ರೊವೀನಾರ ಮುನ್ನುಡಿ
‘ರೊವೀನಾ ಹಿಲ್’ರನ್ನು ಮೈಸೂರಿನ ಅವರ ಮನೆಗೆಲಸದಾಕೆ ‘ರೋಹಿಣ’ಮ್ಮನನ್ನಾಗಿಸಿಕೊಂಡು ಸಂಭೋಧಿಸುತ್ತಿದ್ದಳು. ವೆನೆಜುಯೆಲಾದ ರೊವೀನಾ ಕರ್ನಾಟಕವನ್ನು /ಭಾರತವನ್ನು ಇದೇ ರೀತಿ ತನ್ನದಾಗಿಸಿಕೊಂಡು ಕಾಣಲು ಪಡಿಪಾಟಲು ಪಡುತ್ತಿದ್ದರು. ಮನದ ಸೆರಗಿಗೆ ಕೆಂಡವನ್ನು ಕಟ್ಟಿಕೊಂಡು ಬಿರುಗಾಳಿಯಂತೆ ಇಲ್ಲಿ ೧೯೮೨ರಿಂದ ಸುತ್ತುತ್ತಿದ್ದರು . ಈಗಲೂ ಆಕೆ ಈ ‘ಇಂಡಿಯಾ’ ಅರ್ಥಮಾಡಿಕೊಳ್ಳಲು ಬರುತ್ತಲೇ ಇರುತ್ತಾರೆ . ಈ ಇಪ್ಪತ್ತು ವರ್ಷಗಳ ತನಕ ಈಕೆ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಅಮೆರಿಕಾ ಮತ್ತು ಯುರೋ ರಾಷ್ಟ್ರಗಳನ್ನು ಹೊರತುಪಡಿಸಿದ ಅವುಗಳ ನೆರಳಿನಲ್ಲಿಯೇ ತೃತೀಯ ಜಗತ್ತುಗಳಾಗಿರುವ ದೇಶಗಳಿಗೆ ಪರಿಚಯಿಸಿಕೊಡುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ . ವಚನ ಸಾಹಿತ್ಯವನ್ನು(ಪ್ರಭುಶಂಕರ ಜೊತೆಗೂಡಿ ) ಭಾಷಾಂತರಿಸಿದ್ದಾರೆ. ಮಹಾದೇವರ ‘ಕುಸುಮ ಬಾಲೆ’ಯುನ್ನು ಮೊದಲು ಆಂಗ್ಲಭಾಷೆಗೆ ಅನುವಾದಿಸಿದವರು ಇವರೆ. ಆಗ ಈಕೆಯ ಜೊತೆ ನನ್ನ ಒಡನಾಟ ಜಾಸ್ತಿಯಾಯಿತು. ಆ ಸಂದರ್ಭದಲ್ಲಿ ‘ಕುಸುಮ ಬಾಲೆ’ಯನ್ನು ಸೂಕ್ಷ್ಮಅತಿಸೂಕ್ಷ್ಮ…