ಕುವೆಂಪು ನಾಟಕಗಳ ವೈಚಾರಿಕತೆ
ಪುಸ್ತಕ – ರಂಗಭೂಮಿಯ ಸವಾಲುಗಳು ಸ್ನೇಹಿತರೆ ಈಗಾಗಲೇ ಬೆಳಗ್ಗಿನಿಂದ ಕುವೆಂಪುರವರ ಕೃತಿಗಳನ್ನ ಜಾಗತೀಕರಣದ ಸಂದರ್ಭದಲ್ಲಿ ಇತ್ತು ಮತ್ತೆ ಸ್ಥಳೀಯತೆಯ ಬಗ್ಗೆ ಅನೇಕ ವಿಷಯಗಳು ಮಂಡಿತವಾಗಿವೆ. ಆದರೆ ನಾನು ಈಗ ಕುವೆಂಪು ನಾಟಕಗಳಲ್ಲಿ ವೈಚಾರಿಕತೆಯ ಬಗ್ಗೆ ಮಾತನಾಡಲಿಕ್ಕೆ ಹೊರಟಿದ್ದೇನೆ. ಅದಕ್ಕೆ ಮುಂಚೆ ವೈಚಾರಿಕತೆ ಅಂತಂದ್ರೆ ಏನು? ನಾವು ಅದನ್ನು ಯೋಚನೆ ಮಾಡಿದ್ದೇವೆಯಾ? ಯಾವುದನ್ನು ನಾವು ವೈಚಾರಿಕತೆ ಅಂತೀವಿ? ಯಾವುದನ್ನು ವೈಚಾರಿಕತೆ ಅಲ್ಲ ಅಂತೀವೇ. ಇದನ್ನ ಒಂದು ದೃಷ್ಟಾಂತದ ಮೂಲಕ ನಿಮಗೆ ಹೇಳಿ ಆಮೇಲೆ ಕುವೆಂಪುರವರು ವೈಚಾರಿಕತೆಯನ್ನು ಯಾವ ರೀತಿ ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನೋದರ ಬಗ್ಗೆ ಹೇಳುತ್ತೇನೆ. ಈ ಒಂದು ತಿಂಗಳ ಹಿಂದೆ ಜಾನಪದ ವಿಷಯದ ಬಗ್ಗೆ ಕ್ಷೇತ್ರಕಾರ್ಯಕ್ಕೆ ಅಂತ ಹೋಗಿ, ಅಂದ್ರೆ “ಬೀದಿ ಬದಿಯ ದೇವರುಗಳು” ಅನ್ನುವ ವಿಷಯದಲ್ಲಿ ಒಂದು ಕ್ಷೇತ್ರಕಾರ್ಯಕ್ಕೆ ಅಂತ ಹೋಗಿದ್ವಿ. ಅದರಲ್ಲಿ…