ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ
Tingalu – August 2009 ೧೯೮೩ ರ ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಾಲ್ಕು ವಾರಗಳ ಕಾಲ’ ಸಂಜ್ಞಾಶಾಸ್ತ್ರ ಮತ್ತು ಸಂರಚನವಾದ ‘ದ ಅಂತರ್ರಾಷ್ಷ್ಟ್ರೀಯ ಶಿಬಿರ ಏರ್ಪಟಿಸಿತ್ತು . ವಿಶ್ವದ ದಿಗ್ಗಜ ಭಾಷಾಶಾಸ್ತ್ರಜ್ಞರು ಬಂದಿಳಿದ್ದಿದ್ದರು . ಅಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಿತ್ತು . ನಮ್ಮಂಥ ಕಿರಿಯರಿಗೆ ಬೌದ್ಧಿಕ ಹಬ್ಬ . ೮೦ ವರ್ಷದ ಋಷಿ ಸದೃಶ ಅಮೇರಿಕಾದ ಡೇವಿಡ್ ಸಾವನ್ , ಜರ್ಮನಿಯ ರೋಲಾನ್ಡ್ ಪೋಸ್ನರ್ . ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯದ ಪಾಲ್ ಬ್ಯುಸ್ಸಾಕ್ , ಫ್ರಾನ್ಸಿನ ಕ್ರಾಮವೆಲ್, ಭಾರತದ ಅಶೋಕ ಕೇಲ್ಕರ್ , ಆರ್ .ಏನ್ .ಶ್ರೀವಾಸ್ತವ ಮುಂತಾದ ವಿದ್ವಾಂಸರ ಸಂಗಮವಾಗಿತ್ತು . ಇವರೆಲ್ಲರ ಜೊತೆಯಲ್ಲಿ ನಾವು ಬಹುನಿರೀಕ್ಷೆಯಲ್ಲಿದ್ದ ಮತ್ತೊಬ್ಬ ವಿದಾಂಸ ಫ್ರಾನ್ಸಿನ ಮಿಶೆಲ್ ಫುಕೋ…