಿಲ್ಲ . ಅಂದರೆ ನಮ್ಮ ಇತಿಹಾಸ ರಚನೆ ಕೇವಲ ಪಾರ್ಶ್ವಿಕವಾದದ್ದು.

ಮೇಲೆ ಹೇಳಿದ ಎಲ್ಲಾ ರೀತಿಯ ಚರಿತ್ರೆಗಳನ್ನೂ ಬದಿಗಿರಿಸಿ ಇಡೀ ನಮ್ಮ ಜಗತ್ತನ್ನು ಒಂದು ಘಾತಕವೆಂದು ಪರಿಗಣಿಸಿ ವಿವಿಧ ಜ್ಞಾನ ಶಾಖೆಗಳಾದ ಪುರಾತತ್ವಶಾಸ್ತ್ರ , ಮಾನವಶಾಸ್ತ್ರ, ಭಾಷಾಶಾಸ್ತ್ರ, ಪ್ರಾಣಿಶಾಸ್ತ್ರ , ವಿಕಸನ ಜೀವಶಾಸ್ತ್ರ , ಭೂಗರ್ಭಶಾಸ್ತ್ರ ಇವೆಲ್ಲದರ ಹದವಾದ ಪಾಕದಿಂದ ಜೇರ್ಡ್ ಡೈಮಂಡ್ ಗನ್ಸ್, ಜರ್ನ್ಸ್, ಸ್ಟೀವ್, ದೇ ಫೇಟ್ಸ್ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ರಚಿಸಿಕೊಟ್ಟಿದ್ದಾನೆ. ಐದು ನೂರು ಪುಟಗಳ ಈ ಪುಸ್ತಕದ ಹರವು ಅಪಾರವಾದದ್ದು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚರಿತ್ರೆಯನ್ನು ಇನ್ನೂ ವಿಜ್ಞಾನವೆಂದು ಪರಿಗಣಿಸಿಲ್ಲ. ಅದನ್ನು ಸಾಮಾಜಿಕ ಅಧ್ಯಯನದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಅಲ್ಲದೆ ಚರಿತ್ರೆಕಾರರೆ ಅದನ್ನು ವಿಜ್ಞಾನವೆಂದು ಪರಿಗಣಿಸಿಲ್ಲ. ಚರಿತ್ರೆಯೆಂದರೆ ಕೆಲವು ವಿಷಯಗಳ ವಿಸ್ತಾರವಾದ ಮಂಡನೆ ಎಂದೂ ಒಂದಾದನಂತರ ಮತ್ತೊಂದು ಸಂಗತಿಯನ್ನು ಪೇರಿಸಿಡುವುದು ಎಂದು ಭಾವಿಸಿದ್ದಾರೆ ಎಂಬುದು ಜೇರ್ಡ್ ನ ಕೊರಗು, ಇದಕ್ಕಾಗಿಯೇ ಈತ ಚರಿತ್ರೆಗೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಅಧ್ಯಯನಗಳನ್ನು ತನ್ನ ಸಾಧನವಾಗಿ ಬಳಸಿಕೊಂಡಿದ್ದಾನೆ.

ಈ ಜೇರ್ಡ್ ಡೈಮಂಡ್ ಮೂಲತಃ ಚರಿತ್ರೆಕಾರನಲ್ಲ. ತನ್ನ ತಂದೆಯಂತೆ ತಾನೂ ಡಾಕ್ಟರ್ ಆಗ ಬಯಸಿದವನು . ಅದಕ್ಕಾಗಿ ಎಳವೆಯಿಂದಲೇ ತಯಾರಿ ನಡೆಸಿದ್ದ. ಇವನ ಇನ್ನೊಂದು ಹವ್ಯಾಸವೆಂದರೆ ಹಕ್ಕಿಗಳ ವೀಕ್ಷಣೆ. ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ಔಷಧಶಾಸ್ತ್ರದ ಓದನ್ನು ಬಿಟ್ಟು ತನ್ನ ಕಾಲೇಜಿನ ವಿಧ್ಯಾಭ್ಯಾಸಕ್ಕೆ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡ. ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದ ಈತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿ ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ(೧೯೨೧). ನಂತರ ಜೀವವಿಕಾಸವಾದ ಮತ್ತು ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಆಶಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಖಂಡ ಮೇಲ್ಭಾಗದಲ್ಲಿರುವ ಪಾಪುವಾ ನ್ಯುಗಿನಿಯಾ ದ್ವೀಪದಲ್ಲಿ ಅತ್ಯಂತ ಹಳೆಯ ಹಕ್ಕಿಯ ಪಳೆಯುಳಿಕೆ ಕಂಡು ಬಂದಿದೆ ಎಂಬ ಸುದ್ದಿ ಇವನನ್ನು ತಲುಪಿತು. ಈತ ಆ ದ್ವೀಪಕ್ಕೆ ಅತ್ಯಂತ ಉತ್ಶಾಹದಿಂದ ಹೋದ. ಆ ದ್ವೀಪದಲ್ಲಿರುವವರು ಮೂಲನಿವಾಸಿಗಳು ಬುಡಕಟ್ಟು ಸಂಸ್ಕೃತಿಗೆ ಸೇರಿದವರು. ಹೋದ ಮಾರನೆ ದಿನವೇ ಸಮುದ್ರ ದಂಡೆಯಲ್ಲಿ ವಾಕ್ ಮಾಡುತ್ತಿದ್ದಾಗ ಬುಡಕಟ್ಟು ಜನಾಂಗದ ಯಾಲಿ ಎಂಬುವವನ ಭೇಟಿಯಾಯಿತು. ಆತ ಕುತೂಹಲದಿಂದ ಜೇರ್ಡ್ ನನ್ನು ಪರಿಚಯ ಮಾಡಿಕೊಂಡು ಆತ ಅಲ್ಲಿಗೆ ಬಂದ ಕಾರಣ ಕೇಳಿದ. ಅದಕ್ಕೆ ಜೇರ್ಡ್ ‘ಒಂದು ಕಾಲದಲ್ಲಿ ಬದುಕ್ಕಿದ್ದು ಈಗ ಇಲ್ಲವಾಗಿರುವ ಪಕ್ಷಿಯ ಪಳೆಯುಳಿಕೆಯ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ’ ಎಂದ. ಆಶ್ಚರ್ಯಚಕಿತನಾದ ಯಾಲಿ, ‘ಅಲ್ಲಾ ಸ್ವಾಮಿ, ಯಾವುದೋ ಒಂದು ಕಾಲದಲ್ಲಿದ್ದ ಹಕ್ಕಿಯ ಬಗ್ಗೆ ಸಂಶೋಧನೆಗೆ ಬಂದಿದ್ದೀರಲ್ಲ, ಅದೂ ಅಮೆರಿಕಾದಿಂದ, ಇಲ್ಲಿ ಇನ್ನು ನಾವು ಬದುಕಿದ್ದೆವಲ್ಲ, ನಾವು ಯಾವ ಕಾಲದಿಂದ ಇಲ್ಲಿ ಇದ್ದೇವೆ(ಬಿಳಿಯರು ಏಕೆ ನಮ್ಮನ್ನು ಆಳುತ್ತಿದ್ದಾರೆ?) ಹೇಳಿ’ ಎಂದು ಕೇಳಿದ. ಈ ಪ್ರಶ್ನೆ ಜೇರ್ಡ್ ನನ್ನು ಅಚ್ಚರಿಗೊಳಿಸಿದ್ದೆ ಅಲ್ಲದೆ ತಲ್ಲಣಕ್ಕೂ ಈಡುಮಾಡಿತು. ಹೌದಲ್ಲ ಸತ್ತ ಹಕ್ಕಿಯ ಚರಿತ್ರೆಯನ್ನು ಹುಡುಕಿಕೊಂಡು ಬಂದವ ನಾನು. ಆದರೆ ಮಾನವನ ಚರಿತ್ರೆಯನ್ನೇ ತಿಳಿದಿಲ್ಲವಲ್ಲ ನಾನು’ ಎಂಬ ಅರಿವು ಜೇರ್ಡ್ ನಿಗಾಯಿತು.

22ಯಾಲಿ ಹಾಕಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳಲು ಹತ್ತು ವರ್ಷಗಳ ನಂತರ ಮಾನವ ಜನಾಂಗದ ಇತಿಹಾಸವನ್ನು ಕಂಡುಹಿಡಿಯಲು ಸರ್ವಸಿದ್ದತೆಗಳನ್ನು ಮಾಡಿಕೊಂಡು ೧೯೭೨ ರಲ್ಲಿ ಮತ್ತೆ ಪಾಪುವಾ ನ್ಯುಗಿನಿಯಾಗೆ ಬಂದ. ಆ ದ್ವೀಪದೇಶ ಆಸ್ಟ್ರೇಲಿಯಾದ ಬಿಳಿಯರ ವಸಾಹತುವಿನಿಂದ ಬಿಡುಗಡೆ ಪಡೆಯುವ ಸಿದ್ದತೆ ನಡೆಸಿತ್ತು. ಅಷ್ಟು ಹೊತ್ತಿಗಾಗಲೇ ಯಾಲಿ ಬುಡಕಟ್ಟು ಜನಾಂಗದ ನಾಯಕನಾಗಿ ಹೊರಹೊಮ್ಮಿದ್ದ.

ಜೇರ್ಡ್ ನ ಚರಿತ್ರೆಯ ದಾರಿ ಭಿನ್ನವಾಗಿತ್ತು. ಚರಿತ್ರೆಯ ಪುನಾಃರಚನೆ ಎಂದರೆ ವಿವಿಧ ವಿಜ್ಞಾನ ಶಾಖೆಗಳ ಜ್ಞಾನದ ಅನಿರ್ವಾರ್ಯತೆ ಇದೆಯೆಂದು ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ಆಧಾರ ಒಂದು ಕಡೆಯಾದರೆ ಇನ್ನೊಂದು ಕಡೆ ಜೀವವಿಕಾಸವಾದ, ಪರ್ಯಾವರಣ ಅಧ್ಯಯನ, ಭೂಗರ್ಭಶಾಸ್ತ್ರದ ಅರಿವು ಇವೆಲ್ಲದರ ಜ್ಞಾನವನ್ನು ಹೊತ್ತು ನಡೆಸಿದ್ದ. ಆದರೆ ಜೇರ್ಡ್ ನ ಇತಿಹಾಸ ರಚನೆ ಪ್ರಾರಂಭವಾಗುವುದು ಇಂದಿನಿಂದ ಹದಿಮೂರು ಸಾವಿರ ವರ್ಷಗಳಿಂದ ಮಾತ್ರ. ಏಕೆಂದರೆ ಭೂಗರ್ಭಶಾಸ್ತ್ರದ ಪ್ರಕಾರ ಈ ಕಾಲದಲ್ಲಿ ಹಿಮಯುಗವು ಸರಿದು ‘ಇತ್ತೀಚಿನ’ ಯುಗ ಪ್ರಾರಂಭವಾಯಿತು. ಅಂದರೆ ಆಹಾರಕ್ಕಾಗಿ ಬೇಟೆಯಾಡಿ ಮತ್ತು ಅದರ ಜೊತೆ ತಿನ್ನಬಹುದಾದ ಸಸ್ಯಗಳ ಅನ್ವೇಷಣೆ ಮಾಡುತ್ತಿದ್ದ ಮನುಷ್ಯ ಒಂದು ಕಡೆ ತಳ ಊರಲು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಕಾಲ. ಯಾವ ಬೆಳೆಗಳನ್ನು ಬಿತ್ತಿ ಬೆಳೆಯಬಹುದು, ಅದಕ್ಕಾಗಿ ಭೂಮಿಯನ್ನು ಹೇಗೆ ಉಪಯೋಗಿಸಬಹುದು, ಒಂದು ಕಡೆ ತಳ ಊರಿದರೆ ಆಹಾರಕ್ಕೆ ಯಾವ ಪ್ರಾಣಿಗಳನ್ನು ಪಳಗಿಸಿ ಸಾಕಬಹುದು ಅದರಿಂದ ಬೇಸಾಯಕ್ಕೆ ಏನಾದರು ನೆರವಾದೀತೇ ಎಂಬುದನ್ನು ಪರೀಶೀಲಿಸುತ್ತಿದ್ದ ಕಾಲ. ಒಂದು ರೀತಿಯಲ್ಲಿ ‘ಹೊಸ ತಾಂತ್ರಿಕತೆ’ಗೆ ಮನುಷ್ಯ ಸಿದ್ಧನಾಗುತ್ತಿದ್ದ ಕಾಲ. ಇದಕ್ಕೆ ಮುಂಚೆ ಏಳು ಮಿಲಯನ್ ವರ್ಷಗಳ  ಹಿಂದೆ ಮೂಲ ಮಾನವನ ನೆಲೆ ಆಫ್ರಿಕ ಖಂಡ ಎಂದು ಗುರುತಿಸಲಾಗಿದೆ. ಅಲ್ಲಿಂದ ಹಿಮಯುಗ ಮುಗಿಯುವವರೆಗೆ ಆತ ಭೂಮಿಯ ಬೇರೆ ಬೇರೆ ಕಡೆಗೆ ಪಸರಿಸಿದ ಎಂಬ ಸಿದ್ದಾಂತ ಪುರಾತತ್ವ ಮತ್ತು ಮಾನವಶಾಸ್ತ್ರಗಳಿಂದ ರೂಪುಗೊಂಡಿದೆ. ಅಂದರೆ ಕಳೆದ ಹದಿಮ್ಮೊರು ಸಾವಿರ ವರ್ಷಗಳಿಂದ ಆತ ಅಲೆಮಾರಿಯೇ ಆಗಿದ್ದ.

ಮಾನವ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಬೇಸಾಯ ಸಂಸ್ಕೃತಿ ಪ್ರಾರಂಭವಾದದ್ದು ಪಶ್ಚಿಮ ಏಷ್ಯಾದಲ್ಲಿ. ಇಲ್ಲಿ ಕ್ರಿ.ಪೂ.ಏಳು ಸಾವಿರ ವರ್ಷಗಳ ಹಿಂದೆ ಆಹಾರ ಉತ್ಪಾದನೆ ಪ್ರಾರಂಭವಾಯಿತು. ಈಗಿನ ಜೋರ್ಡಾನ್ , ಸಿರಿಯಾ,ಇರಾಕ್, ಟರ್ಕಿ ಈ ಭಾಗದಲ್ಲಿ. (ಇಲ್ಲಿಯೇ ಮೊದಲ ಬಾರಿಗೆ ಪಟ್ಟಣಗಳು, ಬರವಣಿಗೆ, ರಾಜ್ಯ, ನಾಗರೀಕತೆ ಪ್ರಾರಂಭವಾದದ್ದು) ಇಲ್ಲಿಂದ ಭೂಮಿಯ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಈ ಬೆಳೆಗಳು , ಪ್ರಯಾಣ ಮಾಡಿದವು. ಜೇರ್ಡ್ ನ ಪ್ರಕಾರ ಈ ಭೂಭಾಗದಲ್ಲಿ ಆಹಾರ ಉತ್ಪಾದನೆ ಪ್ರಾರಂಭವಾದರೂ ಅದು ಸಮೃದ್ಧವಾಗಿ  ಬೆಳೆದದ್ದು ಯುರೋಪಿನಲ್ಲಿ. ಜೇರ್ಡ್ ನ ಪ್ರಮುಖವಾದ ವಾದವೆಂದರೆ ಮನುಷ್ಯನ ಅಭಿವೃದ್ಧಿಗೆ ಮುಖ್ಯಕಾರಣ ಆತ ಬದುಕುವ ಭೂಪ್ರದೇಶ; ಅಲ್ಲಿಯ ಪರ್ಯಾವರಣ; ಅದರಿಂದ ಆತ ಅಭಿವೃದ್ಧಿ ಹೊಂದುತ್ತಾನೆ ಎಂಬುದು.

23ಯಾವಾಗ ಮನುಷ್ಯ ಬೇಸಾಯ ಪ್ರಾರಂಭಿಸಿದನೋ ಆಗಿನಿಂದ ಆತನ ಬದುಕು ಬದಲಾಗಲು ಪ್ರಾರಂಭಿಸಿತು. ಬೇಸಾಯ ಯೋಗ್ಯ ಸಸ್ಯಗಳನ್ನು ಬೇಸಾಯಕ್ಕೆ ಒಗ್ಗಿಸಿಕೊಂಡ. ತಳ ಊರಿ ಬದುಕಲಾರಂಭಿಸಿದ . ಈ ಆಹಾರ ಉತ್ಪಾದನಾ ಸಂಸ್ಕೃತಿ ಬುಡಕಟ್ಟು ಜನಾಂಗದಲ್ಲಿ ಇಲ್ಲದ ಅನೇಕ ಖಾಯಿಲೆಗಳನ್ನು ಹುಟ್ಟು ಹಾಕಿತು. ಮನುಷ್ಯನ ಬಹುಪಾಲು ಖಾಯಿಲೆಗಳು ಸಾಕು ಪ್ರಾಣಿಜನ್ಯ ಎಂದು ಜೇರ್ಡ್ ಹೇಳುತ್ತಾನೆ. ಪ್ರಮುಖ ಖಾಯಿಲೆಗಳಾದ ಸಿಡುಬು,ಇನ್ಫುಎನ್ಜ , ಟಿಬಿ, ಮಲೇರಿಯ,ಪ್ಲೇಗ್, ದಡಾರ, ಕಾಲರಾ ಈ ಎಲ್ಲಾ ಖಾಯಿಲೆಗಳು ಮನುಷ್ಯನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪ್ರಾತ್ರವನ್ನೇ ವಹಿಸಿವೆ. ಎರಡನೇ ವಿಶ್ವ ಸಮರದ ತನಕ ಜನರು ಯುದ್ಧಗಳಲ್ಲಿ ಸತ್ತದ್ದಕ್ಕಿಂತ ಮಾರ್ಕ್ ರೋಗಗಳಿಗೆ ತುತ್ತಾದವರ ಸಂಖ್ಯೆ ಜಾಸ್ತಿ. ಹಿಂದಿನ ಅನೇಕ ಯುದ್ದಗಳನ್ನು ಗೆದ್ದವರು ಸೈನಿಕರಲ್ಲ. ಸೈನ್ಕರು ಹೊತ್ತು ತಂದ ಖಾಯಿಲೆಯ. ಯುರೋಪಿಯನ್ನರು ಮೊದಲು ಅಮೆರಿಕಾವನ್ನು ಗೆದ್ದಾಗ ಸ್ತಳೀಯ ಅಮೇರಿಕನ್ ಬುಡಕಟ್ಟು ಜನಾಂಗದವರು ಸತ್ತಿದ್ದು ಈ ಫಿರಂಗಿಯವರ ಖಾಯಿಲೆಯಿಂದ. ಆಫ್ರಿಕಾ ಮತ್ತು ಏಷ್ಯಾದಲ್ಲೂ ಇದೇ ರೀತಿಯಾಯಿತು. ತಲೆತಲಾಂತರದಿಂದ ಬಂದ ಖಾಯಿಲೆಯನ್ನು ತಡೆಯುವ ದೇಹಶಕ್ತಿ ಇಲ್ಲದ ಇತರರಿಗೆ ಇವರು ಸುಲಭವಾಗಿ ಬಳುವಳಿಕೊಟ್ಟರು. ಅಲಾಸ್ಕಾದ ಒಂದು ಇಡೀ ಬುಡಕಟ್ಟು ಜನಾಂಗ ಇದರಿಂದ ನಿರ್ನಾಮವಾಯಿತಂತೆ.

ಬೇಸಾಯ ಸಂಸ್ಕೃತಿ ಜನಸಂಖ್ಯೆ ವೃದ್ಧಿಯಲ್ಲಿ ಪಾತ್ರವಹಿಸಿತು. ಪಟ್ಟಣಗಳು ಹುಟ್ಟಿಕೊಂಡವು . ಪಟ್ಟಣಗಳಲ್ಲಿ ಒಟ್ಟೊಟ್ಟಿಗೆ ವಾಸಮಾಡುವ ಮನುಷ್ಯ ತಾನೇ ಈ ಖಾಯಿಲೆಗಳನ್ನು ಹರಡುವ ಮಾಧ್ಯಮವಾದ. ರೋಮನ್ನರ ವ್ಯಾಪಾರ ಮಾರ್ಗದಲೆಲ್ಲ ಈ ಖಾಯಿಲೆಗಳು ಹಬ್ಬಿದವು. ಕ್ರಿ.ಶ.೧೬೫ ರಲ್ಲಿ ಮಿಲಿಯಾಂತರ ರೋಮನ್ ಪ್ರಜೆಗಳು ಸಿಡುನಿಂದ ಸತ್ತರು. ಇದೆಲ್ಲ ಆದದ್ದು ಯೂರೋಪಿನ ಕೊಡುಗೆ ಎಂದು ಜೇರ್ಡ್ ನ ಸಂಶೋಧನೆ ತಿಳಿಸುತ್ತದೆ.

ಬೇಸಾಯ ಸಂಸ್ಕೃತಿಯ ಮತ್ತೊಂದು ಕೊಡುಗೆಯೆಂದರೆ ಬರಹ ಕಂಡುಹಿಡಿದಿದ್ದು. ಬರಹ ಚಾರಿತ್ರಿಕ ಕಾಲದ ಸಮಾಜದಲ್ಲಿ ಶಕ್ತಿಯುತವಾದ ಆಯುಧವಾಗಿ ಉಪಯೋಗಿಸಿಕೊಳ್ಳಲ್ಪಟ್ಟಿತು. ಶಾಸ್ತ್ರಗಳ ಜೊತೆ ಖಾಯಿಲೆ ತರುವ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬರಹವೂ ತನ್ನ ಕೊಡುಗೆಯನ್ನು ಕೊಟ್ಟಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಂಡು ಹಿಡಿದ ಬರಹ ಮಾಧ್ಯಮ ಇತ್ತೀಚಿನವರೆಗೂ ಚಕ್ರವರ್ತಿಗಳು ಮತ್ತು ವ್ಯಾಪಾರಿಗಳು ತಮ್ಮ ಜ್ಞಾನಕ್ಕೆ ಬೇಕಾದಾದ್ದನ್ನೆಲ್ಲ ಬರಹದಲ್ಲಿ ಮೂಡಿಸುತ್ತಿದ್ದರು. ಇದು ಕೆಲವೇ ವರ್ಗದ ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿತ್ತು. ಬರಹ ಮಾಧ್ಯಮ ಇದ್ದದ್ದೇ ಗುಲಾಮರನ್ನು ಸೃಷ್ಟಿಸುವುದಕ್ಕಾಗಿ ಎಂಬ ಲೆವಿಸ್ತ್ರಾಸ್ ನ ವಾದವನ್ನು ಜೇರ್ಡ್ ಸಮರ್ಥಿಸುತ್ತಾನೆ.ಇತ್ತೀಚಿನವರೆಗೂ ಬರವಣಿಗೆ ಬುಡಕಟ್ಟು ಜನಾಂಗಕ್ಕೆ ಬೇಕಾಗಿರಲಿಲ್ಲ. ಏಕೆಂದರೆ ಅಲ್ಲಿ ಕೇಂದ್ರಿಕೃತ ಆಡಳಿತವಿರಲಿಲ್ಲ. ಆಯಾ ದಿನದ ಬದುಕು ಅಂದೇ ಚುಕ್ತವಾಗುತ್ತಿತ್ತು . ಆದರೆ ಬೇಸಾಯ ಸಂಸ್ಕೃತಿ ಸ್ತರೀಕೃತ ಸಮಾಜವನ್ನು ಸೃಷ್ಟಿಸಿತು . ವರ್ಷಪೂರ್ತ ದುಡಿಯ ಬೇಕಾಗಿರಲಿಲ್ಲ. ಆಹಾರ ಶೇಖರಣೆ ಬಿಡುವನ್ನು ಕೊಟ್ಟಿತು. ಅಲ್ಲದೆ ಸಂಕೀರ್ಣ ರಾಜಕೀಯ ಕೇಂದ್ರಗಳನ್ನು ಸೃಷ್ಟಿಸಿತು . ತಮ್ಮ ತಮ್ಮ ಭೂಮಿಯನ್ನು ತಾವು ಕಾಪಾಡಿಕೊಳ್ಳಲು ಯುಧ, ಯುದ್ಧಕ್ಕೆ ಆಯುಧಗಳು ಇತ್ಯಾದಿ ತಾಂತ್ರಿಕತೆ ಈ ಸ್ತರೀಕೃತ ಸಮಾಜದ ಮೂಲ ವೃತ್ತಿಗಳಾದವು. ಇವುಗಳ ಲೆಕ್ಕವನ್ನಿಡಲು ಬರಹ ಬೇಕಾಯಿತು.

ಈ ರೀತಿಯ ಆಯುಧಗಳೆಲ್ಲ ಯುರೋಪಿನಲ್ಲೇ ಏಕೆ ಬಂತು ? ಯುರೋಪ್ ಏಕೆ ಪ್ರಪಂಚದ ಇತರ ದೇಶಗಳನ್ನು ಗೆಲ್ಲಲು ಹೊರಟಿತು? ತಾಂತ್ರಿಕತೆ ಏಕೆ ಇಲ್ಲಿ ಅಭಿವೃದ್ಧಿ ಹೊಂದಿತು? ಆಫ್ರಿಕಾ, ಏಷ್ಯಾ ಖಂಡಗಳೇಕೆ ಯೂರೋಪನ್ನು ಗೆಲ್ಲಲಿಲ್ಲ? ಇವಕ್ಕೆಲ್ಲ ಆಯಾ ದೇಶಗಳ ರಾಜಕೀಯ ನಿಲುವುಗಳೇ  ಕಾರಣ ಎಂಬುದು ಜೇರ್ಡ್ ನ ವಾದ. ಯೂರೋಪಿಗೆ ಸೆಡ್ಡು ಹೊಡೆಯಬಹುದಾಗಿದ್ದ ರಾಷ್ಟ್ರ ಚರಿತ್ರೆಯಲ್ಲಿ ಚೀನಾ, ೧೪ನೆ ಶತಮಾನದಲ್ಲೇ ಸಮುದ್ರಯಾನದಲ್ಲಿ , ಸಿಡಿಮದ್ದಿನ ತಯಾರಿಕೆಯಲ್ಲಿ , ಯುದ್ಧ ಕಲೆಯಲ್ಲಿ ಯುರೋಪಿಗಿಂತ ಎಷ್ಟೋ ಶತಮಾನಗಳ ಹಿಂದೆಯೇ ಈ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡಿತ್ತು. ಚೀನಾದ ಯುದ್ಧದ ಹಡಗು ಒಮ್ಮೆ ಆಫ್ರಿಕ ದೇಶವನ್ನು ತಲುಪಿತ್ತು. ಆದರೆ ಚೀನಾದ ರಾಜಕೀಯ ನಿಲುವು ಯುದ್ಧವನ್ನು ನಿಯಂತ್ರಿಸುವುದಾಗಿತ್ತು ಮತ್ತು ಬೇರೆ ಬೇರೆ ದೇಶಗಳನ್ನು ಗೆಲ್ಲುವುದು ಆಗಿನ ಚೀನಾದ ರಾಜಕೀಯ ನಿಲುವಾಗಿರಲಿಲ್ಲ. ಅವರೇನಾದರೂ ತಮ್ಮ ನಿರ್ಧಾರವನ್ನು ವಿರುದ್ದ ರೀತಿಯಲ್ಲಿ ನಿರ್ಣಯಿಸಿದ್ದಾರೆ ಪ್ರಾಯಶಃ ಪ್ರಪಂಚದ ಇತಿಹಾಸ ಬೇರೆಯೇ ತರಹದ್ದಾಗಿರುತ್ತಿತ್ತು ಎಂಬುದು ಜೇರ್ಡ್ ನ ವಾದ.

ಅಂತೆಯೇ ಮಧ್ಯಯುಗದಲ್ಲಿ ಪ್ರಭಾವಶಾಲಿಯಾಗಿದುದ್ದು  ಅರಬ್ ದೇಶಗಳು. ಯುದ್ದ ಸಾಮಗ್ರಿಗಳ ತಾಂತ್ರಿಕತೆ ಇಲ್ಲೂ ಬೆಳೆದಿತ್ತು. ಆದರೆ ಧರ್ಮದ ಕೈ ಮೇಲಾದಾಗ ತಾಂತ್ರಿಕತೆ ಜ್ಞಾನ ಹಿಂದೆ ಬಿಟ್ಟು. ಅತ್ಯಂತ ಹೆಚ್ಚಿನ ಸಾಕ್ಷರತೆ ಇದ್ದ ಅರಬ್ ದೇಶಗಳು ಹಿಮ್ಮುಖ ಚಲನೆ ಪಡೆದವು ಎಂಬುದನ್ನು ಜೇರ್ಡ್ ವಿಶ್ಲೇಷಿಸುತ್ತಾನೆ.

ಆದ್ದರಿಂದ ಜೇರ್ಡ್ ನ ಪ್ರಾಕಾರ ಯುರೋ ಕೇಂದ್ರಿತ ರಾಜ್ಯಗಳ ರಾಜಕೀಯ ನಿಲುವು ಅಲ್ಲಿಯ ವಿಜ್ಞಾನ, ತಾಂತ್ರಿಕತೆ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ. ಮತ್ತೆ ಇದರ ಮೂಲ ಸ್ತಂಭ ಆಹಾರ ಉತ್ಪಾದನೆ.

ಜೇರ್ಡ್ ಪ್ರಪಂಚದ ಯಾವುದೇ ಜನಾಂಗವು ಬುದ್ದಿ ಮಾತ್ತೆಯಲ್ಲಿ ಹಿಂದೂ-ಮುಂದು ಎಂಬುದಿಲ್ಲ. ಬುದ್ದಿವಂತಿಕೆ ಎಲ್ಲಾ ಮಾನವರಲ್ಲೂ ಒಂದೇ ಸಮನಾಗಿರುತ್ತದೆ. ಇದು ವರ್ಗ, ವರ್ಣ, ಇದನ್ನು ಅವಲಂಬಿಸಿಲ್ಲ. ವೈವಿಧ್ಯ ಬದುಕು ಬುದ್ದಿವಂತಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತದೆ . ಅದು ಅಮೆರಿಕಾದವರಿರಬಹುದು ಅಥವಾ ಬುಡಕಟ್ಟು ಜನಾಂಗದವರಿರಬಹುದು, ಎಲ್ಲರಲ್ಲೂ ಬುದ್ದಿಮತ್ತೆ ಅಷ್ಟೇ ತೀಕ್ಷ್ಣವಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳುವುದು ಬಹಳ ಮುಖ್ಯವಾದ ಅಂಶ.

ಮಾನವನ ಇತಿಹಾಸದಲ್ಲಿ ಅತ್ಯಂತ ವೇಗದ ಬದಲಾವಣೆ ಕಂಡು ಬಂದದ್ದು ಕ್ರಿ.ಶ.೧೫ನೆ ಶತಮಾನದಿಂದ ಈಚೆಗೆ. ಅಲ್ಲಿಯವರೆಗೆ ಆತನ ಸಾಧನಗಳು ಮತ್ತು ಅವುಗಳ ಬದಲಾವಣೆ ನಡೆದದ್ದು. ಬಹಳ ನಿಧಾವಾಗಿ ಕಲ್ಲಿನ ಆಯುಧದಿಂದ ಆಧುನಿಕ ಅಣು ಬಾಂಬ್ ಗೆ ಬೆಳೆದು ಬಂದ ತಾಂತ್ರಿಕತೆಯ ಕಾರಿತ್ರೆ ಇವನ್ನು ಸ್ಪಷ್ಟಪಡಿಸುತ್ತದೆ. ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಖನಿಜಗಳಿಗೆ ಕೊರತೆ ಇಲ್ಲದಿದ್ದರೂ ಸುಮಾರು ಹದಿನೆಂಟನೆಯ ಶತಮಾನದವರೆಗೆ ಅದರ ಬಳಕೆ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿಗೆ ಗೊತ್ತೇ ಇರಲಿಲ್ಲ. ಅದೆಲ್ಲ ಬಿಳಿಯರ ಪಾಲಾಯಿತು, ನಂತರದಲ್ಲಿ.

ಜೇರ್ಡ್ ಡೈಮಂಡ್ ನ ವಾದವೆಂದರೆ ಮನುಷ್ಯನ ಅಸಮಾನತೆಗೆ ಭೂಗುಣ, ಆಹಾರ ಉತ್ಪಾದನಾ , ಹವಾಮಾನ ಮೂಲ ಸೂತ್ರ. ಇದರ ಫಲಿತಾಂಶವೇ ಬಂದೂಕುಗಳು, ಖಾಯಿಲೆಯ ಸೂಕ್ಷ್ಮಾಣು ಜೀವಿಗಳೂ ಮತ್ತು ಉಕ್ಕು. ಈ ಮೂರು ಯೂರೋಪಿಯನ್ನರ ಪ್ರಮುಖ ಅಸ್ತ್ರಗಳಾದವು.

ಈ ರೀತಿಯ ನಿಲುವಿಗೆ ಆತ ಬರಲು ಪ್ರಮುಖ ಕಾರಣ ಪಾಪುವಾ ನೂಗಿನಿಯಾದ ಬುಡಕಟ್ಟು ಜನಾಂಗದ ಯಾಲಿ. ಈ ಪುಸ್ತಕ ರಚನೆಗೆ ಜೇರ್ಡ್ ಮೂವತ್ತು24 ಮೂರು ವರ್ಷಗಳನ್ನು ಮುಡುಪಾಗಿಡಬೇಕಾಯಿತು. ಅಲ್ಲದೆ ಇಡೀ ಪ್ರಪಂಚವನ್ನು ಸುತ್ತಿ ವಿವಿಧ ಜನಾಂಗಗಳ ಅಧ್ಯಯನವನ್ನು ವಿವಿಧಶಾಸ್ತ್ರಗಳ ಅಂತರಶಾಸ್ತ್ರೀಯ ಜ್ಞಾನದಿಂದ ಪುರಾವೆ ಸಮೇತ ಮುಂದಿಟ್ಟ. ಈ ಕೃತಿಗೆ ಅನೇಕ ಬಹುಮಾನಗಳನ್ನು ಪಡೆದ ಜೇರ್ಡ್ ಡೈಮಂಡ್ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೂಗೊಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾನೆ. ಈ ಕೃತಿಗೆ ಬಂದ ಪ್ರುಮುಖ ಬಹುಮಾನವೆಂದರೆ ಪ್ರತಿಷ್ಟಿತವಾದ ಪುಲ್ತ್ಜರ್ ಅವಾರ್ಡ್. ಈತನ ಇನ್ನೊಂದು ಪ್ರಮುಖ ಕೃತಿ ಎಂದರೆ ದಿ ಥರ್ಡ್ ಚಿಂಪಾಂಜಿ(೨೦೦೪). ಇದಕ್ಕೆ ಮೆಕಾರ್ಥರ್ ಬಹುಮಾನ ಬಂದಿದೆ. ಈ  ಕೃತಿಗಳನ್ನು ಈತ ಅತ್ಯಂತ ಕಳಕಳಿಯಿಂದ ರೇಸಿಸ್ಟ್ ಚರಿತ್ರೆಯನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನ ಚರಿತ್ರೆಯನ್ನೂ ಕೇಂದ್ರ ಮಾಡಿಕೊಂಡು ರಚಿಸಿದ್ದಾನೆ . ಚರಿತ್ರೆಗ್ ಒಂದು ವೈಜ್ಞಾನಿಕ ತಿರುವನ್ನು ನೀಡಿದ್ದಾನೆ.

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

Tingalu – August 2009

೧೯೮೩ ರ ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಾಲ್ಕು ವಾರಗಳ ಕಾಲ’ ಸಂಜ್ಞಾಶಾಸ್ತ್ರ ಮತ್ತು ಸಂರಚನವಾದ ‘ದ ಅಂತರ್ರಾಷ್ಷ್ಟ್ರೀಯ ಶಿಬಿರ ಏರ್ಪಟಿಸಿತ್ತು . ವಿಶ್ವದ ದಿಗ್ಗಜ ಭಾಷಾಶಾಸ್ತ್ರಜ್ಞರು ಬಂದಿಳಿದ್ದಿದ್ದರು . ಅಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಿತ್ತು . ನಮ್ಮಂಥ ಕಿರಿಯರಿಗೆ ಬೌದ್ಧಿಕ ಹಬ್ಬ . ೮೦ ವರ್ಷದ ಋಷಿ ಸದೃಶ ಅಮೇರಿಕಾದ ಡೇವಿಡ್ ಸಾವನ್ , ಜರ್ಮನಿಯ ರೋಲಾನ್ಡ್ ಪೋಸ್ನರ್ . ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯದ ಪಾಲ್  ಬ್ಯುಸ್ಸಾಕ್ , ಫ್ರಾನ್ಸಿನ ಕ್ರಾಮವೆಲ್, ಭಾರತದ ಅಶೋಕ ಕೇಲ್ಕರ್ , ಆರ್ .ಏನ್ .ಶ್ರೀವಾಸ್ತವ ಮುಂತಾದ ವಿದ್ವಾಂಸರ ಸಂಗಮವಾಗಿತ್ತು . ಇವರೆಲ್ಲರ ಜೊತೆಯಲ್ಲಿ ನಾವು ಬಹುನಿರೀಕ್ಷೆಯಲ್ಲಿದ್ದ ಮತ್ತೊಬ್ಬ ವಿದಾಂಸ ಫ್ರಾನ್ಸಿನ ಮಿಶೆಲ್ ಫುಕೋ ಬರಬೇಕಿತ್ತು. ಅವರು ಬುದ್ದಿಜೀವಿಗಳಲ್ಲೆಲ್ಲ ಅಗ್ರಗಣ್ಯರೆಂದು ಮಾನ್ಯರಾದವರು. ಅಮೇರಿಕಾದಲ್ಲಿ ಅವರ ಉಪನ್ಯಾಸಕ್ಕಾಗಿ ಅಕ್ಷರಶಃ ಸಾವಿರಾರು ಮಂದಿ ನೆರೆಯುತ್ತಿದ್ದರಂತೆ. ಅವರ ಬರುವಿಗಾಗಿ ಕಾಯುತ್ತಿದ್ದ ನಮಗೊಂದು ಆಘಾತಕರ ಸುದ್ದಿ ತಲುಪಿತು .

f1ಫುಕೋ ಬರುವುದಿಲ್ಲವಂತೆ, ಅವರಿಗೆ ಏಡ್ಸ್ ಸಂಬಂಧಿ ರೋಗ ತಗುಲಿದೆ ಅಂಬಾ ಸುದ್ದಿ, ಇದಾದ ಕೇವಲ ಆರು ತಿಂಗಳಿಗೆ ಅವರು ತೀರಿಕೊಂಡರೆಂಬ ಸುದ್ದಿ ತಲುಪಿತು. ಕೊನೆಗೂ  ನಮಗೇ ಅವರನ್ನು ನೋಡುವ, ಕೇಳುವ ಭಾಗ್ಯ ಸಿಗಲೇ ಇಲ್ಲ. ಈ ಮಿಶೆಲ್ ಫುಕೋ ಕೊನೆಯ ಉಸಿರೆಳೆದದ್ದು ೨೫ ಜೂನ್ ೧೯೮೪. ಒಂದು ಸಾಹಿತ್ಯಕೃತಿ ಎಂದರೆ ಅದು ತನ್ನೊಳಗೆ ಅರ್ಥವನ್ನು ಸೃಷ್ಟಿಸುವ ಪುಸ್ತಕವಲ್ಲ. ಅದು ಶುದ್ಧವಾದ ಪ್ರಜ್ಞೆಯನ್ನು ಮುಗ್ದವಾಗಿ ಹುದುಗಿಸಿಕೊಂಡಿರುವ ಪ್ರಪಂಚವಲ್ಲ. ಅದೊಂದು ಸಂಕೀರ್ಣ ಸಂಸ್ಕೃತಿಯ ಸಂದರ್ಭದಲ್ಲಿ ಹುಟ್ಟುವ ನೈಜಕ್ರಿಯೆ. ಅದನ್ನು ಹೇಗೆ ಸರಿಯಾಗಿ, ತಪ್ಪಾಗಿ ಓದುತ್ತೇವೆ ಅಥವಾ ಓದುವುದಿಲ್ಲ ಎಂಬುದು ಆ ಕ್ರಿಯೆಯ ಭಾಗ. ಯಾವ ಪಠ್ಯವೂ  ಅ-ರ್ರಾಜಕೀಯವಾಗಿರುವುದಿಲ್ಲ ಎಂದು ವಿಶ್ಲೇಷಿಸಿ ತೋರಿಸಿದವನು ಫುಕೋ . ಮಾನಸಿಕ ಅಸ್ವಸ್ಥತೆ ಭಾಷೆಯಲ್ಲಿ ಘಟಿಸುವ ಒಂದು ಅನುಭವ. ಮನುಷ್ಯನ ಸ್ವಭಾವಕ್ಕೆ ನಿಯಮಕ್ಕೆ ಮುಖಾಮುಖಿಯಾಗುವ ಕ್ರಿಯೆ. ಆದರೆ ಈ ಭಾಷೆಯನ್ನೂ ನಾವು ಕೇಳಿಸಿಕೊಂಡೆ ಇಲ್ಲ. ‘ಪ್ರತಿಯೊಬ್ಬ ಮನುಷ್ಯನೂ ಒಂದು ರೀತಿಯಲ್ಲಿ ಮಾನಸಿಕವಾಗಿ ಅಸ್ವಸ್ತನೆ. ನೂರಕ್ಕೆ ನೂರರಷ್ಟು ಸಹಜ ಸ್ಥಿತಿಯನ್ನು ಪಡೆಯುವ ಯತ್ನವೇ ಹುಚ್ಚುತನದ್ದು ಎಂದು ತನ್ನ ಮೊದಲ ಮೇರು ಕೃತಿ ‘ಡಿ ಹಿಸ್ಟರಿ ಆ ಮ್ಯಾಡ್ನೆಸ್ಸ್’ (೧೯೬೧)ನಲ್ಲಿ ವಿಶ್ಲೇಷಿಸಿದ್ದಾನೆ . ಇದು ‘ಜಾಣಹುಚ್ಚಾ’ಜಿ ಪರಿವರ್ತಿತವಾಗಿರುವದು ಕಲೆಯಲ್ಲಿ. ಭಾಷೆ ಅ -ಕಾರಣ ಬಡಬಡಿಕೆ ಎಂದು ತಿಳಿದರೆ ಅದು ಸಕಾರಣವಾಗಿದ್ದರೆ – ಸ್ವಾಭಾವಿಕ ಭಾಷೆ ಎಂದು ತಿಳಿಯುತ್ತೇವೆ.

ಚರಿತ್ರೆಯಲ್ಲಿ ‘ಹುಚ್ಚುದೊರೆ’ ಎಂದು ಕರೆಸಿಕೊಂಡಿದ್ದ ತುಘಲಕ್ ನಾಟಕದಲ್ಲಿ ಅತ್ಯಂತ ಕ್ರಿಯಾಶೀಲನಾದ, ಮಾದರಿ ರಾಜ್ಯವನ್ನು ಕಟ್ಟುವು ಹಂಬಲವುಳ್ಳ -ಆದರೆ ಅದರಲ್ಲಿ ಸೋಲುವ ಆತನ ಘನತೆ ಹೆಚ್ಚುವಂತೆ ಗಿರೀಶ್ ಕಾರ್ನಾಡ್ ಮಾಡಿದ್ದಾರೆ. ಇದು ಸಾಧ್ಯವಾಗಿರುವುದು ಕಾರ್ನಾಡರು ತುಘಲಕ್ನ ‘ಹುಚ್ಚು ಆಲೋಚನೆ’ಗೆ ಸಕಾರಣ ಸಂದರ್ಭವನ್ನು ಒದಗಿಸುವುದರಿಂದ .

ಇದೇ ರೀತಿ ಕಂಬಾರರು ಸಿರಿಸಂಪಿಗೆಯಲ್ಲ ದೇಹ ಮತ್ತು ಆತ್ಮದ ವಿಘಟನೆಯಿಂದಾಗುವ ಸಂವಾದವನ್ನು ಬೆಳೆಸಿದ್ದಾರೆ. ಆತ್ಮದ ಭಾಷೆ ಹುಚ್ಚನ ಭಾಷೆಯಂತೆ ಕಂಡುಬರುತ್ತದೆ. ತನ್ನ ತಾಯಿಯಿಂದ ಹಿಡಿದು ಎಲ್ಲರಿಗೂ ಅರ್ಥವಾಗದ ಕ್ರಿಯೆಯಾಗಿ ಭಾಷೆ ಅಭಿವ್ಯಕ್ತಗೊಂಡಿದೆ. ನಾಟಕದ ಕೊನೆಯಲ್ಲಿ ಈ ವಿಘಟನಾ ಭಾಷೆಗೆ ಅರ್ಥ ಸಿಕ್ಕಿ , ಅದುವರೆವಿಗೂ ಕಗ್ಗಂಟಾಗುವ ಭಾಷೆ ಸಾಮಾನ್ಯ ಭಾಷೆಯಾಗಿ ಕಾಣುತ್ತದೆ. ಅ -ಕಾರಣವಾದ ಭಾಷೆ ಸಕಾರಣ ಭಾಷೆಯಾಗಿ ಪರಿವರ್ತಿತವಾಗುತ್ತದೆ. ಇದೇ ರೀತಿ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ‘ಮೂಕಜ್ಜಿಯ ಭಾಷೆ’ ಸಕಾರಣ ಭಾಷೆಯಾಗುತ್ತದೆ. ಆದ್ದರಿಂದ ‘ಹುಚ್ಚು ‘ ಎನ್ನುವುದು ಭಾಷೆಯಲ್ಲೇ ಆಗುವ ಅನುಭವವೆಂದು ಫುಕೋ ವಿಶ್ಲೇಷಿಸುತ್ತಾನೆ. ಮನುಷ್ಯ ತನ್ನ ಸ್ವಭಾವದ ನಿಯಮವನ್ನು ಯಾವಾಗಲಿ ಎದುರಿಸುತ್ತಿರುತ್ತಾನೆ. ಈ ನಿಯಮಾವಳಿಯಲ್ಲಿ ನಡೆಯುವ ತುಮುಲದಲ್ಲಿ ಹುಚ್ಚುತನ ತನ್ನ ಬಿಲ್ಲು ಬಾಣಗಳನ್ನು ಬತ್ತಳಿಕೆಯೊಳಗೆ ಇಟ್ಟುಕೊಂಡು ಬಿಟ್ಟಿತ್ತು . ‘ಹುಚ್ಚುತನ’ ಎಂಬುದು ಆಯಾ ಸಮಾಜದ, ಸಂಸ್ಕೃತಿಯ ವ್ಯಾಖ್ಯಾನವಾಗಿರುತ್ತದೆ. ೧೯ನೆ ಶತಮಾನದ ಆರಂಭದ ತನಕ ಮನುಷ್ಯ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ನೋಡುತ್ತಿರಲಿಲ್ಲ. ಆದ್ದರಿಂದ ಫ್ರಾನ್ಸಿನಲ್ಲಿ ಹುಚ್ಚರನ್ನು ಹಿಡಿದು ಹಡಗನ್ನು ಹತ್ತಿಸಿ ಹತ್ತಿರದ ದ್ವೀಪಗಳಲ್ಲಿ ಬಿಟ್ಟು ಬರುತ್ತಿದ್ದರಂತೆ. ಮನುಷ್ಯ ನಾಗರೀಕನಾಗಿ ಅಭಿವೃದ್ದಿ ಹೊಂದುತ್ತಾಹೊಂದುತ್ತಾ ಪ್ರಕ್ರುತ್ಯಿಂದ ದೂರವಾಗಿದ್ದೆ ಇದಕ್ಕೆ ಕಾರಣ ಎನ್ನುತ್ತಾನೆ. ಫುಕೋ ಅಲ್ಲದೆ ಧರ್ಮ ಎನ್ನುವುದು(ಅದರಲ್ಲೂ ಕ್ರಿಶ್ಚಿಯನ್ ಧರ್ಮ) ಮನುಷ್ಯನನ್ನು ತಪ್ಪೊಪ್ಪಿಗೆ ಒಯ್ಯುವ ಪ್ರಾಣಿಯನ್ನಾಗಿಸಿತು ಎಂದು ವಿಶ್ಲೇಷಿಸಿದ್ದಾನೆ.

ಸಾಹಿತ್ಯವು ವ್ಯಾಕರಣದ ನಿಯಮದಿಂದ ಭಾಷೆಯನ್ನೂ ನಗ್ನ ಸತ್ಯದ ಕಡೆಗೆ ಕೊಂಡೊಯ್ಯಲು ತುಡಿಯುತ್ತಿರುವ ಶಕ್ತಿ. ಅದು ಇನ್ನೂ ಪಳಗಿಸದ ಅನುಭವದೊಡನೆ ಗುದ್ದಾಡುತ್ತಿರುತ್ತದೆ. ಪ್ರತಿ ಪಟ್ಯ ರಚನೆಯಾಗುವಾಗಲು ಈ ಗುದ್ದಾಟ ಗೋಚರಿಸುತ್ತರಿತ್ತದೆ ಎಂದು ಬಾಲ್ಜಾಕ್, ಟಾಲ್ಸ್ಟಾಯ್ ಇವರ ಕೃತಿಗಳ ವಿಶ್ಲೇಷಣೆಯಿಂದ ತೋರಿಸಿಕೊಟ್ಟಿದ್ದಾನೆ ಫುಕೋ.

ಜ್ಞಾನದ ಉತ್ಖನನ ಹೊಸ ಚಾರಿತ್ರಿಕತೆ:

ಫುಕೋ ಮೂರನೇ ತರಗತಿಯಲ್ಲಿದ್ದಾಗ ತನ್ನ ಟೀಚರನ್ನು ‘ಗುಟ್ಟಾದ ಜ್ಞಾನ’ ಅಂದರೇನು ಎಂದು ಪ್ರಶ್ನಿಸಿದ್ದ. ಅದಕ್ಕೆ ‘ಈಗ ನಿನಗೆ ಅದು ಅರ್ಥವಾಗುವುದಿಲ್ಲ. ಹೈಸ್ಕ್ಕೂಲಿಗೆ ಹೋದಾಗ ಗೊತ್ತಾಗುತ್ತದೆ’ ಎಂಬ ಉತ್ತರ ಬಂದಿತ್ತು. ಹೈಸ್ಕ್ಕೂಲಿನಲ್ಲಿ ಕೇಳಿದಾಗ ಕೊನೆ ವರ್ಷದಲ್ಲಿ ಗೊತ್ತಾಗುತ್ತದೆ ಎಂಬ ಉತ್ತರ ಬಂತು. ಅಲ್ಲೂ ಅವನಿಗೆ ಗೊತ್ತಾಗಲಿಲ್ಲ. ಕಾಲೇಜಿನಲ್ಲಿ ಕೇಳಿದಾಗ ‘ದರ್ಶನ ಶಾಸ್ತ್ರ’ ಓದು ಆಗ ಗೊತ್ತಾಗುತ್ತದೆ ಎಂದರು . ಹೀಎಗೆ ಜ್ಞಾನದ ಮೂಲ ಏನು ಎಂಬ ಪ್ರಶ್ನೆ ಅವನನ್ನು ಜೀವಮಾನವಿಡೀ ಕಾಡಿತು. ಅದಕ್ಕಾಗಿ ಆಟ ಹುಡುಕಾಡತೊಡಗಿದ. ಇದರ ಪರಿಣಾಮವೇ ಆಟ ನಡೆಸಿದ್ದು ‘ಜ್ಞಾನದ ಉತ್ಖನನ’ವನ್ನು ಮನುಷ್ಯ ನಡೆಸಿಕೊಂಡು ಬಂದ ಜ್ಞಾನದ ಬೆಳವಣಿಗೆಯ ದಾರಿಯನ್ನು ಹುಡುಕಾಡತೊಡಗಿದ. ಇದರ ಪರಿಣಾಮವಾಗಿ ಆತ ರಚಿಸಿದ ಪುಸ್ತಕ ‘’.

f2ಚರಿತ್ರೆಯ ಸೃಷ್ಟಿಯಲ್ಲಿ ಮನುಷ್ಯನ ಪಾತ್ರವೇನು ಎಮ್ಬ ಪ್ರಶ್ನೆಯನ್ನು ಫುಕೋ ಹಾಕಿಕೊಂಡ. ಮಾಮೂಲಿ ‘ಚರಿತ್ರೆ’ಯಾ ಪರಿಕಲ್ಪನೆಯು ಕೆಲವು ಸಮಸ್ಯೆಗಳನ್ನು ಒಡ್ಡಿದವು. ಮೊದಲನೆಯದು ಕಾಲಕ್ರಮನಿಕೆಯಲ್ಲಿ ಬಿಡಿಬಿಡಿಯಾಗಿ ಘಟನೆಗಳ ಸರಮಾಲೆ ಎಂದು ವಿಂಗಡಿಸುವುದು. ಅದರಲ್ಲಿ ಒಂದಕ್ಕೊಂದು ಸಂಬಧವನ್ನು ಕಾಣದಿರುವುದು. ಈ ಚರಿತ್ರೆಕಾರನು ಅಸಂಬದ್ಧ ಘಟನೆಗಳನ್ನು ಸುಸಂಬದ್ದ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾನೆ. ಅಂದರೆ ಕಾರ್ಯಕಾರಣೀ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸುತ್ತ್ತಾನೆ. ಅದು ಯಾವ ವಿನ್ಯಾಸದಲ್ಲಿ ವಿಶ್ಲೇಷಿಸಲ್ಪಡಬೇಕೆಂದು ಹುಡುಕಾಟ ನಡೆಸುತ್ತಾನೆ. ಅಂದರೆ ನಿರಂತರತೆಯನ್ನು ಗುರುತಿಸುವ ಪರಿಪಾಟಲಲ್ಲಿ ತೊಡಗುತ್ತಾನೆ.

ಫುಕೋ ಕಾಲಕ್ರಮನಿಕ ಚರಿತ್ರೆಯು ಚಾರಿತ್ರಿಕ ಅರ್ಥ, ಲೋಕದೃಷ್ಟಿ , ನಾಗರೀಕತೆ ಇವುಗಳನ್ನು ಏಕಕೇಂದ್ರದಲ್ಲಿ ಬಂಧಿಸಲು ಪ್ರಯತ್ನಿಸುತ್ತದೆ. ಇದನ್ನು ಮಹಾಯುಗಗಳಾಗಿ ವಿಭಾಗಿಸಿ ನೋಡಲು ಪ್ರಯತ್ನಿಸುತ್ತದೆ.ಆರ್ಥಿಕ , ರಾಜಕೀಯ, ಸಾಂಸ್ಕೃತಿಕ ಮುಂತಾದ ಚರಿತ್ರೆಗಳನ್ನೆಲ್ಲ ಒಂದೇ ಚೀಲದಲ್ಲಿ ತುರುಕಲು ಪ್ರಯತ್ನಿಸುತ್ತದೆ ಎಂದು ವಿಶ್ಲೇಷಿಸಿದ. ಆದ್ದರಿಂದ ಚರಿತ್ರೆ ಘಟನಾವಳಿಗಳ ಚರಿತ್ರೆಯಾಗಬಾರದು. ಚರಿತ್ರೆಯು ಮಾನವನ ಮನಸ್ಸಿನ ಚರಿತ್ರೆಯಾಗಬೇಕು. ಆ ಚರಿತ್ರೆ ಕಾಲಾನುಕ್ರಮದ ಬೆಳವಣಿಗೆಯಲ್ಲಿ ಸಿಗುವುದಿಲ್ಲ. ನಾವೆಲ್ಲಾ ಈಗ ಬರೆದಿರುವುದು ಅಕ್ಷರ ಬಲ್ಲವರ ಚರಿತ್ರೆ, ಅಕ್ಷರದಲ್ಲಿ ಹಿಡಿದಿಟ್ಟಿಲ್ಲದ ಚರಿತ್ರೆ ಅಕ್ಷರ ಚರಿತ್ರೆಗಿಂತ ಎಷ್ಟೋ ಪಟ್ಟು ದೊಡ್ಡದು. ಇದನ್ನು ಅರಿಯಬೇಕಾದರೆ ಮತ್ತೆ ನಾವು ಕಥಾನಕಗಳಿಗೆ ಮರಳಬೇಕು. ವಿವಿಧ ಕೇಂದ್ರಗಳಲ್ಲಿ ನಿಂತು ನೋಡಿದಾಗ ಒಂದೇ ಘಟನೆಗೆ ವಿವಿಧ ಅರ್ಥ , ಲೋಕದೃಷ್ಟಿ , ಸ್ಥಾನ ಇರುತ್ತವೆ ಎಂದು ವಿಶ್ಲೇಷಿಸಿದ . ಅದಕ್ಕಾಗಿ ಅವನು ‘ಜ್ಞಾನದ ಉತ್ಖನನ’ ಎಂದು ಕರೆದ. ಇದರ ಪರಿಣಾಮವೇ ಎಡ್ವರ್ಡ್ ಸೈದನ ‘ಒರಿಯಂಟಲಿಸಂ’ ಭಾರತದಲ್ಲಿ ದಮನಿತರ (ಸಬಾಲ್ಟ್ರನ್) ಅಧ್ಯಯನ ಪ್ರಾರಂಭವಾಯಿತು . ಪ್ರಪಂಚದಲ್ಲಿರುವ ಅನಂತ ಪಟ್ಯಗಳ ವಿವಿಧ ಧ್ವನಿಗಳು ಕೇಳಿಸಲು ಪ್ರಾರಂಭವಾಯಿತು. ಈತ ಸಾವರ್ತಿಕತೆಯನ್ನು ತಿರಸ್ಕರಿಸಿ ಸ್ಥಳೀಯತೆಯನ್ನು ಅರಿವಿನ ಮುಂಚೂಣಿಗೆ ತಂದುಕೊಟ್ಟನು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಒಂದು ಉತ್ತಮ ಉದಾಹರಣೆ. ಇಲ್ಲಿ ಮರುಳು ಮೂಕಜ್ಜಿ ಕೊಡುವ ಚರಿತ್ರೆ ದಿನಾಂಕಗಳುಳ್ಳ, ಬೆಳವಣಿಗೆಯ ಇತಿಹಾಸವಲ್ಲ. ಇಲ್ಲಿ ಸಾಮಾಜಿಕ , ಆರ್ಥಿಕ, ಸಾಂಸ್ಕೃತಿಕ, ಲೈಂಗಿಕ ನಡಾವಳಿಯ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಹೆಚ್ಚು ಕಡಿಮೆ ಹೆಣ್ಣಿನ ಲೈಂಗಿಕಾತ್ಮತೆಯ ಚರಿತ್ರೆಯಂತೂ ಒಂದು ರೀತಿಯಲ್ಲಿ ರೂಪಕಾತ್ಮಕವಾಗಿ ಮರಳಿ ಮರಳಿ ಬರುವ ಸಾಂಕೇತಿಕವಾಗಿದೆ. ಆದಿಮಾನವ ಇನ್ನೊಂದು ಬಳಿಯಿಂದ ಹೊತ್ತುತಂದ ಹೆಣ್ಣಿನ ಲೈಂಗಿಕಾತ್ಮತೆಗೂ , ಸುಬ್ಬರಾಯನ ಸ್ನೇಹಿತನ ಜನ್ನನ ಲೈಂಗಿಕಾತ್ಮತೆಗೂ ವ್ಯತ್ಯಾಸವೇನಿಲ್ಲ. ಅಂದಿನ ಹೆಣ್ಣಿಗೆ ಅಲಂಕಾರಕ್ಕೆ ಇದ್ದ ಒಡವೆಯ ಆಸೆ ಇಂದಿನ ಹೆಣ್ಣಿನಲ್ಲೂ ಹುದುಗಿರುವುದು ಕಾಲದಿಂದಲೂ ಬಂದಿದ್ದೆ. ರಾಜಕೀಯ ಶಕ್ತಿಯಿಂದ, ಬಲಪ್ರಯೋಗದಿಂದ ಬದಲಾಗುತಿದ್ದ ಒಂದನ್ನು ಮೆಟ್ಟಿ ಇನ್ನೊಂದನ್ನು ಸ್ಥಾಪಿಸುವುದು. ನಾಗಿ ಲೈಂಗಿಕ ದೌರ್ಜನ್ಯ ಒಳಗಾಗುವುದು. ಆದರೂ ಅವಳ ಗಂಡ ರಾಮಣ್ಣ ಅವಳನ್ನು ಪ್ರೀತಿಸುವುದು, ಲೈಂಗಿಕತೆಯ ಅನುಭವದಿಂದ ವಂಚಿತಳಾಗೆ ಉಳಿಯುವ ಮೂಕಜ್ಜಿ. ಈ ಎಲ್ಲ ಚರಿತೆಯೂ ಮನುಷ್ಯನ ಇತಿಹಾಸದ ಚರಿತ್ರೆಯಾಗಿ ರೂಪುಗೊಳ್ಳುವುದು .ಮತ್ತು ಮೂಕಜ್ಜಿ ಮೂಲಕ ಇತಿಹಾಸದ ಒಡಪು ಬಿಚ್ಚಿಕೊಳ್ಳುವುದು. ಇವೆಲ್ಲ ದಿನಾಂಕ ಕಾರ್ಯಾ-ಕಾರಣಿ ಸರ್ಪಲಿಯುಲ್ಲ ಚರಿತ್ರ್ಯಲ್ಲ. ಇಲ್ಲಿ ಕಾರಂತರು ನಡೆಸುತ್ತಿರುವದು ಮನಸ್ಸಿನ ಚರಿತ್ರೆ. ಇದನ್ನೇ ಫುಕೋ ‘ಜ್ಞಾನದ ಉತ್ಖನನ’ ಎಂದು ಕರೆಯುವುದು.

ಇಲ್ಲಿ ಮತ್ತೊಂದು ಮಹತ್ವ ಪೂರ್ಣ ಅಂಶವೆಂದರೆ ಮೂಕಜ್ಜಿಯನ್ನು ‘ಮರುಳು’ ಎಂದು ಊರಿನ ಜನರೆಲ್ಲಾ ಭಾವಿಸುವುದು . ಆದರೆ ಆ ‘ಮರುಳಿ’ಗೆ ಅರ್ಥ ಸಿಗುವುದು ಮೂಕಜಿ ಮತ್ತು ಅವಳ ಮೊಮ್ಮಗ ಸುಬ್ಬರಾಯ ಇಬ್ಬರೀ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಳು ಇಲ್ಲಿ ಯತ್ನಿಸುವುದು. ಅವಾಸ್ತವಿಕವೆನಿಸುವ ಅಜ್ಜಿ, ಅನೇಕ ವಾಸ್ತವಿಕ ಇತಿಹಾಸಾಮ್ಶಗಳನ್ನು ತನ್ನ ಒಳದಿಳಿವಿನಿಂದ ನಮ್ಮ ಮುಂದಕ್ಕೆ ಇರಿಸುವುದು.

ತಂತಮ್ಮ , ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನ ಕಥೆಯೂ ಇಲ್ಲಿದೆ. ಆದ್ದರಿಂದಾಗಿ ಇಂದಿನ

ನಮಗೆ ಕೇಳಿಸದೆ ಹೋದ ಕೆಲವು ಯಾತನೆಯ ಧ್ವನಿಗಳನ್ನು ಕೇಳುವಂತೆ ಮಾಡುತ್ತವೆ. ಈ ಮಾತುಗಳು ಫುಕೋನ ಹೊಸ ಚಾರಿತ್ರಿಕತೆಗೆ ಸಂವಾದಿಯಾದ ಮಾತುಗಳು. ಅಲ್ಲದೆ ಸತ್ಯಕ್ಕೆ ಒಂದು ಮುಖದಲ್ಲಿರಿವುದಿಲ್ಲ. ನಾನ ಮುಖಗಳಿರುತ್ತವೆ ಎಂಬ ಪ್ರಮುಖ ಅರಿವನ್ನು ತಂದುಕೊಡುತ್ತದೆ.

ಸಂವಾದ ಅಧಿಕಾರ ಮತ್ತು ಜ್ಞಾನ                                                                                                    

ನಾವು ಈ ಕಾಲದಲ್ಲಿ ನಿಂತು ನಡೆಸುವ ಅನುಸಂಧಾನವೆಲ್ಲ ಒಂದರ್ಥದಲ್ಲಿ ಭೂತಕಾಲದೊಡನೆ ನಡೆಸುವ ಸಂವಾದವೇ ಆಗಿರುತ್ತದೆ. ಆದ್ದರಿಂದ ಇಲ್ಲಿ ಸಂವಾದ ಎಂದರೆ ಪರಂಪರೆ ಎಂದೇ ತಿಳಿಯಬಹುದು.

ಅಧಿಕಾರ ಅಥವಾ ಪ್ರಭುತ್ವ ಎಂಬುದು ಅರಮನೆಯಲ್ಲೋ, ವಿಧಾನ ಸೌಧದಲ್ಲೋ , ಲೋಕಸಭೆಯಲ್ಲೋ ಕೇಂದ್ರೀಕೃತವಾಗಿರುವುದಿಲ್ಲ. ಅದು ಒಂದು ರೀತಿಯಲ್ಲಿ ಸರ್ವಾಂತರ್ಯಾಮಿ ಎಂದು ಫುಕೊಗೆ ವಿಶ್ಲೇಷಿಸುತ್ತಾನೆ. ಅಧಿಕಾರ ಗದ್ದುಗೆ ಏರುವುದರಲ್ಲಿ ಇಲ್ಲ. ಅದನ್ನು ನಿಭಾಯಿಸುವುದರಲ್ಲಿ ಮೇಲೆ ನಿಂತಿರುತ್ತದೆ. ಎಲ್ಲಾ ಜ್ಞಾನ ಶಾಖೆಗಳು ತಾರತಮ್ಯಗಳ ಮೇಲೆ ನಿಂತಿರುತ್ತದೆ. ಅಧಿಕಾರ ಯಾವಾಗಲೂ ಈ ತಾರತಮ್ಯಗಳನ್ನು ಬಳಸಿಕೊಂಡು ಸಮಾಜವನ್ನು ನಿರ್ಮಿಸುತ್ತವೆ. ಅದಕ್ಕೆ ತಕ್ಕ ಜ್ಞಾನವನ್ನು ಸೃಷ್ಟಿಸಿಕೊಳ್ಳುತ್ತದೆ.

ಅಧಿಕಾರ ನ್ನುವುದು ರಾಜಕೀಯ , ಧಾರ್ಮಿಕ, ಆರ್ಥಿಕ, ಸಾಮಾಜಿಕ ನೆಲೆಗಳೆಲ್ಲಾ ಸೂಕ್ಷ್ಮ ಶಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಅಧಿಕಾರ, ಜ್ಞಾನ, ಲೈಂಗಿಕತೆಯ ಚಲಾವಣೆಯ ಬಗ್ಗೆ ಫುಕೋನ ಅರ್ಥದಲ್ಲಿ ಅರಿಯಬೇಕಾದರೆ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು.

‘ಸಂಸ್ಕಾರ’ ಪರಂಪರಾಗತ ಮೌಲ್ಯವಾಗಿ ನಡೆದುಕೊಂಡು ಬಂದ, ಧಾರ್ಮಿಕ, ಆರ್ಥಿಕ, ಲೈಂಗಿಕ ವಿಷಯದ ಮೇಲಿನ ಸಂವಾದ, ಪ್ರತಿಕ್ರಿಯೆ ಮತ್ತು ವ್ಯಾಖ್ಯಾನ. ಇವೆಲ್ಲಕ್ಕೂ ಕೇಂದ್ರವೆಂದರೆ ಧರ್ಮ ಕೇಂದ್ರಿತ ಅಧಿಕಾರ. ಅದು ಸೃಷ್ಟಿಸಿದ ಜ್ಞಾನ ಮತ್ತು ನಿರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನಿಯಮಗಳು ಮತ್ತು ಅವುಗಳ ಉಲ್ಲಂಘನೆ. ಪ್ರಾಣೆಶಾಚಾರ್ಯ ಕಾಶಿಗೆ ಹೋಗಿ ವೇದಾಧ್ಯಯನ ಮಾಡಿ ಧಾರ್ಮಿಕ ಚರ್ಚೆಯಲ್ಲಿ ಅನೇಕ ವಿದ್ವಾಂಸರನ್ನು ಸೋಲಿಸಿ ಪ್ರಶಸ್ತಿಗಳಿಸಿಕೊಂಡು ಬಂದಿರುವ ಜ್ಞಾನಿ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಸರಿಸಿಕೊಂಡು ಹೋಗುವಂತೆ ಪರಂಪರೆಯನ್ನು ರೂಢಿಸುತ್ತಿರುವವರು. ಧಾರ್ಮಿಕ ಸಂಸ್ಥೆ ಕೇವಲ ಜ್ಞಾನದ ವಾಹಿನಿಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಂದ್ರಿಯ ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನೂ ಕಲಿಸುತ್ತದೆ.  ಇದನ್ನೇ ಫುಕೊದ ಸೂಕ್ಷ್ಮ ಅಧಿಕಾರ ಎಂದು ಕರೆಯುತ್ತಾನೆ. ಆತನ ಪ್ರಕಾರ ಅಧಿಕಾರ ಎಂಬುದು ಎಲ್ಲೆಲ್ಲೂ ಇರುತ್ತದೆ. ಇದರ ಪರಿಣಾಮವಾಗಿ ಆಚಾರ್ಯರು ತಮ್ಮ ದೇಹವನ್ನು ಲೈಂಗಿಕದಂಡನೆಗೆ ಒಪ್ಪಿಸಿಕೊಳ್ಳುವುದು ಒಂದು. ಅವರ ನಾನ, ತಿಳುವಲಿಕೀ ಅವರಿಗೆ ಅಗ್ರಹಾರದಲ್ಲಿ ಉನ್ನತ ಸ್ಥಾನಕೊಟ್ಟು ಮನ್ನಣೆ ಮಾಡಿರುತ್ತದೆ. ಆಚಾರ್ಯರು ಹಣವಂತರಲ್ಲದಿದ್ದರೂ ಧಾರ್ಮಿಕ ಅಧಿಕಾರ ಪದೆದವಾರು. ಇದಕ್ಕೆ ತದ್ವಿರುದ್ದವಾಗಿರುವವನು ನಾರಣಪ್ಪ. ಕುಡುಕ, ವಿಷಯಲಂಪಟ , ಸೂಳೆ ಚಂದ್ರಿಯನ್ನು ಅಗ್ರಹಾರದ ತನ್ನ ಮನೆಯಲ್ಲೇ ತಂದು ಇಟ್ಟುಕೊಂಡಿರುವವನು. ಆ ಸಮಾಜದ ಕಟ್ಟುಕಟ್ಟಳೆಯನ್ನು ಮೀರಿದವನು, ರಸಿಕ ಇತ್ಯಾದಿ. ಯಾವುದೇ ಧರ್ಮವೂ ತಾನು ವಿಧಿಸಿದ ನಿಯಮವನ್ನು ಮೀರಿದರೆ ಅಂಥವರನ್ನು ಶಿಕ್ಷಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಇಲ್ಲಿಯ ಸಂದಿಗ್ಧತೆ ಎಂದರೆ ಹಾಗೇನಾದರೂ ಮಾಡಿದರೆ ತಾನು ಮುಸಲ್ಮಾನನಾಗುವೆ ಎಂದು ನಾರಣಪ್ಪ ಹೆದುರುವುದು. ಇದರಿಂದ ಅವನನ್ನು ಆತಿಯಿಂದ ಹೊರಗಿಡಲು ಸಾಧ್ಯವಾಗುವುದಿಲ್ಲ. ಅವನು ಸತ್ತಾಗ ಸಂಸ್ಕಾರದ ಸಮಸ್ಯೆ ಉಧ್ಬವವಾಗುವುದು ಈ ಕಾರಣದಿಂದ, ಲೈಂಗಿಕಾತ್ಮಕತೆಯಿಂದ.ಅಗ್ರಹಾರದ ಬ್ರಾಹ್ಮಣರು ಯಾರೂ ಅವನ ಸಂಸ್ಕಾರ ಮಾಡಲು ಮುಂದಾಗುವುದಿಲ್ಲ. ಇಂಥಹ ಸ್ಥಿತಿಯಲ್ಲಿ ಧರ್ಮಶಾಸ್ತ್ರ ಏನು ಹೇಳುತ್ತದೆಯೆಂದು ಎಲ್ಲಾ ಸಮಸ್ಯೆ. ಇದರ ಸುತ್ತಲೇ ನಡೆಯುತ್ತಿದ್ದ ಸಂವಾದ ಚಂದ್ರಿಯು ತನ್ನ ಮೈಮೇಲೆ ಇದ್ದ ಒಡವೆಯೆನ್ನೆಲ್ಲಾ ಕಳಚಿ ಆಚಾರ್ಯರ ಮುಂದಿಟ್ಟಾಗ  ಇಲ್ಲಿ ಚಂದ್ರಿಗೂ , ಅಗ್ರಹಾರದ ಬ್ರಾಹ್ಮಣರಿಗೂ ಯಾವುದೇ ಸಂವಾದ ನಡೆಯುವುದಿಲ್ಲ. ಆದರೆ ಈ ಮೌನ ಪ್ರತಿಕ್ರಿಯೆ ಅಗ್ರಹಾರದ ಬ್ರಾಹ್ಮಣರ ಸಂವಾದವನ್ನೇ ತಿರುವು ಮುರುವು ಮಾಡುತ್ತದೆ. ಆಚಾರ್ಯರು ಧರ್ಮಶಾಸ್ತ್ರಾದ ಮೊರೆ ಹೋಗುತ್ತಾರೆ. ಉತ್ತರ ಸಿಗುವುದಿಲ್ಲ. ಆಚಾರ್ಯರ ಜ್ಞಾನ ಸಂಪತ್ತಿಗೆ ಇದೊಂದು ದೊಡ್ಡ ಸವಾಲಾಗುತ್ತದೆ.

ಚಂದ್ರಿಯ ಜೊತೆ ಅಚಾನಕ್ಕಾಗಿ ಆದ ಲೈಂಗಿಕ ಸಂಬಂಧದಿಂದ ಆಚಾರ್ಯರ ಇಡೀ ಜೀವನದೃಷ್ಟಿ , ತಪಸ್ಸು , ಲೈಂಗಿಕ ಹಿಡಿತ, ಜ್ಞಾನಾರ್ಜನೆ ಎಲ್ಲವೂಉ ಮುರಿದುಬಿದ್ದು ಇವರೂ ನಾರಣಪ್ಪನೇ ಆಗಿಬಿಡುತ್ತಾರೆ. ಅಗ್ರಹಾರದ ಯಾರಿಗೂ ಇವರು ಉತ್ತರ ಕೊಡುವ ಶಕ್ತಿಯನ್ನೇ ಕಳೆದುಕೊಂಡುಬಿಡುತ್ತಾರೆ . ಇಲ್ಲಿ ಅವರ ಮಾತು / ಭಾಷೆ ಸೋಲುತ್ತದೆ. ಹೆಂಡತಿ ಸಾಯುತ್ತಾಳೆ. ಕೊನೆಗೆ ನಾರಣಪ್ಪನ ಹೆಣದ ಸಂಸ್ಕಾರವಿರಲಿ, ತಮ್ಮ ಧರ್ಮದಂತೆ ಯಾವ ಸಂಸ್ಕಾರವನ್ನೂ ಪಾಲಿಸಲಾಗದೆ ಇವರೇ ನಾರಣಪ್ಪನಾಗಿ ಬಿಡುತ್ತಾರೆ.

ಇಷ್ಟೇ ಅಲ್ಲ. ಇಲ್ಲಿ ಮುಂದಿನ ಸಂವಾದ ನಡೆಯುವುದೇ ಇಲ್ಲ. ಭಾಷೆ ಮೂಕವಾಗುತ್ತದೆ. ಆಲೋಚನೆಗೆ ಅಂತ್ಯ ಒದಗುತ್ತದೆ. ಒಂದು ವ್ವ್ಯವಸ್ಥೆ ನಾಶವಾಗಿ ಇನ್ನೊಂದು ವ್ಯವಸ್ಥೆ ಹುಟ್ಟುವಾಗಿನ ಸಂದಿಗ್ದ ಹಾಗೆಯೇ ಉಳಿಯುತ್ತದೆ , ಮೌನವಾಗುತ್ತದೆ.  ಹೀಗೆ ಮೌಲ್ಯ, ಪಲ್ಲಟವಾಗುವಾಗ ಹೊಸ ಭಾಷೆಯ ಹೊಸ ಸಂವಾದದ ಶೂನ್ಯ ಆವರಿಸುತ್ತದೆ.

ಮಠ ಮಾತ್ರ ನಾರಣಪ್ಪನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ – ಬ್ರಾಹಮನರ ಅಹವಾಲನ್ನು ಕೇಳದೆ ಇಲ್ಲಿ ಉಳಿದ ಬ್ರಾಹ್ಮಣರ ಮಾತು ಮಠದ ಶಕ್ತಿಗೆ ಹೋಲುತ್ತದೆ. ಹೀಗೆ ಒಂದೊಂದು ಸಂವಾದದ ಸೋಲಾಗಿ ಕೊನೆಗೊಳ್ಳುತ್ತದೆ. ಮಾತನ್ನು ಮೌನವಾಗಿಸುತ್ತದೆ. ಕಾದಂಬರಿಯಲ್ಲಿ ಆಚಾರ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುವುದೇ ಇಲ.

f3ಫುಕೋ ಪ್ರಕಾರ ಎಲ್ಲಾ ಅಧಿಕಾರ ಸಂಸ್ಥೆಗಳೂ ಅಧಿಕಾರ, ಜ್ಞಾನ ಮಾತು ಲೈಂಗಿಕತೆಯ ಸಂವಾದದ ಮೇಲೆ ನಿಂತಿರುತ್ತವೆ. ಅದು ರಾಜಕೀಯ, ಧಾರ್ಮಿಕ, ಶೈಕ್ಷಣಿಕ , ಸಾಮಾಜಿಕ, ಲೈಂಗಿಕ (ಮದುವೆ, ಮನೆ, ಯಜಮಾನ ಇತ್ಯಾದಿ) ಈ ಎಲ್ಲಾ ಸಂಸ್ಥೆಗಳಲ್ಲೂ  ಕೆಲಸ ಮಾಡುತ್ತಿರುತ್ತದೆ ಎಂದು ಹೇಳುವುದು ಇಂಥ ಸಂಧರ್ಭದಲ್ಲೇ. ದಮನಕ್ಕೊಳಗಾದವರು ದಮನಿಸುವವರಿಗೆ ಅವರ ಅಧಿಕಾರಕ್ಕೆ ತಿರುಗೇಟು ಕೊಡುತ್ತಿರುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ದೇವನೂರರ ಒಡಲಾಳ, ಶೈಶೂಕ ವರ್ಗದ ಎತ್ತಪ್ಪನ ಅಧಿಕಾರ/ ಬಲ ಮತ್ತು ಪ್ರಭುತ್ವದ ಪೋಲಿಸ್ ಬಲ ಎರಡೂ ಒಟ್ಟಿಗೆ ಪ್ರಯೋಗವಾದರೂ ಕಡೆಗೆ ಅವೆರಡನ್ನೂ ಎದುರಿಸಿ ಇಬ್ಬರಿಗೂ ಕೈಕೊಡುವು ರೀತಿ ಯಾವುದೇ ಅಧಿಕಾರ/ಬಲವನ್ನು ಮಾಡುವ ರೀತಿ ಉತ್ತಮ ಉದಾಹರಣೆ. ಅಂತೆಯೇ ಕುಸುಮಬಾಲೆಯಲ್ಲಿ ಗಾರೆ ಸಿದ್ದ ಮಾವ ತನ್ನನ್ನು ಥಳಿಸಿ ದಂಡ ಹಾಕಿವರಿಂದಲೇ ದಂಡ ವಸೂಲಿ ಮಾಡಿಕೊಳ್ಳುವ ಕ್ರಮ ಒಂದು ಅಧಿಕಾರವನ್ನು ವ್ಯಂಗ ಮಾಡುವ ಕ್ರಮ. ಹೀಗೆ ದಮನಿತರ ಅಧಿಕಾರ ಧಿಕ್ಕಾರ ಪ್ರತಿಭಟನೆಯಾಗಿ ಸಮಾಜದಲ್ಲಿ ಹೊಮ್ಮುತ್ತದೆ.

ಫುಕೋನ ಲೈಂಗಿಕಾತ್ಮಕತೆಯ ಮೇಲೆ ಬರೆದ ‘ಹಿಸ್ಟರಿ ಆಫ್ ಸೆಕ್ಶುವಾಲಿಟಿ’ ಹೆಣ್ಣಿನ ಬಿಡುಗಡೆಯ ಹಾದಿಯೆಡೆಗೆ ಹೊಸ ದಿಕ್ಕಿನಲ್ಲೂ ಕೊಂಡೊಯ್ಯುತ್ತದೆ . ಮನುಷ್ಯನು  ಬಂಧನದಿಂದ ಬಿಡುಗಡೆಯ ಕಡೆಗೆ ಕೊಂಡೊಯ್ಯುವ ಮಾರ್ಗದರ್ಶಕನಾಗಿ  ಹೊಸ ಮನುಷ್ಯನನ್ನು ಸೃಷ್ಟಿಸುವ ಕಡೆಗೆ ತುಡಿಯುವಂತೆ ಮಾಡುವ ದಾರ್ಶಿಕನಾಗಿ ಫುಕೋ ಮಾಡಿದ್ದಾನೆ.

ಈ ಮಿಷೆಲ್ ಫುಕೋ ಹುಟ್ಟಿದ್ದು ೧೫ ನೇ ಅಕ್ಟೋಬರ್ ೧೯೨೬ರಂದು. ಫ್ರಾನ್ಸಿನ ಪಾಯಿಟಲ್ಸ್ ಎಂಬ ಊರಲ್ಲಿ. ಈತನ ತಂದೆ ಹೆಸರಾಂತ ಡಾಕ್ಟರ್ . ತನ್ನ ಮಗನೂ ತನ್ನಂತೆ ಡಾಕ್ಟರ್ ಆಗಬೇಕೆಂದು ಅಪೇಕ್ಷಿಸುತ್ತಾನೆ . ಅವನ ವಿದ್ಯಾರ್ಥಿ ಜೀವನ ಅಷ್ಟು ಫಲಪ್ರದವಾಗಿರಲಿಲ್ಲ. ತುಂಬಾ ಬುದ್ದಿವಂತನಾದರೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ , ಮನೋ ವಿಜ್ಞಾನಿಯ ಹತ್ತಿರ ಹೋದಾಗ ಅವನಿ ಮನೋವಿಜ್ಞಾನದ ಮೇಲೆ ಆಸಕ್ತಿ ಹುಟ್ಟಿತು. ಆಗ ೧೯೫೨ ರಲ್ಲಿ ಮನೋ ವಿಜ್ಞಾನದಲ್ಲಿ ಬಿ.ಎ ಪದವಿ ಪಡೆದ. ೧೯೫೦ ರಿಂದ ೧೯೫೩ ರ ವರೆಗೆ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿದ್ದ. ಆದರೆ ಭ್ರಮಾನಿರಸನಗೊಂಡ. ೧೯೫೩ -೫೪ ರಲ್ಲಿ ಶಾಲೆಯ ಹುಡುಗರಿಗೆ ಮನೋ ವಿಜ್ಞಾನವನ್ನು ಪಾಠ ಮಾಡಿದ. ನಂತರ ದರ್ಶನ ಶಾಸ್ತ್ರದಲ್ಲಿ ಮಾಸ್ಟರ್ ಪದವಿಯನ್ನು ಪಡೆದ. ಆದರೆ ಅವನು ಯಾವ ವಿಷಯದಲ್ಲಿ ಪರಿಣತನೆಂದು ಕೇಳಿದರೆ ‘ದರ್ಶನ್ ಶಾಸ್ತ್ರ’ ದಲ್ಲಂತೂ ಅಲ್ಲ ಎಂಬ ಉತ್ತರ ಬರುತ್ತದೆ. ಮನಃಶಾಸ್ತ್ರಜ್ಞ ಅಂದರೆ ಮಾಮೂಲಿ ಮನಃಶಾಸ್ತ್ರಗ್ನನೂ ಅಲ್ಲ. ಚರಿತ್ರೆಕಾರನ ಅಂದರೆ ಅದೂ ಅಲ್ಲ. ಆದರೆ ಆಟ ಸಾಮಾಜಿಕ ಸಂಸ್ತೆಗಳ , ಮನಃಶಾಸ್ತ್ರ, ಮಾನಸಿಕ ವಿಜ್ಞಾನ , ಕಾರಾಗೃಹ ವ್ಯವಸ್ಥೆ ಮತ್ತು ಮಾನವನ ಲೈಂಗಿಕಾತ್ಮಕತೆಯ ವಿಶ್ಲೆಶಕನಾಗಿ ಕಂಡು ಬರುತ್ತಾನೆ. ಈತ ಸಂರಚನಾವಾದಕ್ಕೆ ಸಿಕ್ಕಿ ಬಿದ್ದಿದ್ದ ವಿದ್ವಾಂಸರನ್ನು ಬಿಡುಗಡೆಗೊಳಿಸಿ ರಚನೋತ್ತರವಾದವನ್ನು ಹುಟ್ಟು ಹಾಕಿದವರಲ್ಲಿ ಪ್ರಮುಖ. ಅಧಿಕಾರ, ಜ್ಞಾನ ಮತ್ತು ಭಾಷೆಗೂ ಇರುವ ಸಂಬಂಧವನ್ನು ಈಗ – ಅದರಲ್ಲೂ ಅಭಿವೃದ್ದಿ ಹೊಂದುತ್ತಿರುವ, ದಮನಕ್ಕೊಳಗಾದವರ ಚರಿತ್ರೆಯನ್ನು ಪುನಃರಚಿಸುವಲ್ಲಿ ಕ್ರಿಯಾಶೀಲವಾಗಿ ವಿಶ್ಲೇಷಿಸಲಾಗುತ್ತಿದೆ.

ಇದಕ್ಕೂ ಮುಖ್ಯವಾಗಿ ಲೈಂಗಿಕಾತ್ಮಕತೆ ಮತ್ತು ಸ್ತ್ರೀ ವಿಮೊಚನ್ನ ಚಳುವಳಿಗಳಲ್ಲಿ ಇವನ ಆಲೋಚನಾ ಕ್ರಮ ಮುಂಚೂಣಿಯಲ್ಲಿದೆ. ಲೈಂಗಿಕಾತ್ಮಕತೆಯ ಬಗ್ಗೆ ಆರು ಸಂಪುಟಗಳಲ್ಲಿ ಬರಬೇಕಾದ ಪುಸ್ತಕಗಳಲ್ಲಿ ಎರಡನ್ನೂ ಮಾತ್ರ ಪೂರ್ಣಗೊಳಿಸಿದ್ದ. ಸಂದರ್ಶಕರೊಬ್ಬರು ಈತನ ಜೀವನದ ಬಗ್ಗೆ ಕೇಳಿದಾಗ ಆಟ ಹೇಳಿದ್ದು “ನನ್ನ ವ್ಯಯಕ್ತಿಕ ವಿಷಯವನ್ನು ಪೋಲಿಸಿನವರ ದಾಖಲೆಯಲ್ಲಿ ನೋಡಬಹುದು. ನನ್ನ ಚಟುವಟಿಕೆಗಳನ್ನು ಅಧಿಕಾರಶಾಹಿಗಳ ದಫ್ತಿರನಲ್ಲಿ ನೋಡಬಹುದು. ಫುಕೋ ನ ಭಾಷಣಗಳ ಆಡಿಯೋಗಳು ಈಗ ಲಭ್ಯವಿದೆ. ಆಟ ನಡೆದದ್ದೇ ದ್ದರಿ. ಅಸಲಿ ವಿದ್ವಾಂಸನೊಬ್ಬನ ಅಂತ್ಯ ಅನಿರೀಕ್ಷಿತವಾಯಿತು.

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

Tingalu – June 2009

5೨೦ ನೇ ಶತಮಾನದ ಬುದ್ದಿಜೀವಿಗಳಲ್ಲಿ ಅತ್ಯಂತ ಪ್ರಮುಖನೆಂದು ಪರಿಗಣಿಸಲ್ಪಟ್ಟವನು ಕ್ಲಾಡ್ ಲೆವಿ ಸ್ಟ್ರಾಸ್. ಹೋದ ವರ್ಷ ತನ್ನ ನೂರನೇ ಜನ್ಮದಿನವನ್ನು ಆಚರಸಿಕೊಂಡ. ಇಡೀ ಜಗತ್ತಿನ ಚಿಂತಕರು ಇವನ ನೂರನೇ ಹುಟ್ಟುಹಬ್ಬವನ್ನು ಅತ್ಯಂತ ವಿಜ್ರುಂಭಣೆಯಿಂದ ಆಚರಿಸಿದರು. ಫ್ರಾನ್ಸ್ನಲ್ಲಿ ಇಡೀ ವರ್ಷವನ್ನು ಆತನ ಶತಮಾನೋತ್ಸವ ವರ್ಷವೆಂದು ಪರಿಗಣಿಸಿ ೧೯೮ ವಿದ್ವಾಂಸರಿಂದ ಅವನ ಜೀವನ ಮತ್ತು ಕೃತಿಗಳ ಮೇಲೆ ಲೇಖನಗಳನ್ನು ಬರೆಸಿದರು . ಕೇವಲ ಆರು ವಾರಗಳಲ್ಲಿ ಈ ಪುಸ್ತಕದ ಇಪ್ಪತ್ತು ಸಾವಿರ ಪ್ರತಿಗಳು ಮಾರಾಟವಾದವು. ಫ್ರಾನ್ಸಿನ ಪ್ರತಿಷ್ಠಿತ ಪ್ರಕಾಶನ ಇನ್ನು ಬದುಕಿರುವ ವಿದ್ವಾಂಸನೊಬ್ಬನ ಬಗ್ಗೆ ಪ್ರಕಟಿಸಿದ ಮೊದಲ ಕೃತಿಯಿದು. ಹೀಗೆ ಈತನು ಬದುಕಿರುವಾಗಲೇ ದಂತಕತೆಯಾಗಿದ್ದಾನೆ. ಬೌದ್ದಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಈತ ಭಾರತದ ಎಲ್ಲೋರಾ ಮತ್ತು ಅಜಂತಾ ದೇವಾಲಯಗಳಿಗೆ ೧೯೫೦ರ ದಶಕದಲ್ಲಿ ಭೇಟಿ ನೀಡಿದ್ದನು . ಇವನು ಬೌದ್ದಧರ್ಮದ ಕಲೆಯ ಕುರಿತು ಲೇಖನವನ್ನು ಬರೆದಿದ್ದಾನೆ .
ಲೆವಿ ಸ್ಟ್ರಾಸ್ ಫ್ರಾನ್ಸ್ ದೇಶದ ಕಲಾಕಾರನ ಮಗನಾಗಿ ೨೮-೧೧-೧೯೦೮ ರಂದು ಜನಿಸಿದನು. ೧೯೩೫ರಿಂದ ೧೯೩೯ರ ತನಕ ಪ್ಯಾರಿಸ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಮತ್ತು ದರ್ಶನಶಾಸ್ತ್ರ್ಗಳ ಅಭ್ಯಾಸ ಮಾಡಿದನು. ಅವನಿಗೆ ಸಾಹಿತ್ಯದ ಮೇರು ಕೃತಿಗಳ ಓದು ಮತ್ತು ಶಾಸ್ತ್ರಿಯ ಸಂಗೀತದಲ್ಲಿ ಅಪಾರ ಆಸಕ್ತಿ . ಈತನ ಬರಹಗಳೆಲ್ಲ ಕಾವ್ಯಮಯ ವಿಜ್ಞಾನದಂತೆ ಓದಿಕೊಂಡು ಹೋಗುತ್ತವೆ. ಫ್ರಾನ್ಸ್ನಿನ ಸಾಹಿತ್ಯ ಅಕಾಡೆಮಿ ಈತನ ‘tristas tropics’ ಎಂಬ ಅಮೆಜಾನ್ ನ ಬುಡಕಟ್ಟು ಜನಾಂಗದ ಬಗ್ಗೆ ಬರೆದು ಪುಸ್ತಕವನ್ನು ‘ಸಾಹಿತ್ಯ ಕೃತಿ’ ಎಂಬ ಪರಿಗಣಿಸಿ ಬಹುಮಾನವನ್ನು ಕೊಡಲು ತೀರ್ಮಾನಿಸಿತು. ಕೊನಗೆ ಕೊಡಲಾಗದೆ ಸಂತಾಪ ವ್ಯಕ್ತಪಡಿಸಿತು. ನಮ್ಮ ದೇಶದಲ್ಲಿ, ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರದ ಬಗ್ಗೆ ಬರದ ‘ಹಸಿರು ಹೊನ್ನು’ ಕೃತಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿದ್ದು ಇಲ್ಲಿ ಗಮನಾರ್ಹ.
ಲೆವಿ ಸ್ಟ್ರಾಸ್ ಮಾನವಶಾಸ್ತ್ರದ ಅಧ್ಯಯನದಲ್ಲಿ ಅರಿವಿನ ಸ್ಪೋಟವನ್ನು ಉಂಟು ಮಾಡಿದವನು.ಇಡೀ ಪ್ರಪಂಚದಲ್ಲಿ ಬಿಳಿಯರು ಮಾತ್ರ ಶ್ರೇಷ್ಠಮಾನವರೆಂದೂ ಉಳಿದವರೆಲ್ಲಾ ಅವರಿಗಿಂತ ‘ಕಿಂಚಿದೂನ’ ಎಂದು ತಿಳಿದು, ಪ್ರಪಂಚದ ಎಲ್ಲಾ ಜನಾಂಗಗಳನ್ನು ಕೀಳಾಗಿ ಪರಿಭಾವಿಸುತ್ತಿದ್ದ ಕಾಲವೊಂದಿತ್ತು. ಬಿಳಿಯರು ಬರೆಯುತ್ತಿದ್ದ ಚರಿತ್ರೆ, ಜನಾಂಗೀಯ ಅಧ್ಯಯನ , ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ ಎಲ್ಲದರಲ್ಲೂ ಸ್ವತಃ ಅವರೇ ಮಾದರಿಯಾಗಿರುತ್ತಿದ್ದರು. ಉದಾಹರಣೆಗೆ ಮುಸುಕುಧಾರಿ ಫ್ಯಾಂಟಮ್ ನನ್ನೇ ತೆಗೆದುಕೊಳ್ಳಬಹುದು. ಅವನು ಎಲ್ಲರಿಗಿಂತಲೂ ಬಲಶಾಲಿಯೂ, ಬುದ್ದಿವಂತನೂ ಆಗಿರುತ್ತಾನೆ.ಅವನ ಜೊತೆ ಬರುವ ಪಾತ್ರಗಳು ಮಾತ್ರ ಕರಿಯರು, ಪಿಗ್ಮಿಗಳು ಆಗಿರುತ್ತಾರೆ . ಅವರು ತಮ್ಮ ಬಿಡುಗಡೆಗಾಗಿ ಫ್ಯಾಂಟಮ್ ನ ಸಹಾಯಕ್ಕೆ ಕಾದಿರುತಾರೆ.ಅವನೋ ಅಪದ್ಭಾಂದವನಂತೆ ಬಂದು ಅವರನ್ನು ರಕ್ಷಿಸುತಾನೆ . ನಿಜವಾಗಿ ಅವನ ಮುಸುಕನ್ನು ತೆರೆದು ನೋಡಿದರೆ ಅವನು ಬಿಳಿಯನಾಗಿರುತ್ತಾನೆ.ಅಷ್ಟೇ ಏಕೆ ವಸಾಹತುಶಾಹಿ ಸಾಹಿತ್ಯವು ಸಹ , ಇದೆ ವಸಾಹತುಕರಣಗೊಂಡವರ ಸಂಸ್ಕೃತಿಯನ್ನು ಬಿಂಬಿಸುವಾಗ ಅಪ್ರಜ್ಞಾಪೂರ್ವಕವಾಗಿ ತಳೆಯುತ್ತಿದ್ದ ನಿಲುವೆಂದರೆ ತಮ್ಮ ಉತ್ತಮಿಕೆಯ ಅಹಂ. ಉದಾಹರಣೆಗೆ, ‘ನಿಗರ್ ಆಫ್ ದಿ ನಾರಿಸ್ಸಿಸ್’, ‘ ಪ್ಯಾಸೇಜ್ ಟು ಇಂಡಿಯಾ’ ಮುಂತಾದ ಕೃತಿಗಳನ್ನೇ ನೋಡಬಹುದು. ಇದೆ ರೀತಿಯಲ್ಲಿ ಬಿಳಿಯರು ತಾವು ಮಾತ್ರ ಅಮೂರ್ತ ಪರಿಕಲ್ಪನೆಯಲ್ಲಿ ಯೋಚಿಸಬಲ್ಲೆವು, ಉಳಿದವರ ಜ್ಞಾನ ಅಷ್ಟು ತೀಕ್ಷ್ಣವಲ್ಲದ್ದರಿಂದ ಕೇವಲ ಮೂರ್ತ ರೀತಿಯಲ್ಲಿ ಮಾತ್ರ ಯೋಚಿಸಬಲ್ಲರು ಎಂದು ನಂಬಿದ್ದರು. ಲೆವಿ ಸ್ಟ್ರಾಸ್ ಈ ಯೋಚನೆಗಳನ್ನೆಲ್ಲಾ ತಲೆಕೆಳಗು ಮಾಡುವಂತೆ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿ ವಿಶ್ಲೇಷಣೆ ಮಾಡಿ ‘ಮಾನವರೆಲ್ಲರೂ ಒಂದೇ ರೀತಿ ಆಲೋಚಿಸಬಲ್ಲರು, ಎಲ್ಲರ ಮನಸ್ಸುಗಳೂ ಮೂರ್ತ ಮತ್ತು ಅಮೂರ್ತ ಯೋಚನೆಗಳಲ್ಲಿ ಒಂದೇ ರೀತಿಯಲ್ಲಿ ಕ್ರಿಯಾಶೀಲವಾಗಿರುತ್ತವೆ’ ಎಂದು ಸಾರಿದನು.
ಇದಕ್ಕಾಗಿ ಲೆವಿ ಸ್ಟ್ರಾಸ್ ೧೯೩೫ ರಿಂದ ೧೯೩೯ ರ ತನಕ ಬ್ರಜಿಲ್ ದೇಶಕ್ಕೆ ಮತ್ತೆ ಮತ್ತೆ ಹೋಗಿ, ಅಲ್ಲಿಯ ಬುಡಕಟ್ಟು ಜನರ ಜೊತೆಯೇ ಬದುಕಿ ಜನಾಂಗೀಯ ಅಧ್ಯಯನವನ್ನು ನಡೆಸಿದನು. ಈ ಅಧ್ಯಯನದ ಫಲವೇ ಅವನ ಮೊದಲ ಮೇರು ಕೃತಿಯಾದ ‘ tristas tropics. ಇದೆ ಕಾಲದಲ್ಲಿ ಎರಡನೇ ಪ್ರಪಂಚ ಯುದ್ದ ಮೊದಲಾಗಿ ಫ್ರಾನ್ಸ್ ದೇಶ ಇವನನ್ನು ವಾಪಸ್ಸು ಕರೆಸಿಕೊಂಡಿತು. ಯುದ್ದ ಕಾಲದಲ್ಲಿ ಗುಪ್ತ ಏಜೆಂಟ್ ಆಗಿ ಕೆಲಸ ಮಾಡಲ ಹಚ್ಚಿತು. ಸ್ವಲ್ಪ ದಿನದಲ್ಲೇ ಯಹೂದಿ ಎಂಬ ಕಾರಣ ಕೊಟ್ಟು ಇವನನ್ನು ಆ ಕೆಲಸದಿಂದ ತೆಗೆದುಹಾಕಿತು. ಅವನು ದೇಶಭ್ರಷ್ಟನಾಗಿ ದಕ್ಷಿಣ ಅಮೆರಿಕಾಗೆ ಮತ್ತೆ ಯಾನವನ್ನು ಕೈಗೊಂಡನು. ತನ್ನ ಅರ್ಧ ನಿಂತ ಬುಡಕಟ್ಟು ಅಧ್ಯಯನವನ್ನು ಮುಂದುವರೆಸಲು ಇಚ್ಚಿಸಿದನು. ಆದರೆ ಇವನನ್ನು ಕಸ್ಟಮ್ ಏಜಂಟರು ಪರಿಶೀಲಿಸಿದಾಗ ಇವನ ಹತ್ತಿರ ಒಂದು ಜರ್ಮನ್ ಭಾಷೆಯ ಪತ್ರ ಕಂಡು ಬಂದಿತು.
6ಈ ಏಜಂಟರು ಇವನನ್ನು ಬಂಧಿಸಲು ಆಲೋಚಿಸುತ್ತಿದ್ದಾಗ, ಲಂಗರು ತೆಗೆದು ಹೊರಡಲು ಸಿದ್ದವಿದ್ದ ಅಮೆರಿಕಾದ ಹಡಗೊಂದನ್ನು ಏರಿಕೊಂಡ. ಆ ಹಡಗಿನಲ್ಲಿ ಖೈದಿಗಳು, ಯುದ್ದಖೈದಿಗಳು ಮತ್ತ್ತು ಕೊಲೆಗಡುಕರು ಮಾತ್ರ ಇದ್ದರು. ಇವರ ಜೊತೆಯಲ್ಲಿ, ಹಡಗಿನ ತಳದಲ್ಲಿ ಬೆಳಕಿಂದ ಕಿರಣವೂ ಇಲ್ಲದ ಗಬ್ಬುನಾತವುಳ್ಳ ಜಾಗದಲ್ಲಿ ಅನಾಮಧೇಯನಾಗಿ ಉಳಿದು ಅಮೆರಿಕೆಗೆ ಪ್ರಯಾಣ ಬೆಳೆಸಿದ. ಅಲ್ಲಿ ಇವನನ್ನು ದೇಶಭ್ರಷ್ಟರಿಗಾಗಿ ನಡೆಸುತ್ತಿದ್ದ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡಲು ಹಚ್ಚಿದರು. ಎರಡನೇ ಮಹಾಯುದ್ದದ ನಂತರ ಇವನಿಗೆ ವಾಷಿಂಗ್ಟನ್ ನಲ್ಲಿ ಫ್ರೆಂಚ್ ರಾಯಭಾರಿಯ ಕಚೇರಿಯಲ್ಲಿ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೆಲಸ ಮಾಡಲು ಹಚ್ಚಿದರು. ೧೯೪೮ರಲ್ಲಿ ಈತನನ್ನು ಪ್ಯಾರಿಸ್ ಗೆ ವಾಪಸ್ಸು ಕರೆಸಿಕೊಳ್ಳಲಾಯಿತು. ಈ ಅವಧಿಯಲ್ಲಿ ಈತ ‘ಭಾಂದವ್ಯದ ಮೂಲ ರಚನೆಗಳು’ (The Elementary Structures of Kinship ) ಎಂಬ ಅತ್ಯಂತ ಪ್ರಮುಖ ಮಾನವಶಾಸ್ತ್ರ ಕೃತಿಯನ್ನು ರಚಿಸಿದನು. ಇದನ್ನು ಆ ಕಾಲದ ಅತ್ಯಂತ ಪ್ರಭಾವಶಾಲಿ ಚಿಂತಕಿಯಾದ ಸೈಮನ್ ದಿ ಬೋವಾ ವಿಮರ್ಶೆ ಮಾಡಿ ಪಾಶ್ಚಾತ್ಯ ಸಂಸ್ಕೃತಿಯ , ಆಚೆಗಿರುವ ಮಹಿಳೆಯರ ಅತ್ಯಂತ ಪ್ರಮುಖವಾದ ವಿಶ್ಲೇಷಣೆ ಎಂದು ಸಾರಿದಳು. ಇದರ ಪ್ರಭಾವದಿಂದ ಈತ ಫ್ರಾನ್ಸ್ ನಲ್ಲಿ ಪ್ರಮುಖ ಬುದ್ದಜೀವಿಯೆಂದು ಪರಿಗಣಿಸಲ್ಪಟ್ಟ. ಇವನಿಗಾಗಿಯೇ ‘Comparative Religion of Non-Literate Peoples‘ ಎಂಬ ಪೀಠವನ್ನು ಸ್ತಾಪಿಸಿ ಇವನನ್ನು ಅದರ ನಿರ್ದೇಶಕನನ್ನಾಗಿ ನೇಮಿಸಲಾಯಿತು.
ಲೆವಿ ಸ್ಟ್ರಾಸ್ ಒಬ್ಬ ಮಹಾಮೌನಿ, ತೀಕ್ಷ್ಣಮತಿ ಮತ್ತು ಸಂತ. ತನ್ನ ವೈಯಕ್ಥಿಕವಾದ ವಿಷಯವನ್ನು ಆತ ನೇರವಾಗಿ ಎಲ್ಲೂ ದಾಖಲಿಸಲಿಲ್ಲ. ಸುಮಾರು ೩೦ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳ ಅಧ್ಯಯನ ನಡೆಸಿದರೂ ತನ್ನ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯದ ಜೊತೆ ಆ ಬುಡಕಟ್ಟುಗಳ ಮಾಹಿತಿ ಸಂಗ್ರಹಿಸುವಾಗ ಆತ ಕಂಡುಕೊಂಡ ವಿಷಯವನ್ನು ಮಾತ್ರ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಬುಡಕಟ್ಟು ಜನಾಂಗದ ಗುಡಿಸಿಲಿನಲ್ಲಿ ಈತನ ವಾಸ. ಅವರು ತಿನ್ನುತ್ತಿದ್ದ ಅಡಿಗೆಯಲ್ಲಿ ಇವನಿಗೂ ಒಂದು ಪಾಲು. ಊಟ ಮಾಡುವಾಗಲು ಈತ ಆ ಊಟದ ಹಿಂದಿನ ಸಾಂಸ್ಕೃತಿಕ ಹಿನ್ನಲೆಯನ್ನು ಮನದಲ್ಲಿ ವಿಶ್ಲೆಶಿಸಿಕೊಳ್ಳುತ್ತಿದ್ದ. ಇದರ ಪರಿಣಾಮವಾಗಿ ಈತ ರಚಿಸಿದ ಮಹತ್ತರ ಪುಸ್ತಕವೆಂದರೆ ‘ ದೇ ರಾ ಅಂಡ್ ದಿ ಕುಕ್ದ್’. ಅಮೆಜಾನ ಕಾಡುಗಳಲ್ಲಿ ಹಾಡಿಯ ಪಕ್ಕದ ಮರದ ಕೆಳಗೆ ಕುಳಿತು ಇಡೀ ಸಮಾಜ ಬೆಳಗಿನಿಂದ ಸಾಯಂಕಾಲದವರೆಗೂ ಹೇಗೆ ತನ್ನ ಕೆಲಸಗಳಲ್ಲಿ ನಿರತವಾಗಿರುತ್ತದೆ ಎಂಬುದನ್ನು ಗಮನಿಸುತ್ತಿದ್ದನು. ಅದರಲ್ಲೂ ಹೆಂಗಸರ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಯಾ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನವೇನು ಎಂದು ತೀರ್ಮಾನಿಸುತ್ತಿದ್ದನು. ಇದರ ಫಲವಾಗಿಯೇ ಆತ ಕಂಡುಕೊಂಡಿದ್ದು ಹೆಣ್ಣು ನಾಣ್ಯವಿದ್ದಂತೆ. ಆಕೆಯು ತನ್ನ ತವರುಮನೆಯಿಂದ ಗಂಡನ ಮನೆಗೆ ಹೋಗುವುದೆಂದರೆ ನಾಣ್ಯದ ಚಲಾವಣೆಇದ್ದಂತೆ ಎಂದು ಅವನು ವಿಶ್ಲೇಶಿಸಿದನು.
ಈತನ ಸಹಚಿಂತಕರೆಂದರೆ ಆಗಿನ ಕಾಲದ ದಾರ್ಶನಿಕರಾದ ಸಾರ್ತ್ರ ಮತ್ತು ಮಾರ್ಲೋಪೊಂಟಿ. ಲೆವಿಸ್ತ್ರಾಸ್ ಸಾರ್ತ್ರನ ಅಸ್ತಿತ್ವವಾದವನ್ನು ತದ್ವಿರುದ್ದವಾದ ದಿಕ್ಕಿನೆಡೆಗೆ ಕೊಂಡೊಯ್ದವನು ಮತ್ತು ಬದುಕು ಒಂದು ಆಟ ಎಂದು ತೋರಿಸಿಕೊಟ್ಟವನು. ಈತನ ಶಿಷ್ಯನಾದ, ಮುಂದೆ ಬಹಳ ಹೆಸರುವಾಸಿಯಾದ ಸಾಂಸ್ಕೃತಿಕ ಅಧ್ಯಯನಕಾರ ರೋಲಾಂ ಬಾರ್ತ್ ಇವನ್ನು ಸಂಧಿಸಲು ದಿನಗಟ್ಟಲೆ ಕಾಯುತ್ತಿದ್ದ.
ಲೆವಿ ಸ್ಟ್ರಾಸ್ ಕಟ್ಟಾ ಸಂರಚನಾವಾದಿ, ಮಾನವಶಾಸ್ತ್ರದ ಅಧ್ಯಯನವೆಂದರೆ ಬರೇ ಒಂದೊಂದು ಸಮುದಾಯವನ್ನಾಗಲಿ ಅಥವಾ ಜನಾಂಗವನ್ನಾಗಲಿ ಬಿಡಿಬಿಡಿಯಾಗಿ ಅಧ್ಯಯನ ಮಾಡುವುದಲ್ಲ. ಅಧ್ಯಯನಕ್ಕೆ ಒಳಪಟ್ಟ ಸಾಂಸ್ಕೃತಿಕ ಪಠ್ಯಗಳ ಸಾರ್ವರ್ತಿಕ ಗುಣಗಳನ್ನು ಪರಿಶೀಲಿಸಿ ವಿಶ್ಲೇಷಿಸಬೇಕು. ಆಗ ಮಾತ್ರ ಆ ಪಠ್ಯಗಳನ್ನು ಸೃಜಿಸಿದ ಮನಸ್ಸು ತಿಳಿಯುತ್ತದೆ ಎಂದು ಅವನು ಪ್ರತಿಪಾದಿಸಿದನು. ಇದನ್ನು ಬುಡಕಟ್ಟು ಜನಾಂಗದ ಅಧ್ಯಯನಕ್ಕೆ ಅನ್ವಯಿಸಿ ಅವನು ‘ರಾಚನಿಕ ಮಾನವಶಾಸ್ತ್ರ’ (structural anthropology) ಎಂಬ ಮೇರು ಕೃತಿಯನ್ನು ರಚಿಸಿದನು . ಇದು ಐದು ಸಂಪುಟಗಳಲ್ಲಿ ಪ್ರಕಟವಾಗಿದೆ.
ಲೆವಿ ಸ್ಟ್ರಾಸ್ ಗಿಂತ ಮುಂಚೆ ಮಾನವಶಾಸ್ತ್ರಜ್ಞರು ತಮ್ಮ ಅದ್ಯಯನಕ್ಕೆ ಒಂದೊಂದೇ ಸಮಾಜವನ್ನು ಒಳಪಡಿಸಿ ವರ್ಗೀಕರಿಸಿ ಅನಂತರ ಸಾಮಾನ್ಯೀಕರಣವನ್ನು ಮಾಡುತ್ತಿದ್ದರು. ಮನುಷ್ಯನ ಹುಟ್ಟು, ಮದುವೆ, ಲೈಂಗಿಕತೆ , ಕ್ರಿಯಾವಿಧಿಗಳು, ಸಾವು ಇವುಗಳನ್ನು ಸುತ್ತ ವಿವರಣಾತ್ಮಕವಾಗಿ ನೋಡುತ್ತಾ ತಮ್ಮ ಕೃತಿಗಳನ್ನು ರಚಿಸುತ್ತಿದರು. ಇದಕ್ಕೆ ಬದಲಾಗಿ ಲೇವಿ ಸ್ಟ್ರಾಸ್ ಈ ಸಾಂಸ್ಕೃತಿಕ ಪಠ್ಯಗಳನ್ನು ಸೃಷ್ಟಿಸುವ ಮನುಷ್ಯನ/ಸಮಾಜದ ಮನಸ್ಸು ಹೇಗೆ ಸಾರ್ವತ್ರಿಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿದನು. ಈ ಪಠ್ಯಗಳು ಮೇಲ್ಮೆಯ್ಮಟ್ಟದಲ್ಲಿ ಮತ್ತು ವಿವರಣೆಯಲ್ಲಿ ಭಿನ್ನವಾಗಿ ಕಂಡರೂ ಆಳದಲ್ಲಿ ಅವೆಲ್ಲ ಒಂದೇ ರೀತಿಯ ರಚನೆಗಳನ್ನು ಹೊಂದಿರುತ್ತವೆ ಎಂಬುದನ್ನು ವಿಶ್ಲೇಷಿಸಿ ತೋರಿಸಿದನು. ಇದರ ಮೂಲಕ ಪ್ರತಿಯೊಂದು ಸಮಾಜವೂ ಮನುಷ್ಯನ ಬೌದ್ಹಿಕ ಸಮಗ್ರತೆಯನ್ನು ಸೃಷ್ಟ್ಯಿಸಿಕೊಳ್ಳುತ್ತದೆ ಎಂದು ತೋರಿಸಿದ. ‘tristas tropics’ ೧೯೫೫ ಒಂದು ರೀತಿಯಲ್ಲಿ ಆತನ ಮಾನವಶಾಸ್ತ್ರ ಅಧ್ಯಯನದ ದಾರ್ಶನಿಕ ಆತ್ಮಕತೆ. ಇದರಲ್ಲಿ ಮತ್ತು ‘ ರಾಚನಿಕ ಮಾನವಶಾಸ್ತ್ರ’ ಗಳಲ್ಲಿ ರಾಚನಿಕ ‘ ವಿಧಾನಗಳನ್ನು ಅನ್ವಯಿಸಿ ಅದಕ್ಕೆ ನಿದರ್ಶನಗಳನ್ನು ಕೊಟ್ಟು , ರಚನವಾದವನ್ನು ಹುಟ್ಟು ಹಾಕಿದ. ಪ್ರತಿಯೊಂದು ಸಂಕಥನವೂ ಎರಡು ರೀತಿಯಲ್ಲಿ ಸಂಯೋಜಿತವಾಗಿರುತ್ತದೆ ಇವುಗಳನ್ನು ಘಟಕಗಳಾಗಿ ಒಡೆದು ನೋಡುವುದು ಒಂದು ರೀತಿಯ ಸಂಯೋಜನೆಯಾದರೆ, ಅದೇ ಸಂಕಥನದಲ್ಲಿ ಅನೇಕ ಘಟಕಗಳನ್ನು ಬೇರೆ ಬೇರೆ ರೂಪದಲ್ಲಿ ಪುನರಾವರ್ತನೆಯಾಗಿರುತ್ತದೆ. ಈ ಗುಣವು ಮೌಖಿಕ ಸಂಕಥನ ಮತ್ತು ಸೃಜನಶೀಲ ಸಂಕಥನಗಳಲ್ಲಿ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂದು ಅವನು ವಿಶ್ಲೇಷಿಸಿ ತೋರಿಸಿದ. ಯಾವುದೇ ಕಥಾನಕದಲ್ಲಿ ಹೊಸ ಅರ್ಥ ಸೃಷ್ಟಿಯಾಗುವುದು ಈ ವೈರುಧ್ಯಗಳು ಸಂಧಿಸುವ ಜಾಗದಲ್ಲಿ, ಒಂದು ಸಾಂಸ್ಕೃತಿಕ ಪಠ್ಯದ ಅರ್ಥವನ್ನು ಗ್ರಹಿಸಬೇಕಾದರೆ ಈ ಸಾರ್ವರ್ಥಿಕ ಗುಣವನ್ನು ಓದುಗ ಕಂಡುಕೊಳ್ಳುವುದೇ ಆಗಿದೆ. ಇದು ಮೌಖಿಕ ಮತ್ತು ಲಿಖಿತ ಸಾಂಸ್ಕೃತಿಕ ಪಠ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ಹೀಗೆ ಪ್ರತಿಯೊಂದು ಪಠ್ಯವನ್ನುಸೃಜಿಸುವ ಮನಸ್ಸು, ಅದು ಬುಡಕಟ್ಟು ಜನಾಂಗದವರದ್ದೆ ಆಗಿರಲಿ, ಮೌಖಿಕ ಸಂಪದ್ರಾಯದ ಸಮಾಜದ್ದೆ ಆಗಲಿ ಅಥವಾ ಹೆಚ್ಚು ಅಮೂರ್ತ ಚಿಂತನೆಯ ಸಮಾಜವೇ ಆಗಲಿ ಅಷ್ಟೇ ಮೂರ್ತವೂ, ಅಮೂರ್ತವೂ ಆದ ಆಲೋಚನಾಕ್ರಮಗಳನ್ನು ಹೊಂದಿರುತ್ತದೆ. ‘ದ ಸಾವೆಜ್ ಮೈಂಡ್’ (೧೯೬೨ ) ಎನ್ನುವ ಪುಸ್ತಕದಲ್ಲಿ ಈ ಪರಿಕಲ್ಪನೆಯನ್ನು ವಿಶ್ಲೇಷಿಸಲಾಗಿದೆ.
ಹೇಗೆ ಲೆವಿ ಸ್ಟ್ರಾಸ್ ನ ಸಂರಚನಾವಾದವು ಅನಂತ ಸಾಂಸ್ಕೃತಿಕ ಪಠ್ಯಗಳನ್ನು ಒಂದು ನಿರ್ಧಿಷ್ಟವಾದ ಆಲೋಚನಾಕ್ರಮಕ್ಕೆ ಒಳಪಡಿಸುತ್ತ ಸಾಂಸ್ಕೃತಿಕ ಪಠ್ಯಗಳು, ಹೇಗೆ ಒಂದು ಸಾಮಾಜಿಕ ವ್ಯವಸ್ತೆಯ ಸಂವಹನ ವಿಧಾನವಾಗಿರುತ್ತದೆ ಎಂಬುದನ್ನು ತೋರಿಸಿಕೊಡುವುದೇ, ವಿಶ್ಲೇಷಕನ ಕಾರ್ಯವೆಂದು ಅವನು ಹೇಳಿದನು.
7ಲೆವಿ ಸ್ತ್ರಾಸನು ಸೃಷ್ಟಿಪುರಣದ ಬಗ್ಗೆ ವಿಶ್ಲೇಷಿಸುತ್ತಾ ಎನ್ನುವುದು ಒಂದು ರೀತಿಯ ಭಾಷೆ, ಇದು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು ಸಂಮ್ಮಿಲನಗೊಂದು ವ್ಯಕ್ತಪಡಿಸುವ ಆಲೋಚನಾಕ್ರಮ. ಇದು ಸಂಗೀತದಂತೆ ಕಾಲಾತೀತವಾಗಿ ಕೆಲಸ ಮಾಡುತ್ತಿರುತ್ತದೆ” ಎಂದು ನಿರೂಪಿಸಿದನು. ಸೃಷ್ಟಿಪುರಾಣಗಳೆಲ್ಲವೂ ಬೇರೆ ಬೇರೆಯಾದಂತೆ ಕಂಡರೂ ಅಂತರ್ಗತವಾಗಿ ಒಂದೇ ರೀತಿಯ ರಚನೆಯನ್ನು ಹೊಂದಿರುತ್ತವೆ ಎಂದು ತೋರಿಸಿಕೊಟ್ಟ. ಸೃಷ್ಟಿಪುರಾಣದ ಮುಖ್ಯ ಕಾರ್ಯವೆಂದರೆ ಸಮಾಜವನ್ನು ಒಂದು ವ್ಯವಸ್ಥೆಗೆ ಒಳಪಡಿಸುವುದು ಮತ್ತು ಆ ವ್ಯವಸ್ತೆಯನ್ನು ಮುಂದುವರೆಸಿಕೊಂಡು ಹೋಗುವುದು. ಈ ಸೃಷ್ಟಿಪುರಾಣಗಳು ಕಾಲದಿಂದ ಕಾಲಕ್ಕೆ ಆಂತರಿಕವಾಗಿ ಬದಲಾಗುತ್ತಿರುತ್ತವೆ. ಹಳೆಯ ಆಲೋಚನಾಕ್ರಮ ಬಿಟ್ಟು ಹೊಸ ಆಲೋಚನಾಕ್ರಮ ಸೇರಿಕೊಳ್ಳಬಹುದು. ಇಷ್ಟಾದರೂ ಆಂತರಿಕವಾಗಿ ಸಾಂಕೇತಿಕತೆ ಅಚಲವಾಗಿ ಉಳಿದಿರುತ್ತದೆ ಎಂದು ಅವನು ತನ್ನ “ಮಿಥ್” ಎಂಬ ಹೊತ್ತಿಗೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಸೃಷ್ಟಿಪುರಾಣವು ವೈರುಧ್ಯದ ಆಲೋಚನಕ್ರಮದಿಂದ ಹೊರಟು ಆ ವೈರುಧ್ಯವನ್ನು ಬಿಡಿಸಿಕೊಳ್ಳುವ ಕಡೆಗೆ ದುಡಿಯುತ್ತದೆ ಎಂದು ತೋರಿಸಿಕೊಟ್ಟ. ಅಲ್ಲದೆ ಸೃಸ್ತಿಪುರಾಣದಲ್ಲಿ ಒಂದು ಅಧಿಕೃತವಾದ ಪಠ್ಎಂಬುದಿಲ್ಲ. ಇವು ಪಾಠಾಂತರಗಳಲ್ಲಿ ಅವತಾರವೆತ್ತುತ್ತಿರುತ್ತವೆ ಎಂದು ತೋರಿಸಿಕೊಟ್ಟ.Mythologiques I – IV(1965)
ಇವನ ಮತ್ತೊಂದು ಪ್ರಭಾವಶಾಲಿ ಕೃತಿಯೆಂದರೆ “ಬಂಧುತ್ವದ ಅಧ್ಯಯನ”. ಇವನ ವಿಶ್ಲೇಷಣೆ ಬರುವವರೆಗೂ ಮಾನವಶಾಸ್ತ್ರಜ್ಞರು ಬಂದುತ್ವದ ಅಧ್ಯಯನ ಎಂದರೆ ಕುಟುಂಬದ ಅಧ್ಯಯನ ಎಂದು ಭಾವಿಸಿದ್ದರು. ಆದರೆ ಈತ ಬಂಧುತ್ವಕ್ಕು , ಮದುವೆ ನಿಯಮಗಳಿಗೂ, ಸಂಪತ್ತಿನ ವರ್ಗಾವಣೆ ಮತ್ತು ಕುಟುಂಬದ ಗುಂಪುಗಗಳು ಹೇಗೆ ಘಟಕಗಳಾಗಿರುತ್ತವೆ ಎನ್ನುವುದರ ಮೇಲೆ ಒತ್ತುಕೊಟ್ಟ. ಅಲ್ಲದೆ ಈ ಕೃತಿಯು ಹೆಣ್ಣು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಬದಲಾಗುತ್ತ ಹೋಗುವ ಸಂಬಂಧವನ್ನು ವಿವರಿಸುವ ಪಠ್ಯದಂತೆ ಕೆಲಸ ಮಾಡುತ್ತದೆ. ಈ ಬದಲಾಗುವ ಸಂದರ್ಭದಲ್ಲಿ ಹೆಣ್ಣು ಪಡುವ ಪಾಡು ಎಂಥದು ಎಂಬ ವಿಶ್ಲೇಷಣೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಇದರ ವಿಸ್ತೃತವಾದ ಅದ್ಯಯನವನ್ನು ‘ಯುಗಾಂತ’ ಖ್ಯಾತಿಯ ಮಾನವಶಾಸ್ತ್ರಜ್ಞೆ, ಇರಾವತಿ ಕರ್ವೆ ಭಾರತದ ಸಂಧರ್ಭದಲ್ಲಿ ಅನ್ವಯಿಸಿ ಆಳವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ವಿಶ್ಲೇಷಣೆಯು ಒಂದು ಪ್ರಮುಖವಾದ ಅಂಶವನ್ನು ಹೊರಗೆಡವಿದೆ. ಪಶ್ಚಿಮ ಭಾರತದಲ್ಲಿರುವ ಆರ್ಯ ಸಮುದಾಯಗಳ ಮೇಲೆ ದ್ರಾವಿಡ ಸಂಸ್ಕೃತಿಯ ಬಂಧುತ್ವ ಸಂರಚನೆಯು ಪ್ರಭಾವ ಬೀರಿರುವದನ್ನು ತೋರಿಸುತ್ತದೆ.
ಹೀಗೆ ಲೆವಿ ಸ್ಟ್ರಾಸ್ ನು ಭಾಷಾಶಾಸ್ತ್ರದಿಂದ ಪ್ರಭಾವಿತನಾಗಿ ಸಂರಚನಾವಾದವನ್ನು ಮಾನವಶಾಸ್ತ್ರದ ಅಧ್ಯಯನಕ್ಕೆ ಅನ್ವಯಿಸಿದನು. ಭಾಷಾಶಾಸ್ತ್ರವು ಹೇಗೆ ಒಂದು ಪದದ ಅರ್ಥವನ್ನು ಹುಡುಕದೆ ಪದಗಳು ತಮ್ಮ ಜೋಡಣೆಯಲ್ಲಿ ಸೃಷ್ಟಿಸುವ ವಿನ್ಯಾಸವನ್ನು ಕಂಡುಕೊಳ್ಳುತ್ತದೋ, ಅಂತೆಯೇ ಮಾನವಶಾಸ್ತ್ರದ ಪಠ್ಯಗಳು ಒಂದು ಘಟಕದ ಅರ್ಥವನ್ನು ಮಾತ್ರ ಗ್ರಹಿಸದೆ ಆ ಘಟಕಗಳ ಸಂಯೋಜನೆಯನ್ನು ಅಭ್ಯಯಿಸುತ್ತದೆ. ಈ ಮೂಲಕ ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬದನ್ನು ಅರ್ಥ ಮಾಡಿಕೊಳ್ಳಲು ಅನುವಾಗುವಂತಹ ಸಿದ್ದಾಂತವನ್ನು ಲೆವಿ ಸ್ಟ್ರಾಸ್ ಕೊಟ್ಟ. ಮನುಷ್ಯನು ಪ್ರಕೃತಿಯನ್ನೂ ಸಂಸ್ಕ್ರುತಿಯನ್ನಾಗಿ ಮಾರ್ಪಡಿಸಿಕೊಳ್ಳುವ ರೀತಿಯನ್ನು ಅರಿಯುವುದು ಹೇಗೆ ಎಂದು ತನ್ನ ಬರಹಗಳಲ್ಲಿ ವಿಶ್ಲೇಷಿಸಿದನು. ಅವರ ಉಳಿದ ಪ್ರಮುಖ ಪುಸ್ತಕಗಳೆಂದರೆ :”The Raw and the Cooked”.
8ಲೆವಿ ಸ್ಟ್ರಾಸ್ ತನ್ನ ಬದುಕಿನ ನೂರೊಂದು ವರ್ಷಗಳಲ್ಲಿ ೩೫ ವರ್ಷಗಳಷ್ಟು ದೀರ್ಘಕಾಲ ಬುಡಕಟ್ಟು ಜನಾಂಗದ ಅಧ್ಯಯನವನ್ನು ನಡೆಸಿದ. ಇವನ ಬರಹಗಳ ಪ್ರಭಾವ ಸಾಹಿತ್ಯ ಪಠ್ಯಗಳನ್ನು ವಿಶ್ಲೇಷಿಸುವುದರ ಮೇಲೂ ಆಗಿದೆ. ತೊದರೋವ್ ಬರೆದ ‘’, (೧೯೨೪) ಇದಕ್ಕೆ ಒಳ್ಳೆಯ ಉದಾಹರಣೆ. ಲೆವಿ ಸ್ಟ್ರಾಸ್ ಮೌಖಿಕ ಪರಂಪರೆ ಮತ್ತು ಲಿಖಿತ ಪರಂಪರೆಗೆ ಇದ್ದ ಅಂತರವನ್ನು ಕಡಿದು ಹಾಕಿದನು. ೧೯೯೦ ರ ದಶಕ ನಂತರ ಬರುತ್ತಿರುವ ಸಾಂಸ್ಕೃತಿಕ ಅಧ್ಯಯನದ ಹಿಂದೆ ಲೆವಿ ಸ್ಟ್ರಾಸ್ ಅಚ್ಚಳಿಯದೆ ನಿಂತಿದ್ದಾನೆ. ಇವನ ಈ ವಿಶ್ಲೇಷಣಾ ವಿಧಾನವನ್ನು ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳು ‘ತೌಲನಿಕ ಸಾಹಿತ್ಯ’ ಎಂಬ ಹೆಸರಿನಲ್ಲಿ ಬೋಧಿಸುತ್ತಿವೆ ಮತ್ತು ಸಂಶೋಧನೆಯನ್ನು ನಡೆಸುತ್ತಿವೆ.
ಈತನ ಸಂಶೋಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವನನ್ನು ಗೌರವಿಸಿವೆ. ಪ್ರಮುಖವಾಗಿ ೧೯೬೬ ರಲ್ಲಿ ವೆನರ್ ಗ್ರೇನ್ ಫೌಂಡೇಶನ್, ವೈಕಿಂಗ್ ಫಂಡ್ ಮೆಡಲ್ ಅನ್ನು ಕೊಟ್ಟು ಗೌರವಿಸಿತು. ೧೯೭೦ರಲ್ಲಿ ಇರಾಸ್ಮಸ್ ಬಹುಮಾನ ಇವನ್ದಾಯಿತು. ಈತನಿಗೆ ಆಕ್ಸ್ಫರ್ಡ್,ಏಲ್, ಹಾರ್ವಡ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ಗಳನ್ನೂ ಕೊಟ್ಟು ಗೌರವಿಸಿವೆ. ಅನೇಕ ಸಂಶೋಧನಾ ಸಂಸ್ಥೆಗಳು ಇವನಿಗೆ ಗೌರವ ಸದಸ್ಯತ್ವವನ್ನು ಕೊಟ್ಟಿವೆ. ಅವುಗಳಲ್ಲಿ ಮುಖ್ಯವಾದವು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ದಿ ಅಮೇರಿಕನ್ ಅಕಾಡೆಮಿ ಅಂಡ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್, ದಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ದಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ. ಹೀಗೆ ನೂರು ಮೊಂಬತ್ತಿಗಳನ್ನೂ ಹಚ್ಚಿಸಿ ತನ್ನ ನೂರನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಲೆವಿ ಸ್ಟ್ರಾಸ್ ನಿಂದ ಇನ್ನು ಏನನ್ನು ನಿರೀಕ್ಷಿಸೋಣ!?

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

Tingalu – June 2009

11ನೂರಕ್ಕೆ ತೊಂಬತ್ತು ಭಾಗ ಔಷದಿ ಸಸ್ಯಗಳು ನಮ್ಮ ಬುಡಕಟ್ಟು ಜನಾಂಗಗಳು ವಾಸಿಸುವ ಕಾಡುಗಳಲ್ಲಿ ಸಿಗುವಂತವು. ಆದರೆ ಅಧುನಿಕ ಬದುಕಿನ ದಾಪುಗಾಲಿಗೆ ಸಿಕ್ಕಿ ಬಹುಪಾಲು ಕಾಡುಗಳು ನಾಶವಾಗುತ್ತಿವೆ. ಕಾಡಿನ ಮೂಲ ಜ್ಞಾನವಿರುವುದು ಬುಡಕಟ್ಟು ಜನಾಂಗಗಳಲ್ಲಿ. ಸಾವಿರಾರು ವರ್ಷಗಳಿಂದ ಇವರು ಕಾಡಿನಲ್ಲಿ ಬದುಕುತ್ತ , ತಮಗೆ ಬರುತ್ತಿರುವ ಅನೇಕ ಖಾಯಿಲೆಗಳನ್ನು ವಾಸಿಮಾಡಲು ಈ ಕಾಡಿನ ಸಸ್ಯಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ೧೦೦ ಎಕರೆಯಷ್ಟು ಅರಣ್ಯ ನಾಶವಾಗುತ್ತಿದೆ . ಪ್ರಪಂಚದಲ್ಲಿರುವ ಸಸ್ಯದಲ್ಲಿ ಶೇ .೧೦ ನಿರ್ನಾಮವಾಗುತ್ತಿವೆ. ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದವರನ್ನು  ಕಾಡಿನಿಂದ ಹೊರಗೆ ಹಾಕುವುದರ ಮೂಲಕ ಅವರಿಗಿದ್ದ ಜಾನಪದ ವೈದ್ಯ ಜ್ಞಾನವನ್ನು ನಾಶ ಮಾಡಲಾಗುತ್ತಿದೆ. ಈ ಜ್ಞಾನಪದ್ಧತಿಯನ್ನು ಕಾಪಾಡಿಕೊಂಡು ಬರುತ್ತಿರುವವರು ಮುಖ್ಯವಾಗಿ ಬುಡಕಟ್ಟು ಜನಾಂಗದ  ‘ದೇವರಗುಡ್ಡರು’ (ಶಮಣರು). ಆದರೆ ಇವರು ಕಾಡನ್ನೇ ಪ್ರವೇಶಿಸದಂತೆ ತಡೆಯಲಾಗುತ್ತಿರುವ ಕಾರಣ ಈ ಶಮಣರು ತಮ್ಮ ವೈದ್ಯ ಪದ್ಧತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ .

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಜನಾಂಗೀಯ ಔಷಧಿ ಪದ್ದತಿಯನ್ನು, ಅದನ್ನು ಪೊರೆದುಕೊಂಡು ಬರುತ್ತಿರುವ ದೇವರಗುಡ್ಡರನ್ನು ದಕ್ಷಿಣ ಅಮೇರಿಕಾದ ಅಮೆಜಾನ್ ಕಾಡುಗಳಲ್ಲಿ ಭೇಟಿ ಮಾಡಿದ ಧೀರ  – ಮಾರ್ಕ್ .ಜೆ .ಪ್ಲಾಟ್ಕಿನ್ . ಈತ ಅವರ ವಿಷದ ಬಾಣಗಳಿಂದ ಬದುಕುಳಿದಿದ್ದೆ ಒಂದು ಪವಾಡ. ಹಾಗೆ ಬದುಕುಳಿದು ಅವರಲ್ಲೇ ಒಬ್ಬನಾಗಿ ಸುಮಾರು ೩೫ ವರ್ಷಗಳಿಂದ ಗುಡ್ಡರ ಶಿಷ್ಯನಾಗಿ ಸುಮಾರು ೩೦೦ಕ್ಕೂ  ಹೊಸ ಔಷಧೀಯ ಸಸ್ಯಗಳನ್ನು ಕಂಡುಹಿಡಿದ ಸಾಹಸ ಈತನದು.

ಪ್ಲಾಟ್ಕಿನ್ ಹುಟ್ಟಿದ್ದು – ಮೇ ೨೧,೧೯೫೫ ರಲ್ಲಿ. ಅಮೆರಿಕಾದ  ನ್ಯೂ ಒರ್ಲೆಯಾನ್ಸ್ ನಲ್ಲಿ. ಹದಿಹರೆಯದ ಹುಡುಗನಾಗಿದ್ದಾಗಲೇ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ  ವಿಶೇಷ ಆಸಕ್ತಿಯನ್ನು  ತಳೆದ ಈರ ೧೬ನೇ ವಯಸ್ಸಿನಲ್ಲೇ  ತಂದೆ, ತಾಯಿಯನ್ನು ಕಳೆದುಕೊಂಡು, ಓದನ್ನು ಮುಂದುವರಿಸಲಾಗದೆ ಶಾಲೆಗೆ ಶರಣು  ಹೊಡೆದ . ಬದುಕಿಗಾಗಿ ಅಲ್ಲಿ ಇಲ್ಲಿ ಕೆಲಸ ಮಾಡಿದ. ಅನೇಕ ಕನಸುಗಳನ್ನು ಹೊತ್ತು ತಿರುಗಿದ. ಹದಿ ವಯಸ್ಸಿನ ಹುಡುಗರು ಕಾರು ಡ್ರೈವಿಂಗ್ , ಆಲ್ಕೋಹಾಲ್ , ಹುಡುಗಿಯರೊಡನೆ ಡೇಟಿಂಗ್ ಗಳಲ್ಲಿ ಮುಳುಗಿದಾಗ ಈತ ಕಾಡಿನ ಪ್ರಾಣಿಗಳು, ಸಸ್ಯಗಳು , ಕಾಡಿನ ತಿರುಗಾಟಗಳ ಕನಸು ಕಾಣುತ್ತಿದ್ದ . ಈ ಕನಸುಗಳಲ್ಲಿಯೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ (ತಾನೇ ಗಳಿಸಿದ ಹಣವನ್ನು ತೆತ್ತು) ಕಾಲೇಜಿಗೆ ಸೇರಿದನು. ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಶೂನ್ಯದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ಭೋಧನೆ ನಡೆಯುತಿತ್ತು. ಇದರಿಂದ ಬೇಸತ್ತು ಮಧ್ಯದಲ್ಲೇ  ಕಾಲೇಜನ್ನು ಬಿಟ್ಟು , ಗಳಿಸಿದ್ದ  ಹಣವನ್ನು ಕಳೆದುಕೊಂಡು , ಬೀದಿಗೆ ಬಿದ್ದ . ಹೀಗೆ ಅಲೆದಾಡುತ್ತಿದ್ದಾಗ  ಅವನಿಗೆ ಯಾರೋ ಪ್ರ್ರಾಣಿಶಾಸ್ತ್ರದ ಮ್ಯೂಸಿಯಂನಲ್ಲಿ ಒಂದು ದಿನಗೂಲಿ ಕೆಲಸವನ್ನು ಕೊಡಿಸಿದರು . ಅಲ್ಲಿ ಆತ ಪ್ರಾಣಿಗಳ ಅವಶೇಷಗಳನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು , ಬದುಕಿರುವ ಪ್ರಾಣಿಗಳ ಮೈತೊಳೆದು ಆಹಾರ ಕೊಟ್ಟು, ಅವುಗಳ ಮಲ, ಮೂತ್ರವನ್ನು  ತೊಳೆದು ಸ್ವಚ್ಛಪಡಿಸುವ ಕೆಲಸವನ್ನು ಮಾಡಬೇಕಿತ್ತು . ಒಂದಲ್ಲಾ ಒಂದು ದಿನ ಯಾರಾದರೊಬ್ಬರು ತನ್ನನ್ನು ಮಳೆ ಕಾಡಿಗೆ ಅದರಲ್ಲೂ ಅಮೆಜಾನ್ ಕಾಡಿಗೆ ಕರೆದೊಯ್ಯಬಹುದೇ ಎಂಬ ಕನಸನ್ನು ಮುಂದುವರಿಸಿಯೇ ಇದ್ದ. ಇವನು ಗೀಳನ್ನು ಅರಿತ ಸಹ ಕೆಲಸಗಾರನೊಬ್ಬ ರಾತ್ರಿ ಶಾಲೆ ಸೇರಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದಲ್ಲಿ ಪದವಿಯನ್ನಲ್ಲದಿದ್ದರು  ಒಂದು ಸೆಮಿಸ್ಟರ್ ಕೋರ್ಸ್ ಮಾಡಬಹುದೆಂದು  ಸಲಹೆ ಮಾಡಿದನು. ಈ ವಿಷಯದಲ್ಲಿ ಈ ರೀತಿಯ ಕೋರ್ಸ್ ಇದ್ದದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ  ಮಾತ್ರ. ಈಗ ಇಲ್ಲದಿದ್ದರೆ ಮುಂದೆ ಸಾಧ್ಯವೇ ಇಲ್ಲ ಎಂಬ ಸಂಧರ್ಭ ಅದು. ಅಲ್ಲದೆ ಜೀವನ್ ಪರ್ಯಂತ ಈ ಕಾರಣಕ್ಕಾಗಿ ಪರಿತಪಿಸುತ್ತೇನೆ ಎಂದುಕೂಂಡು ಹಾರ್ವರ್ಡ್ ವಿಶ್ವವಿದ್ಯಾನಿಲಯದತ್ತ ಮುಖ ಮಾಡಿದ, ಪ್ಲಾಟ್ಕಿನ್.

12ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪರಿಸರ ಇವನ ಕನಸಿಗೆ ಗುರಿಮೂಡಿಸಿತು. ವಿಶ್ವಮಾನ್ಯ ಪ್ರೊ.ಶುಲ್ಫ್ಸ್ ಎಂಬ ಸಸ್ಯಶಾಸ್ತ್ರಜ್ಞ. ಇವನಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿಸಿದರು. ಅವರು ದಕ್ಷಿಣ ಅಮೆರಿಕಾದ ಅಮಜಾನ್ ಮಳೆಯ ಕಾಡು. ಅದರ ಪರ್ಯಾವರಣ, ಮೂಲ ನಿವಾಸಿಗಳು ಅವರ ಬದುಕು, ಅವರು ಉಪಯೋಗಿಸುವ ಔಷಧೀಯ ಸಸ್ಯಗಳು, ಕೋಕಾ ಮತ್ತು ಕೊಕೈನ್ ಮತ್ತು ಮೆಕ್ಷಿಕೊದ ಅಣಬೆ ಸುತ್ತ ನಡೆಸುವ ಕ್ರಿಯಾವಿಧಿಗಳು, ಮಾದಕ ದ್ರವ್ಯಗಳು ಇವುಗಳಲೆಲ್ಲದರ ಚಿತ್ರಗಳನ್ನು ತೋರಿಸಿದರು. ಔಷಧಿಗೆ ಬಳಸುವ ಸುಮಾರು ೨೦೦೦ ಸಸ್ಯವರ್ಗಗಳನ್ನು ತೋರಿಸದರು. ಇದಕ್ಕಾಗಿ ಅವರು ೧೪ ವರ್ಷ ಅಮಜಾನ್ ಕಾಡಿನಲ್ಲಿ (೧೯೫೦ರ ದಶಕದಲ್ಲಿ) ಕಳೆದಿದ್ದರು. ಇದನೆಲ್ಲ ನೋಡಿ ಪ್ಲಾಟ್ಕಿನ್ಗೆ ಆಕಾಶವೇ ಕೈಗೆಟುಕಿದಂತಾಯಿತು. ಇಂತಹ ಮಳೆಯ ಕಾಡುಗಳು ಇಡೀ ಪ್ರಪಂಚದಲ್ಲಿ ಏಷ್ಯಾ, ಆಫ್ರಿಕಾ ಬಿಟ್ಟರೆ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳಲ್ಲಿ ಮಾತ್ರಾ ಕಂಡು ಬರುತ್ತವೆ. ಈ ಅಮೆಜಾನ ಕಾಡಿನಲ್ಲಿ ಪ್ರಪಂಚದಲ್ಲಿ ಕಂಡುಬರುವ ಸುಮಾರು ೬೦ ಸಾವಿರ ಸಸ್ಯಗಳಲ್ಲಿ ೨೫,೦೦೦ ಸಾವಿರ ಸಸ್ಯಗಳು ಬೆಳೆಯುತ್ತವೆ. ಇವುಗಳಲ್ಲಿ ಇನ್ನು ಎಷ್ಟೋ ಯಾರ ಕಣ್ಣಿಗೂ ಬಿದ್ದಿಲ್ಲ. ಅಧ್ಯಯನಕ್ಕೂ ಒಳಪಟ್ಟಿಲ್ಲ. ಈ ಪ್ರಪಂಚದಲ್ಲಿರುವ ಕೀಟಗಳಲ್ಲಿ ಸುಮಾರು ಶೇ.೮೦ರಷ್ಟು ಕೀಟಗಳು ಅಮೆಜಾನ್ ಕಾಡಿನಲ್ಲೇ ಇವೆ. ಅಲೆಕ್ಷ್ಗಾನ್ದರ್ ದಿ ಗ್ರೇಟ್, ಆಲಿವರ್ ಕ್ರಾಂವೆಲ್ ಅಲ್ಲದೆ  ಇನ್ನು ಲಕ್ಷಾಂತರ ಹೆಸರಿಲ್ಲದ ಜನರನ್ನು ಕೊಂದ ಮಲೇರಿಯಾ ಖಾಯಿಲೆಗೆ ಔಷಧಿ ಸಿಕ್ಕಿದ್ದು ಈ ಅಮೆಜಾನ್ ಕಾಡಿನಲ್ಲೇ. ಇದನ್ನು ತಲತಲಾ೦ತರದಿಂದ ಅಮೆಜಾನ್ ಕಾಡಿನ ಬುಡಕಟ್ಟು ಜನಾಂಗದವರು ಮಲೇರಿಯಾಕ್ಕೆ ಔಷಧಿಯಾಗಿ ಬಳಸುತ್ತಿದ್ದರು. ಇದೇ ಸಿಂಕೋನ.

ಒಂದು ದಿನ ಪ್ಲಾಟ್ಕಿನ್ ತರಗತಿಯನ್ನು ಮುಗಿಸಿ ಲಿಫ್ಟಿನಲ್ಲಿ ಇಳಿಯುತ್ತ್ತಿದ್ದಾಗ ಅಚಾನಕ್ಕಾಗಿ ಒಬ್ಬ ಪ್ರೊಫೆಸರ್ ಸಿಕ್ಕಿ ಅಮೆಜಾನ ಕಾಡಿನಲ್ಲಿರುವ ಪ್ರಾಣಿಗಳ ಅಧ್ಯಯನಕ್ಕೆ ಹೊಗಿತ್ತಿದ್ದೇನೆ , ಸಹಾಯಕನಾಗಿ ಬರುತ್ತಿಯಾ ಅಂತ ಕೇಳಿದರು. ಪ್ಲಾಟ್ಕಿನ್ಗೆ ಸ್ವರ್ಗ ಸಿಕ್ಕಿದಂತಾಗಿ ತಕ್ಷಣ ಒಪ್ಪಿಕೊಂಡುಬಿಟ್ಟ. ಅಲ್ಲಿಂದ ಶುರುವಾಯಿತು ಅವನ ಅಮೆಜಾನ ಕಾಡಿನ ಅಧ್ಯಯನ.

ಅಮೆಜಾನ್ ಕಾಡೆಂದರೆ ಮರಗಳು ಪೈಪೋಟಿಯ ಮೇಲೆ ನೂರಾರು ಅಡಿ ಎತ್ತರ ಬೆಳೆದು ನೆಲೆಕ್ಕೆ ಸೂರ್ಯನ ಬೆಳಕೇ ಬೀಳದಂತೆ ಚಪ್ಪರ ಕಟ್ಟಿರುತ್ತವೆ. ಪ್ರಾಣಿಶಾಸ್ತ್ರದ ಅಧ್ಯಯನಕ್ಕೆ ಸಹಾಯಕನಾಗಿ ದುಡುಯುತ್ತಿದ್ದಾಗಲೆ ಸಸ್ಯದ ಬಗ್ಗೆ ಮತ್ತು ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳತೊಡಗಿದ. ಕೆಲವರಿಗೆ ಕೆಲವು ಔಷಧೀಯ ಸಸ್ಯಗಳು ಗೊತ್ತಿರಬಹುದು ಆದರೆ ಅದರ ಪೂರ್ಣ ಪ್ರಮಾಣದ ಜ್ಞಾನ ಇರುವುದು ಬುಡಕಟ್ಟು ಜನಾಂಗದ ದೇವರಗುಡ್ಡವರಿಗೆ ಮಾತ್ರ ಎಂಬುದು ಅವನ ಅರಿವಿಗೆ ಬಂತು. ಆರು ತಿಂಗಳು ಅಧ್ಯಯನದ ನಂತರ ಮತ್ತೆ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗಿ ತಾನೊಬ್ಬನೇ ಔಷಧೀಯ ಸಸ್ಯಗಳ ಅಧ್ಯಯನಕ್ಕೆ ಮತ್ತೆ ಅಮೆಜಾನ್ ಕಾಡಿಗೆ ಹೊರಟ. ಅಲ್ಲಿ ಹೋದಾಗ ಅವನಿಗೆ ಅರಿವಿಗೆ ಬಂದಿದ್ದು ಅಮೇರಿಕಾ ದೇಶವೊಂದೇ  ಮೂಲಿಕೆ ಮೂಲದ ೧೨೦ ರೀತಿಯ ಔಷದಗಳನ್ನು ತಯಾರು ಮಾಡುತ್ತವೆ. ಇದರಿಂದ ಔಷಧಿ ಕಂಪನಿಗಳು ಒಂದು ವರ್ಷಕ್ಕೆ ಆರು ಇಲಿಯನ್ ಡಾಲರ್ ಗಳಿಸುತ್ತವೆ ಎಂದು ತಿಳಿಯಿತು. ಈ ಭೂಮಿಯ ಮೇಲೆ ನಾಶವಾಗಿಯೇ ಹೋಗಿದೆ ಎಂದು ತಿಳಿದಿದ್ದ ಸಿಂಕ್ಗೋ ಎಂಬ ಮರ ಉಳಿದಿರುವುದು ಇಲ್ಲೇ ಎಂದು ಕಂಡುಹಿಡಿದ.ಗರ್ಭಕೋಶದ ಕ್ಯಾನ್ಸರ್ ಅನ್ನು ಗುಣಪಡಿಸುವುದಕ್ಕೆ ಟ್ಯಾಕ್ಸೋಲ್ ಎಂಬ ಮರದ ಚಕ್ಕೆಯನ್ನು ಉಪಯೋಗಿಸಬಹುದು ಎಂಬುದನ್ನು ೧೯೯೨ ರಲ್ಲಿ ಕಂಡುಹಿಡಿದನು.ಅಲ್ಲದೆ ಈ ಬುಡಕಟ್ಟುಜನಾಂಗದ ಗುಡ್ಡರು ಲೈಂಗಿಕ ರೋಗಗಳನ್ನು ‘ಯೂ’ ಮರದ ಚಕ್ಕೆಯನ್ನು ಅರೆದು ಹಚ್ಚುವುದರಿಂದ ವಾಸಿಮಾಡಬಹುದೆಂದು ತೋರಿಸಿಕೊಟ್ಟರು. ಈಗ ಅದು ವಿಶ್ಲೇಷಣೆಯ ಹಾದಿಯಲ್ಲಿದೆ. ಸಾವಿರಾರು ವರ್ಷಗಳಿಂದ ಬುಡಕಟ್ಟು ಜನಾಂಗವು ಈ ರೀತಿ ಒಂದು ಜ್ನಾನಶಾಖೆಯನ್ನೇ ತೆರೆದಿಟ್ಟಿದೆ. ಪ್ಲಾಟ್ಕಿನ್ ಹೇಳುವ ಪ್ರಕಾರ “ಒಬ್ಬ ದೇವರ ಗುಡ್ಡ ಸತ್ತರೆ ಒಂದು ಲೈಬರಿಯೇ ಸುಟ್ಟುಹೋದಂತೆ”.

ಪಾಶ್ಚಾತ್ಯರು ಔಷಧೀಯ ಸಸ್ಯಗಳನ್ನು ಅಮೆಜಾನ್ ಬುಡಕಟ್ಟು ಜನಾಂಗದಿಂದ ಕಲಿತು ಕೊಟ್ಯಅಂತರ ಡಾಲರುಗಳ ವಹಿವಾಟುಗಳನ್ನು ನಡೆಸುತ್ತಲೇ ಇದ್ದಾರೆ . ಅದರ ಜೊತೆಗೆ ಅಮೆಜಾನ್ ಕಾಡುಗಳನ್ನೇ ಸೂರೆಗೊಳ್ಳುತ್ತಿದ್ದಾರೆ – ಬುಡಕಟ್ಟು ಜನರ ಹೆಸರನ್ನು ಹೇಳದೆ.

13ತನ್ನ ಕ್ಷೇತ್ರ ಕಾರ್ಯದ ಸಮಯದಲ್ಲಿ  ಪ್ಲಾಟ್ಕಿನ್ ಗೆ ಇದರ ಅರಿವು ಚೆನ್ನಾಗಿಯೇ ಆಯಿತು . ಆಟಗಾರರು ಯುವಕರು ಇಂದು ಜಗಿಯುವ ಚಿಕ್ಲೆಟ್ ಮತ್ತು ಚ್ಯುಯಿಂಗ್ ಗಂ  ಬಂದಿದ್ದು ಸಹ ಮೆಕ್ಸಿಕನ್ ಜನರು ತಮಗೆ ಆಯಾಸವಾಗಿದ್ದಾಗ ಅಗಿಯುತ್ತಿದ್ದ ಚಿಕಲ್ ಎಂಬ ಮರದ ಹಾಲಿನಿಂದ. ಈಗ ಅದನ್ನು ಉಪಯೋಗಿಸಿ ಚ್ಯುಯಿಂಗ್ ಗಮ್ ಮಾಡುವ ಕಾರ್ಖಾನೆಯೇ ಶುರುವಾಗಿದೆ. ಅಲ್ಲದೆ ಕೋಟ್ಯಾಂತರ ಡಾಲರುಗಳನ್ನು ಗಳಿಸುವ ಕಾರ್ಖಾನೆಯೂ ಆಗಿದೆ. ಹುಳುಕು ಹಲ್ಲಾದರೆ ಅಥವಾ ಹಲ್ಲುಕುಳಿಯಾದರೆ ಈ ಬುಡಕಟ್ಟು ಜನಾಂಗ ಲ್ಯಾಟಿಕ್ಸ್ ಎಂಬ ಮರದ ಹಾಲನ್ನು ಹಲ್ಲಿನ ಕುಳಿಗೆ ತುಂಬುತ್ತಿದ್ದರು. ಇಲ್ಲಿಯವರೆಗೂ  ಈ ಹಾಲನ್ನೇ ವೈದ್ಯರುಗಳು ಬಳಸುತ್ತಿದ್ದರು. ಇತ್ತೀಚಿಗೆ ಸಿಂಥೆಟಿಕ್ ನಲ್ಲಿ ಮಾಡಿದ ವಸ್ತುವನ್ನು ಹಲ್ಲಿನ ಕುಳಿ ತುಂಬಲು ಉಪಯೋಗಿಸುತ್ತಿದ್ದಾರೆ . ಆದರೆ ಈ ಸಿಂಥೆಟಿಕ್ ವಸ್ತುವು ಆರು ತಿಂಗಳು ಅಥವಾ ಒಂದು ವರ್ಷ ಮಾತ್ರ ಬಾಳಿಕೆ ಬರುತ್ತದೆ. ಆದರೆ ಈ ಲ್ಯಾಟಿಕ್ಸ್ ತುಂಬಿದ ಹಲ್ಲುಕುಳಿ ತಾನಾಗಿಯೇ ಬೀಳುವುವರೆಗೂ  ಅಥವಾ ಮನುಷ್ಯ ಬದುಕಿರುವವರೆಗೂ ಬಾಳಿಕೆ ಬರುತ್ತದೆ. ಅಲ್ಲದೆ ಇದರಿಂದ ಯಾವ ದಂತ ಕ್ರಿಮಿಗಳು ಮುತ್ತುವುದಿಲ್ಲ .

ಅತ್ತಿಮರದ ಭಾಗಗಳನ್ನು ಅನೇಕ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ . ವಸಡಿನಲ್ಲಿ ರಕ್ತ ಸುರಿಯುವುದನ್ನು ನಿಲ್ಲಿಸಲು ಮತ್ತು ಹೃದಯ ಸಂಭಂದಿ ಖಾಯಿಲೆಗಳಿಗೆ ಇದರಿಂದ ಔಷಧಿಗಳನ್ನು ತಯಾರಿಸುತ್ತಾರೆ . ಚರ್ಮರೋಗಗಳಿಗೂ ಸಹ ಇದರ ಔಷಧಿಯನ್ನು ಬಳಸುತ್ತಾರೆ . ಒಂದೇ ಔಷಧೀಯ ವಸ್ತುವನ್ನು ಬೇರೆ ಬೇರೆ ಪ್ರಮಾಣದಲ್ಲಿ ತಯಾರು ಮಾಡುವುದರಿಂದ ಬೇರೆ ಬೇರೆ ಖಾಯಿಲೆಗಳನ್ನು ಸಹ ವಾಸಿ ಮಾಡಬಹುದು ಎಂಬುದನ್ನು ಪ್ಲಾಟ್ಕಿನ್ ಅರಿತುಕೊಂಡ . ಹುಳಕಡ್ಡಿ ಮುಂತಾದ ಚರ್ಮ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಇನ್ನೂ ಪಾಶ್ಚಾತ್ಯರಿಗೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇವರು ಉಪಯೋಗಿಸುವ ‘ಮನಿಬಲ್ಲಿ’ ಎಂಬ ಮರದ ಹಾಲಿನಿಂದ ಈ ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು ಎಂದು ಪ್ಲಾಟ್ಕಿನ್ ಅರಿತ .

ನಾವು ಈಗ ಉಪಯೋಗಿಸುತ್ತಿರುವ ಆಸ್ಪಿರಿನ್ ನೋವನ್ನು ಕೊಲ್ಲುವುದಕ್ಕಾಗಿ ಮಾತ್ರ. ಆದರೆ ಬುಡಕಟ್ಟು ಜನಾಂಗದವರು ಜ್ವರ, ಮೈ ಕೈ ಊತ , ಹೃದಯಾಘಾತ ಮತ್ತು ಲಕ್ವಾಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳಗಳಲ್ಲಿ ರಕ್ತ ಸರಿಯಾಗಿ ಹರಿಯುವಂತೆ ಮಾಡಲು , ಅಸ್ತಮಾ ಖಾಯಿಲೆಯನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಹೀಗೆ ಪ್ಲಾಟ್ಕಿನ್ ಸುಮಾರು ೩೦೦ ಹೊಸ ಔಷಧ ಸಸ್ಯಗಳನ್ನು ಕಂಡುಹಿಡಿದಿದ್ದಾನೆ . ೩೬ ವರ್ಷಗಳಿಂದ ಅಮೆಜಾನ್ ಕಾಡಿನ ಜೀವನಾಡಿಯನ್ನೇ ಹಿಡಿದಿದ್ದಾನೆ . ಇದಕ್ಕಾಗಿ ಈತ ಬುಡಕ್ಕಟ್ಟು ಜನರ ಗುಡ್ಡರ ಶಿಷ್ಯನಾಗೆ ಕೆಲಸ ಮಾಡುತ್ತಾ ಅವರಿಂದ ಕಲಿಯುತ್ತಲೇ ಇದ್ದಾನೆ.

ಇವೆಲ್ಲವನ್ನೂ ಕ್ರೂಢೀಕರಿಸಿ ಈತ ಟೇಲ್ಸ್ ಆಫ್ ಆ ಶಮನ್ಸ್ ಅಪ್ರೆಂಟಿಸ್ ಎಂಬ ಅತ್ಯಾಕರ್ಷಕ ಪುಸ್ತಕವನ್ನು ರಚಿಸಿದ್ದಾನೆ . ಈ ಪುಸ್ತಕ ಬರೀ ಔಷಧಿ ಸಸ್ಯಗಳ ಪಟ್ಟಿಯಲ್ಲ. ಈ ಪುಸ್ತಕ ಔಷಧೀಯ ಹಿಂದೆ ಇರುವ ಬುಡಕಟ್ಟು ಜನಾಂಗದ ಸಾವಿರಾರು ವರ್ಷಗಳ ಚರಿತ್ರೆಯನ್ನು ಬಿಚ್ಚಿಡುತ್ತದೆ. ಗುಡ್ಡರು ಸಾಮಾನ್ಯವಾಗಿ ಔಷಧಿಯನ್ನು ನೇರವಾಗಿ ರೋಗಿಗಳಿಗೆ ಕೊಡುವುದಿಲ್ಲ . ಔಷಧಿ ಸೇವನೆ ರೋಗಿಗೆ ಮತ್ತು ಗುಡ್ಡನಿಗೆ ಒಂದು ಕ್ರಿಯಾವಿಧಿಯ ರೂಪದಲ್ಲಿರುತ್ತದೆ. ಇದಕ್ಕೊಂದು ಸಾಂಸ್ಕೃತಿಕ ಮಹತ್ವ ಒಂದಿರುತ್ತದೆ. ಇದನ್ನು ಮನಗಂಡ ಪ್ಲಾಟ್ಕಿನ್ ವಿಧೇಯ ವಿದ್ಯಾರ್ಥಿಯಂತೆ ಇಂದೂ ಗುಡ್ಡರಿಂದ ಕಲಿಯುತ್ತಲೇ ಇದ್ದಾನೆ. ಇವನ ಕಲಿಕೆಯನ್ನು ಕಂಡು ಪರೀಕ್ಷೆ ಬರೆಯದೆ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಇವನಿಗೆ ಪದವಿಯನ್ನು ಕೊಟ್ಟಿತು. ಟಿಫ್ಟ್  ವಿಶ್ವವಿದ್ಯಾನಿಲಯ ಈತನ ಕೆಲಸಕ್ಕಾಗಿ ಡಾಕ್ಟರೇಟ್ ಡಿಗ್ರಿಯನ್ನು ಕೊಟ್ಟಿತು. ತಿರಿಯೋ ಎಂಬ ಬುಡಕಟ್ಟು ಜನಾಂಗದ ಭಾಷೆಯಲ್ಲಿ ಇರುವ ಪುಸ್ತಕಗಳು (ಪ್ರಪಂಚದಲ್ಲಿ) ಎರಡೇ ಎರಡು . ಒಂದು ಬೈಬಲ್ , ಇನ್ನೊಂದು ಈತ ಬರೆದ ಔಷಧೀಯ ಸಸ್ಯಗಳ ಪುಸ್ತಕ.

ಪ್ಲಾಟ್ಕಿನ್ ಔಷಧೀಯ  ಸಂಗ್ರಹಣೆ ಅಷ್ಟು ಸುಲಭದ್ದಾಗಿರಲಿಲ್ಲ ಈತ ಬ್ರೆಜಿಲ್ , ಫ್ರೆಂಚ್ ಗಯಾನ , ಸುರಿನಾಮೆ ಮತ್ತು ವೆನಿಜುಲಾ ದೇಶಗಳ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡುತ್ತಿದ್ದಾಗ ಅನೇಕ ಕಷ್ಟಗಳನ್ನು ಅನುಭವಿಸಿದನು ಮೊದಲ ಬಾರಿಗೆ ಈತ ಫ್ರಂಚ್ ಗಯಾನಕ್ಕೆ ಹೋದಾಗ ಹಾದಿಯ ಹೊರಗಿನ ಗುಡಿಸಿನಲ್ಲಿ ರಾತ್ರಿ ಮಲಗಿರುತ್ತಾನೆ . ಕಡುಕಪ್ಪು ರಾತ್ರಿಯಲ್ಲಿ ಹೊಳೆವ ಎರಡು ಕಣ್ಣುಗಳು ಗುಡಿಸಿಲಿನ ಬಿದುರಿನ ಕಂಡಿಯಲ್ಲಿ ಕಾಣುತ್ತವೆ . ಅದೊಂದು ಜಾಗ್ವಾರ್ ಪ್ರಾಣಿಯಾಗಿರುತ್ತದೆ. ಗುಡಿಸಿಲಿನ ಸುತ್ತಾ ಸುತ್ತು ಹಾಕುತ್ತಿರುತ್ತದೆ. ಈತನಿಗೆ ಜಂಘಾಬಲವೇ  ಉಡುಗಿಹೋಗುತ್ತದೆ .ಬೆವೆತು ಎದ್ದು ಕುಳಿತು ಬಿಡುತ್ತಾನೆ. ಇದು ಕನಸೋ , ನನಸೋ  ಎಂಬ ಭ್ರಮೆಗೆ ಒಳಗಾಗುತ್ತಾನೆ . ತನ್ನ ಸಹಾಯಕನ ಬರುವಿಗಾಗಿ ಬೆಳಗಾಗುವುದನ್ನೇ ಕಾಯುತ್ತಾ  ಕುಳಿತಿರುತ್ತಾನೆ . ಆಗ ದೇವರ ಗುಡ್ಡನೆ  ಬರುತ್ತಾನೆ . ಆತನನ್ನು ಕೇಳಿದಾಗ ಈ ಜಾಗ್ವಾರ್ ನಾನೇ ಎಂದು ಹೇಳುತ್ತಾನೆ. ಅವನು ಪ್ಲಾಟಿಕಿನ್ ಗೆ  ಧೈರ್ಯ ತುಂಬಲು ಹಾಗೆ ಹೇಳಿದನೋ ,ಅಥವಾ ….. ಪ್ಲಾಟಿಕಿನ್ ಗೆ ಸತ್ಯ ಏನಂಬುದು ಇಂದಿಗೂ ತಿಳಿದಿಲ್ಲ.

ಬುಡಕಟ್ಟು ಜನರು ಹೊಸದಾಗಿ  ಬಂದ ತಮ್ಮ ಅತಿಥಿಗಳನ್ನು ಸತ್ಕಾರ ಮಾಡಲು ಸಂಭ್ರಮಿಸುತ್ತಾರೆ . ದೇವರ ಗುಡ್ಡ  ಸೊರೆ ಬುರುಡೆಯಂಥ ಬುರುಡೆಯ  ಬಿರುಡೆ ತೆಗೆದು ಅತಿಥಿಯ ಅಂಗೈ  ಮೇಲೆ ಕರಿ ದ್ರವವನ್ನು ಸುರಿಯುತ್ತಾನೆ . ಅದನ್ನು ದೇವರಗುಡ್ಡ  ತಾನು ಮೂಸಿ ಅತಿಥಿಯೂ  ಮೂಸುವಂತೆ ತೋರಿಸುತ್ತಾನೆ . ಪ್ಲಾಟ್ಕಿನ್  ಮೂಸುತ್ತಾನೆ . ಮೂಸಿದ ತಕ್ಷಣ ಅವನ ನರ ನಾಡಿಗಳೆಲ್ಲ ಬಿಗಿದುಕೊಂಡು, ಒಡೆದು ರಕ್ತವೆಲ್ಲಾ ಸುರಿದು ಹೋಗುವ ಅನುಭವವಾಗುತ್ತದೆ. ಅವನು ಎದ್ದಿದ್ದು ಮರುದಿನ ಬೆಳಗ್ಗೆ ಹತ್ತು ಗಂಟೆಗೆ .

ಈತ ಇನ್ನೊಮ್ಮೆ ಸೆಖೆಯನ್ನು ತಾಳಲಾರದೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಮುಂದೆ ಈಜುವಷ್ಟರಲ್ಲಿ ಅವನಿಗೆ ಕಂಡದ್ದು ತೊಡೆ ಗಾತ್ರದ ಆರು ಅಡಿ ಉದ್ದದ ‘ವಿದ್ಯುತ್ ಈಲ್ ‘ ಎಂಬ ಜಲಚರ ಪ್ರ್ರಾಣಿ. ಅದು ಇವನೆಡೆಗೆ  ಶರವೇಗದಲ್ಲಿ ಬರುತ್ತಿರುತ್ತದೆ. ಆಗ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಈಜಿ ದಡ ಸೇರುತ್ತಾನೆ. ವಿದ್ಯುತ್ ಈಲ್ ಎಂಬ ಜಲಚರ ಪ್ರಾಣಿ ಮನುಷ್ಯ ಜೀವಕ್ಕೆ ಅತ್ಯಂತ ಮಾರಕವಾದುದ್ದು . ಇದು ತನ್ನ ಆಹಾರಕ್ಕೆ ಬಾಯಿ ಮತ್ತು ಬಾಲದಿಂದ ಒಮ್ಮೆಗೆ ಹೊಡೆಯುತ್ತದೆ. ಹೀಗೆ ಹೊಡೆದಾಗ ಮೈಗೆ ವಿದ್ಯುತ್ ಶಾಕ್ ಹೊಡೆದಂತಾಗುತ್ತದೆ . ಬದುಕುಳಿದರೆ ಮೂಳೆ ಮೂಳೆಗಳ ಸಂದುಗಳಲ್ಲೂ ಭರಿಸಲಾಗದ ನೋವುಂಟಾಗುತ್ತದೆ. ಹೆಚ್ಚಿಲಿನ ವೇಳೆ ಸಾವು ಸನ್ನಿಹಿತವಾದಂತಯೇ .

ಮತ್ತೊಮ್ಮೆ ಸುರಿನಾಮೆ ದ್ವೀಪಕ್ಕೆ ವಿಮಾನದಲ್ಲಿ ಬಂದಿಳಿದಿದ್ದೆ ತಡ ಅಲ್ಲಿ ಅವನಿಗೆ ಕಂಡಿದ್ದು ಭೀಕರ ಆಂತರಿಕ ಯುದ್ಧ. ಹಗಲಿನಲ್ಲಿ ಒಂದು ನೊಣವೂ ಬೀದಿಯಲ್ಲಿ ಸುಳಿಯುತ್ತಿರಲಿಲ್ಲ. ರಾತ್ರಿಯೆಲ್ಲಾ ಬಂದೂಕಿನ ಶಬ್ದದಿಂದ ತುಂಬಿ ಹೋಗುತ್ತಿತ್ತು. ಶಸ್ತ್ರಾತ್ರ ತುಂಬಿದ ವಾಹನಗಳ ಭರಾಟೆ, ಜನಗಳ ಕೂಗಾಟ, ಚೀರಾಟ, ಮನೆಯಿಂದ ಬುಡಕಟ್ಟು ಜನರನ್ನು ಎಳೆದೆಳೆದು ಕೊಳ್ಳುವ ದೃಶ್ಯ. ಇದು ಎಡಪಂಥೀಯ ಮತ್ತು ಬಲಪಂಥೀಯರ ನಡುವಿನ ಸಮರ. ಇದಕ್ಕಾಗಿ ಕ್ಯೂಬಾದ ಬಾಡಿಗೆ ಸೈನಿಕರು ಮುತ್ತಿದ್ದರು. ಪ್ಲಾಟಿಕಿನ್ ಇವೆಲ್ಲವನ್ನೂ  ಗಮನಿಸುತ್ತಾ ಗುಡಿಸಿಲೊಂದರಲ್ಲಿ ಅವಿತು ಕುಳಿತಿದ್ದ . ಕೊನೆಗೆ ಬಿಳಿ ಬಾವುಟದ ಪುಟ್ಟ ವಿಮಾನವೊಂದು ಬಂದಿತು. ಅದರಲ್ಲಿ ಈತ ಹಾರಿ ತಪ್ಪಿಸಿಕೊಂಡ. ನಾಲ್ಕು ದಿವಸ ಉಪವಾಸವನ್ನು ಮಾಡಿದ್ದ .

ಮತ್ತೊಮ್ಮೆ ವಿಷಬಾಣದ ಪ್ರಯೋಗ ನೋಡಲು ಮತ್ತು ಅದನ್ನು ತಯಾರಿಸುವ ವಿಷ ಸಸ್ಯಗಳನ್ನು ಅರಿಯಲು ಒಬ್ಬ ಗುಡ್ಡನ ಜೊತೆ ಕಾಡಿಗೆ ಹೋಗುತ್ತಾನೆ . ಅಲ್ಲಿ ಆ ಗುಡ್ಡ ಬಿಟ್ಟ ಬಾಣ  ಮರದ ಮೇಲೆ ಕುಳಿತ ಪಕ್ಷಿಯೊಂದಕ್ಕೆ ಹೊಡೆದು ಕೆಳಗೆ ಬೀಳುತ್ತದೆ. ಬೀಳುವಾಗ ಆ ಬಾಣ ಆ ಗುಡ್ಡನ ಕೈಗೆ ತರಚಿಕೊಂಡು ಕೆಳಗೆ ಬೀಳುತ್ತದೆ . ಒಂದು ನಿಮಿಷದಲ್ಲಿ ಆ ಗುಡ್ಡ ನೆಲಕ್ಕೆ ಬಿದ್ದು ಹೊರಳಾಡಿ ಪ್ರಾಣ ಬಿಡುವುದನ್ನು ಕಣ್ಣಾರೆ ಕಂಡು ವಿಚಲಿತನಾದನು. ಸ್ವಲ್ಪದರಲ್ಲಿಯೇ ಆ ಬಾಣ ತಗಲುವುದರಿಂದ ಬಚಾವಾಗುತ್ತಾನೆ.ಹೀಗೆ ಅನೇಕ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಪ್ಲಾಟ್ಕಿನ್ ಇಂದೂ ಬಟಾಬಯಲಾಗುತ್ತಿರುವ ಅಮೆಜಾನ್ ಕಾಡನ್ನುಉಳಿಸುವುದರಲ್ಲಿ ಮತ್ತು ಬುಡಕಟ್ಟು ಜನಾಂಗದ ಗುಡ್ದರಿಗೆ ಔಷಧಿ ತಯಾರಿಕೆಯನ್ನು ಕಲಿಸುತ್ತಾ ಹೊಸ ಗುಡ್ದರನ್ನು ತಯಾರು ಮಾಡುತ್ತಿದ್ದಾನೆ.

ಅತ್ಯಂತ ವೇಗವಾಗಿ ನಾಶಗೊಳ್ಳುತ್ತಿರುವ ಅಮೆಜಾನ್ ಕಾಡಿನ ಗುಡ್ದರ ಪಾರಂಪಾರಿಕ ಜ್ಞಾನ, ವಿವೇಕಾ ಮತ್ತು ಸಂಸ್ಕೃತಿಯನ್ನು ಉಳಿಸಲು ಈತ ಹಗಲಿರುಳು ದುಡಿಯುತ್ತಿದಾನೆ. ಇಂತಹ ಗುಡ್ದರ ಜ್ಞಾನ ಸಂಪತ್ತು ಕಾಡಿನಂತಯೇ ನಶಿಸಿಹೊಗುತ್ತಿರುವುದನ್ನು ತಡೆಗಟ್ಟಲು ಬುಡಕಟ್ಟು ಜನಾಂಗದ ಯುವಕರಿಗೆ ಅವರದೇ ಜ್ಞಾನವನ್ನು ವಾಪಸ್ಸು ಕೊಡುತ್ತಿದ್ದಾನೆ. ಪ್ಲಾಟ್ಕಿನ್ ಅಮೆಜಾನ್ ಕನ್ಸರ್ವೇಷನ್ ಟೀಂ ನ ಅಧ್ಯಕ್ಷನಾಗಿ ಜೀವ ವೈವಿಧ್ಯತೆಯನ್ನು , ಆರೋಗ್ಯವನ್ನು, ಸಂಸ್ಕೃತಿಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾನೆ. ಇವನ ಟೇಲ್ಸ್ ಆಫ್ ಎ ಶಮನ್ಸ್, ಅಪ್ರೆಂಟಿಸ್ ಮತ್ತು ಮೆಡಿಸಿನ್ ಕ್ವೆಸ್ಟ್ ಎಂಬ ಪುಸ್ತಕಗಳಿಗೆ ಟೈಮ್ ಮ್ಯಾಗಜಿನ್ ಹೀರೋ ಫಾರ್ ದಿ ಪ್ಲಾನೆಟ್ ಎಂಬ ಬಿರುದನ್ನೂ ಕೊಟ್ಟಿತು. ಈ ಬುಡಕಟ್ಟು ಜನಾಂಗಗಳನ್ನು ಕಾಡಿನಿಂದ ಕಿತ್ತೆಸೆಯದೆ ಅವರ ಜ್ನಾನಭಂಡಾರವನ್ನು ಉಪಯೋಗಿಸಿಕೊಂಡು ಅವರಿಗೆ ಅಲ್ಲೇ ಕೆಲಸಗಳನ್ನು ಕೊಡುವುದರ ಮೂಲಕ ಕಾಡಿನಲ್ಲೇ ಉಳಿಸಿಕೊಳ್ಳಬಹುದು ಎಂದು ನಂಬಿದ್ದಾನೆ. ಈತನು ಸುರಿನಾಮೆ, ಕೊಲಂಬಿಯಾ, ಬ್ರಜಿಲ್ ದೇಶದ ಜ್ಞಾನ ಸಂಪತ್ತನ್ನು ಉಳಿಸಲು ಶ್ರಮಿಸುತ್ತಿದ್ದಾನೆ. ಬುಡಕಟ್ಟು ಜನರ “ಬೌದ್ದಿಕ ಸಂಪತ್ತಿನ ಹಕ್ಕಿಗಾಗಿ” ಹೋರಾಟ ನಡೆಸುತ್ತಲೇ ಇದ್ದಾನೆ.

ಪ್ಲಾಟ್ಕಿನ್ ಅನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಈತ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ನ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ. ಸ್ಮಿತ್ ಸೋನಿಯನ್ ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧಕನಾಗಿಯೂ ಕೆಲಸ ಮಾಡಿದ್ದಾನೆ. ಪ.ಬಿ. ಎಸ್ ನೋವಾ ಎಂಬ ಕಂಪನಿಯು ಇವನ ಮೇಲೆ ಒಂದು ಡಾಕ್ಯುಮೆಂಟರಿ ಚಿತ್ರವನ್ನು ಸಹ ಮಾಡಿದೆ. ಅಮೆಜಾನ್ ಎನ್ನುವ ಸಿನೆಮಾದಲ್ಲಿ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಹೀಗೆ ಬೀದಿ ಅಲೆಯುತ್ತಿದ್ದ ಹುಡುಗನೊಬ್ಬನ ಕನಸು ಅವನ ನಿಷ್ಠೆಯಿಂದ ನನಸಾಗಿದೆ.

ಈ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಇರುವ ಕಾಡುಗಳು ಮತ್ತು ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ವೈದ್ಯಕೀಯ ಜ್ಞಾನವನ್ನು ಗುರುತಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಅನೇಕ ಔಷಧೀಯ ಸಸ್ಯಗಳನ್ನು, ಅವುಗಳ ಉಪಯೋಗವನ್ನು ಕಂಡುಹಿಡಿದುಕೊಳ್ಳುವ ಪಾಠವಾಗಿ ನಾವು ನೋಡಬೇಕಾಗಿದೆ. ಇಡೀ ಬುಡಕಟ್ಟು ಜನಾಂಗವಲ್ಲದೆ ಇತರರೂ ಆಶ್ಚರ್ಯಪಡುವಂತೆ ಖಾಯಿಲೆಗಳನ್ನು ವಾಸಿಮಾಡುವ ಕರ್ನಾಟಕದ ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಬೆಟ್ಟಕುರುಬ, ಇರುಳ, ಪಣಿಯ ಮುಂತಾದ ಜನಾಂಗಗಳ ದೇವರಗುಡ್ಡಗಳನ್ನು ನಮ್ಮ ಗುರುಗಳೆಂದು ಭಾವಿಸಿ ಅವರ ಅಪಾರ ಜನನ ಸಂಪತ್ತನ್ನು , ಕಾಡಿನ ಉಳಿವನ್ನು, ಪರ್ಯಾವರಣವನ್ನು ರಕ್ಷಿಸುವ ಕಲೆಯನ್ನು ನಾವು ಪ್ಲಾಟ್ಕಿನ್ನಂತವರಿಂದ ಕಲಿಯಬೇಕಾಗಿದೆ. ಅಲ್ಲದೆ ಈ ಜಾಗತೀಕರಣದ ಹೊತ್ತಿನಲ್ಲಿ ಏಕ ಮಾದರಿಯ ಜ್ನಾನಸ್ವಾಮ್ಯವನ್ನು ಬೆಳೆಸಿ ಪರ್ಯಾಯ ಆಲೋಚನಾಕ್ರಮವನ್ನು ಹುಟ್ಟುಹಾಕುವ ಕಾಲ ನಮಗೆ ಎದುರಾಗಿದೆ.