Browsed by
Category: Other Magazine

ಜೇನುಕುರುಬ ಶಮಣರು(ಗುಡ್ಡರು) ಭಾಗ -೨

ಜೇನುಕುರುಬ ಶಮಣರು(ಗುಡ್ಡರು) ಭಾಗ -೨

Aruhu Kuruhu ಫಲವಂತಿಕೆಯ ಪೂಜೆಗೆ ಸುಮಾರು ಮುವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾಗ್ ಇತಿಹಾಸಕಾರರು ತಮ್ಮ ವೈಜ್ಞಾನಿಕ ವಿಧಾನದಿಂದ ಇದನ್ನು ಖಚಿತಪಡಿಸಿದ್ದಾರೆ. ಆದಿಮಾನವನ ಗುಹಾಂತರ್ಗತ ಚಿತ್ರಗಳೆ ಇದಕ್ಕೆ ಸಾಕ್ಷಿ. ಪ್ರಪಂಚದಾದ್ಯಂತ, ಅದರಲ್ಲೂ ಮಧ್ಯ ಮತ್ತು ಉತ್ತರ ಏಷ್ಯಾದಲ್ಲಿ, ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ, ಯೂರೋಪ್ ದೇಶಗಳಲ್ಲಿ ಚೈನಾ ಮತ್ತು ಟಿಬೆಟ್ಗಳಲ್ಲಿ ಈ ಫಲವಂತಿಕೆಯ ಕ್ರಿಯಾವಿಧಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಕಂಡುಬರುವ ಬಾದಾಮಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಪಕ್ಕಿಹಾಳ, ತೆಕ್ಕಲಕೋಟೆ ಮತ್ತು ಸಂಗನಕಲ್ಲುಗಳಲ್ಲಿ ಕಂಡುಬರುವ ಗವಿಗಳಲ್ಲಿ ಇರುವ ಕಲ್ಲಾಸರೆಯ ಬಣ್ಣದ ಚಿತ್ರಗಳು ಇಲ್ಲಿಯೂ ಸಹ ಫಲವಂತಿಕೆಯ ಕ್ರಿಯಾವಿಧಿಯನ್ನು ಆಚರಿಸುವ ಕ್ರಮವಿತ್ತೆಂದು ಕಂಡುಬರುತ್ತದೆ. ಇಂತಹ ಚಿತ್ರಗಳನ್ನ ವಿಶ್ಲೇಷಿಸಿರುವ ಮಿರ್ಸಿಯ ಎಲಿಯೆಡ್’ 1964ರಲ್ಲಿ ಮೊದಲ ಬಾರಿಗೆ ಮೇಲೆ ಕೊಟ್ಟಿರುವ ಚಿತ್ರವನ್ನು (ಚಿತ್ರ-1) ವಿಶ್ಲೇಷಿಸಿ ಇದು ಶಮಣರ (ಜೇನುಕುರುಬ ಭಾಷೆಯಲ್ಲಿ…

Read More Read More

‘ಸಾಹಿತ್ಯ ಮತ್ತು ಭಾಷೆ ಕುರಿತು’ – ಪುಸ್ತಕಲೋಕ

‘ಸಾಹಿತ್ಯ ಮತ್ತು ಭಾಷೆ ಕುರಿತು’ – ಪುಸ್ತಕಲೋಕ

ಸಾಹಿತ್ಯ ಮತ್ತು ಭಾಷೆ (೧೯೮೦) ಶಾಂತಿನಾಥ ದೇಸಾಯಿ , ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರು ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಮ್ಮ ಮಾತಾಪಿತೃಗಳ ನೆನಪಿಗಾಗಿ ‘ಮಾಸ್ತಿ ರಾಮಸ್ವಾಮಿ ತಿರುಮಲಮ್ಮ” ದತ್ತಿ ಉಪನ್ಯಾಸ ಮಾಲೆಯಲ್ಲಿ, ಶಾಂತಿನಾಥ ದೇಸಾಯರು ಕೊಟ್ಟ ಎರಡು ಉಪನ್ಯಾಸಗಳ ಪುಸ್ತಕರೂಪ ‘ಸಾಹಿತ್ಯ ಮತ್ತು ಭಾಷೆ’. ಎರಡು ವಿಭಾಗಗಳನ್ನು ಹೊಂದಿರುವ ಈ ಕಿರುಹೊತ್ತಿಗೆ ಬಳಸಿ (೪೯ ಪುಟಗಳು) ಇಪ್ಪತ್ತನೆ ಶತಮಾನದಲ್ಲಿ ಭಾಷಾಶಾಸ್ತ್ರದ ಶಿಸ್ತಿನಿಂದ ಸಾಹಿತ್ಯವನ್ನು ಅಭ್ಯಯಿಸುವ ಕ್ರಮವನ್ನು ಪರಿಚಯಿಸುತ್ತದೆ. ಸಾಹಿತ್ಯ ಭಾಷೆಯಲ್ಲೇ ಘಟಿಸುವ ಕ್ರಿಯೆಯಾದ್ದರಿಂದ ಭಾಷೆಯ ಸಾಧ್ಯ್ದತೆ, ಮತಿ ಎರಡೂ ಹೇಗೆ ಸಾಹಿತ್ಯವನ್ನು ಸೃಜಿಸುವಲ್ಲಿ ತಮ್ಮ ಅನನ್ಯತೆಯನ್ನು ಪಡೆದುಕೊಳ್ಳುತ್ತವೆ ಎಂಬುದು ಈ ಪುಸ್ತಕದ ವಸ್ತು. ಸಾಹಿತ್ಯವೆಂದರೆ ಭಾಷೆಯ ವಿಶಿಷ್ಟರೂಪ ಎಂಬ ನಿಲುವಿನಿಂದ ಶೈಲಿಶಾಸ್ತ್ರಾ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತದೆಂದು ದೇಸಾಯರು ತೋರಿಸಲು ಪ್ರಯತ್ನಿಸಿದ್ದಾರೆ ….

Read More Read More