ಕುವೆಂಪು ನಾಟಕಗಳ ವೈಚಾರಿಕತೆ

ಕುವೆಂಪು ನಾಟಕಗಳ ವೈಚಾರಿಕತೆ

ಪುಸ್ತಕ – ರಂಗಭೂಮಿಯ ಸವಾಲುಗಳು 

j1 ಸ್ನೇಹಿತರೆ ಈಗಾಗಲೇ ಬೆಳಗ್ಗಿನಿಂದ ಕುವೆಂಪುರವರ ಕೃತಿಗಳನ್ನ ಜಾಗತೀಕರಣದ ಸಂದರ್ಭದಲ್ಲಿ ಇತ್ತು ಮತ್ತೆ ಸ್ಥಳೀಯತೆಯ ಬಗ್ಗೆ ಅನೇಕ ವಿಷಯಗಳು ಮಂಡಿತವಾಗಿವೆ. ಆದರೆ ನಾನು ಈಗ ಕುವೆಂಪು ನಾಟಕಗಳಲ್ಲಿ ವೈಚಾರಿಕತೆಯ ಬಗ್ಗೆ ಮಾತನಾಡಲಿಕ್ಕೆ ಹೊರಟಿದ್ದೇನೆ. ಅದಕ್ಕೆ ಮುಂಚೆ ವೈಚಾರಿಕತೆ ಅಂತಂದ್ರೆ ಏನು? ನಾವು ಅದನ್ನು ಯೋಚನೆ ಮಾಡಿದ್ದೇವೆಯಾ? ಯಾವುದನ್ನು ನಾವು ವೈಚಾರಿಕತೆ ಅಂತೀವಿ? ಯಾವುದನ್ನು ವೈಚಾರಿಕತೆ ಅಲ್ಲ ಅಂತೀವೇ. ಇದನ್ನ ಒಂದು ದೃಷ್ಟಾಂತದ ಮೂಲಕ ನಿಮಗೆ ಹೇಳಿ ಆಮೇಲೆ ಕುವೆಂಪುರವರು ವೈಚಾರಿಕತೆಯನ್ನು ಯಾವ ರೀತಿ ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನೋದರ ಬಗ್ಗೆ ಹೇಳುತ್ತೇನೆ. ಈ  ಒಂದು ತಿಂಗಳ ಹಿಂದೆ ಜಾನಪದ ವಿಷಯದ ಬಗ್ಗೆ ಕ್ಷೇತ್ರಕಾರ್ಯಕ್ಕೆ ಅಂತ ಹೋಗಿ, ಅಂದ್ರೆ “ಬೀದಿ ಬದಿಯ ದೇವರುಗಳು” ಅನ್ನುವ ವಿಷಯದಲ್ಲಿ ಒಂದು ಕ್ಷೇತ್ರಕಾರ್ಯಕ್ಕೆ ಅಂತ ಹೋಗಿದ್ವಿ. ಅದರಲ್ಲಿ ನನ್ನ ಸ್ನೇಹಿತರಿಬ್ಬರು ಅಮೆರಿಕಾದವರು. ಮುಖ್ಯವಾಗಿ ಆ ಕೆಲಸದ ಮೇಲೆ ಬಂದಿದ್ದರು. ಅವರು ಬಂದು ನನಗೊಂದು ಪ್ರಶ್ನೆ ಕೇಳಿದ್ರು. ಇಲ್ಲಿ ‘ಬೀದಿ ದೇವರಗಳ ವಿಚಾರದ ಬಗ್ಗೆ ನಾವು ಹೋದಾಗ ಎಲ್ಲ ಕಡೆಯೂ ಈ ಕಲ್ಲು ಬೆಳಿತಾ ಇದೆ, ಈ ಕಲ್ಲು ಬೆಳಿತಾ ಇದೆ ‘ ಅಂತ ಹೆಲ್ತಹಾರಲ್ಲ ಇದು ಏನು ಅಂತ ಹೇಳಿ. ಪ್ರಾಯಶಃ ನಾವಾಗಿದ್ದರೆ ವೈಚಾರಿಕತೆಯನ್ನ ಇಟ್ಟುಕೊಂಡಿದ್ದಾರೆ ಅದೆಲ್ಲ ಸುಳ್ಳು , ನಾನು ನಲವತ್ತು ವರ್ಷದಿಂದ ಅಲ್ಲೇ ಓಡಾಡುತಾ ಇರುತ್ತೀನಿ. ದಿನಾ ನೋಡ್ತಾ ಇರ್ತಿನಿ. ಒಂದಿಂಚೂ ಬೆಳೆದಿಲ್ಲ. ಸುಮ್ಮನೆ ಈ ಜನಕ್ಕೆ ಬುದ್ದಿ ಇಲ್ಲ. ಅದಕ್ಕೆ ಹೇಳ್ತಾರೆ ಅಂತ ಹೇಳಬಹುದು . ಆದ್ರೆ ಹೀಗೆ ವಿಶ್ಲೇಷಿಸುತ್ತಾ , ಯೋಚನೆ ಮಾಡಿದಾಗ ನನಗನ್ನಿಸಿತು . ಕಲ್ಲಲ್ಲಿ ಅಲ್ಲಿ ಬೆಳೆಯುವುದು ಆ ಕಲ್ಲು ದೇವತೆಯಾಗಿ ಅದು ಸೃಷ್ಟಿಸುವ ವಿಚಾರಗಳು ಅಲ್ಲಿ ಬೆಳಿತಾ ಹೋಗುತ್ತದೆ. ಒಂದು ದಿವಸ ಅದಕ್ಕೆ ಸಂಬಂಧಪಟ್ಟಂತೆ ಒಂದು ಕತೆ ಆಗುತ್ತೆ. ಇನ್ನೊಂದು ದಿವಸ ಇನ್ನೊಂದು ಕತೆಯಾಗುತ್ತೆ. ಇನ್ನೊಬ್ಬ ಯಾವನಿಗೋ ಹುಷಾರಿಲ್ಲದೆ ಇದ್ದಾಳ ಅವನಿಗೆ ಹುಷಾರಾಗುತ್ತೆ ಅನ್ನುವಂತದ್ದು , ಹಣ ಇಲ್ಲದವರಿಗೆ ಹಣ ಬರುತ್ತದೆ ಅನ್ನುವಂತದ್ದು. ದೇವರನ್ನು ಬಿತ್ತುವು ಇನ್ನೆಲ್ಲ ವಿಚಾರವನ್ನು ಅಲ್ಲಿ ಮಾಡ್ತಾ ಇರ್ತರೆ. ಅದು ದೇವರು ಅನ್ನೊದು ನೆಪಕ್ಕೆ ಮಾತ್ರ. ಇಲ್ಲೇ ವೈಚಾರಿಕತೆ ಇಲ್ಲವೇ? ಈ ವೈಚಾರಿಕತೆ ಎಂಥದ್ದು? ಈ ರೀತಿಯ ಸಂವಾದ ಎಂಥದ್ದು ಅಂದರೆ ದೇವರು ಬೆಳೆಯುವುದು ಆ ಜನರ ಮನಸ್ಸಿನಲ್ಲಿ, ಆ ಕಲ್ಲು ಬೆಳೆಯುವುದು ಮತ್ತು ಆ ಕಲ್ಲಿನ ಬಗ್ಗೆ ಜನರ ಮನಸ್ಸಿನಲ್ಲಿ , ಆ ಕಲ್ಲು ಬೆಳೆಯುವುದು ಮತ್ತು ಆ ಕಲ್ಲಿನ ಬಗ್ಗೆ ಜನರ ಮನಸ್ಸಿನಲ್ಲಿ ಬೆಳೆಯುತ್ತಿರುವ ವಿಚಾರಗಳಿವು. ಹೀಗೆ ತೆಗೆದುಕೊಂಡಾಗ ನಮಗೆ ಹಲವಾರು ರೀತಿಯ ಸಮಸ್ಯೆಗಳು ಮತ್ತು ಆ ಸಂವಾದವನ್ನು ಆ ಪುರಾಣವನ್ನು ವಿಶ್ಲೇಷಣೆ ಮಾಡಲಿಕ್ಕೆ ಮತ್ತು ಆ ಮೂಲಕ ಅದನ್ನ ಸೃಷ್ಟಿಸುವ ಮನಸ್ಸನ್ನ ಅರಿತುಕೊಳ್ಳುವುದಕ್ಕೆ ಇದು ಸಹಾಯಕವಾಗುತ್ತದೆ ಅನ್ನುವಂತದ್ದು ರಾಷನಲಿಸ್ಟ್ ಆಗಿದ್ದರೆ ಅದು ಅಲ್ಲೇ ನಿಂತು ಹೋಗುತ್ತದೆ. ಆದೆ ಇದು ಸಾಮಾನ್ಯ ಕ್ರಮದಲ್ಲಿ ಆರ್ಡಿನರಿ. ಈ ಜೀವನ ಕ್ರಮದಲ್ಲಿ ಅದು ಬೇರೆ ಕ್ರಮದ್ದು ಅಂತ ತಿಳಿದುಕೊಂಡು ನಾವು ಅದರ ಬಗ್ಗೆ ಗಮನ ಹರಿಸಿದಾಗ ನಮಗೆ ಅನೇಕ ವಿಷಯಗಳು ಅದರಿಂದ ಹೊರಗಡೆ ಬರುತ್ತದೆ. ಇದು ಭಾರತೀಯ ಮನಸ್ಸು. ನೀವು ಯಾವುದಾದ್ರೂ ಜಾನಪದ ಕಥೆ ತೆಗೆದುಕೊಳ್ಳಿ, ಇದಿರುತ್ತದೆ ಅಥವಾ ಜನಗಳು ಹೇಳುವ ದೃಷ್ಟಾಂತ ತೆಗೆದುಕೊಳ್ಳಿ ಇದಿರುತ್ತೆ. ಹಾಗಾಗಿಯೇ ಇನ್ನೊಂದಿದೆ. ಈ ಬಸವ ಬೆಳಿತಾ ಇತ್ತು, ಬೆಳೆದು ಬೆಳೆದು ಆಕಾಶ ಮುಟ್ಟಿಬಿಡುತ್ತಾ ಇತ್ತು. ಅದಕ್ಕೋಸ್ಕರ ಏನ್ ಮಾಡ್ದ ಒಂದು ಗೂಟ ಹೊಡ್ದ . ಈಗ ಅದು ಬೆಳಿತಾ ಇಲ್ಲ , ನಿಂತುಬಿಟ್ಟಿದೆ ಅಂತ. ಅಂದ್ರೆ ಅದು ಎಲ್ಲಿಗೆ ನಿಲ್ಲಬೇಕು ಅದೂ ಕೂಡ ಅವರಿಗೆ ಗೊತ್ತು . ಆ ಜನಕ್ಕೆ ಅದನ್ನು ಎಷ್ಟು ಬೆಳೆಸಬೇಕು  ಅಂತಾನೂ ಗೊತ್ತು, ಎಲ್ಲಿಗೆ ನಿಲ್ಲಿಸಬೇಕು ಅಂತಾನೂ ಗೊತ್ತು. ಇದು ವೈಚಾರಿಕತೆಯಲ್ಲವೇ ? ಈ ಸಮಸ್ಯೆಯನ್ನು ನಾವು ಮೊದಲು ಪರಿಹರಿಸಕೊಳ್ಳಬೇಕಾಗುತ್ತದೆ. ಇಲ್ಲ ಅಂದ್ರೆ ಯಾರೋ ಅಲ್ಲಿ ಪೂಜೆ ಮಾಡುತ್ತಾ ಇರುತ್ತಾರೆ. ಅವರನ್ನು ಪೂಜೆ ಮಾಡಬೇಡಿ ಅಂತ ಹೇಳೋದು ವೈಚಾರಿಕತನ ಅಥವಾ ಆಲ್ವಾ ಈ ಪ್ರಶ್ನೆಗಳನ್ನ ಬಿಡಿಸಿಕೊಳ್ಳದ ಹೊರತು ಕುವೆಂಪುರವರ ನಾಟಕಗಳಲ್ಲಿ ಅಥವಾ ಅವರ ಯಾವುದೇ ಬರಹಗಳಲ್ಲಿ ವೈಚಾರಿಕತೆ ಎಂದರೇನು? ಅನ್ನೋದನ್ನ ಸಂಪೂರ್ಣ ದೃಷ್ಟಿಯಿಂದ ಪುನರ್ಸೃಷ್ಟಿಕೊಳ್ಳೋದಕ್ಕೆ ನಮ್ಮ ಮನಸ್ಸಿನಿಂದ ಸಾಧ್ಯವಾಗಲ್ಲ. ಇದು ಮೊದಲನೇ ಅಂಶ. ಎರಡನೆಯದು ಜಾಗತೀಕರಣದ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಬೆಳೆಗ್ಗೆನೂ ಬಂತು. ಅದಕ್ಕೆ ಕುವೆಂಪುರವರು ಎಷ್ಟು ತಮ್ಮ ಆಲೋಚನೆಯನ್ನು ಕೊಟ್ಟಿದ್ದಾರೆ ಅನ್ನೊದು ಬಂತು. ನೀವು ಟಿ.ವಿ.ಯಲ್ಲಿ ಒಂದು ಅಡ್ವರ್ಟೈಜ್ಮೆಂಟ್ ಬರೋದನ್ನು ನೋಡಿರಬಹುದು. ಒಬ್ಬ ಬಹಳ ಪ್ರಸಿದ್ಧ ನಟ ಬರುತ್ತಾನೆ. ‘ಏಯ್ , ಥಂಡಾ ದೇ ” ಅನ್ನುತ್ತಾನೆ. ಅಲ್ಲೊಬ್ಬ ಕೂಲ್ ಡ್ರಿಂಕ್ಸ್ ಬಾಟಲಿ ತೆಗೆದುಕೊಡುತ್ತಾನೆ. ಆಮೇಲೆ ‘ಏಯ್ . ಥಂಡಾ ದೇ ” ಅಂತಾನೆ. ಪಾಪ ಅವನು ‘ಎ ಭೀ ಥಂಡಾ ಹೇ’ ಅನ್ನುತ್ತಾನೆ. ನೋಡಿ ಅವನಿಗೆ ಭಾಷೆಯನ್ನು ಭೋದಿಸುತ್ತಾನೆ ಯಾವ ಭಾಷೆ ಮಾತನಾಡಬೇಕು ಅಂತ. ಇದು ಗುರುತಿಸಿಕೊಳ್ಳಲೇ ಆಗಬಾರದಂತಹ ರೀತಿಯಲ್ಲಿ ಜಾಗತೀಕರಣದ ಈ ಕ್ರಿಯೆ ನಡಿತಾ ಇರುತ್ತದೆ. ಬಹಳ ಮುಖ್ಯ ಇದು. ಈ ಅಡ್ವರ್ಟೈಜೆಮೆಂಟ್ ಇದೆಯಲ್ಲ ಅದು ಅವನದೇ ಭಾಷೆಯಲ್ಲಿ ಹೇಳಿಕೊಡುವಂತದ್ದು. ಹಿಂದೀ ಭಾಷೆಯಲ್ಲಿಯೇ ಹೇಳಿಕೊಡುತ್ತಾನೆ. ಇಂಗ್ಲಿಷ್ ಭಾಷೆಯನ್ನಲ್ಲ , ಜಾಗತೀಕರಣದ್ದು ಇಂಗ್ಲಿಷ್ ಮೂಲಕ ಪ್ರಾಯಶಃ ಅವರ ಬೇರೆಯ ಸಾಹಿತ್ಯ ಕೃತಿಯನ್ನ ಅದು ಹೇಗೆ ನಾಟಕದಿಂದ ಬೇರೆ ಕಡೆಗೂ ವಿಸ್ತರಿಸಿದೆ ಅನ್ನೋದನ್ನ ಇಟ್ಟುಕೊಂಡು ಕೆಲವು ಮಾತುಗಳನ್ನಾಡುತ್ತೇನೆ .

ಉಮೇಶ್ ಅವರು ಕುವೆಂಪು ನಾಟಕಗಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ. ಆದ್ದರಿಂದ ಆ ವಿಷಯಗಳನ್ನ ಮುಟ್ಟಲ್ಲ. ಆ ವಿಷಯಗಳನ್ನ ಒಂದು ರೀತಿಯಲ್ಲಿ ತೆಗೆದುಕೊಂಡು ಮುಂದುವರಿಕೆಯಾಗಿ ಮಾತನಾಡೋದಕ್ಕೆ ಇಷ್ಟಪಡುತ್ತೇನೆ .

ಕುವೆಂಪುರವರು ಉಮೇಶ್ ಹೇಳಿದಹಾಗೆ ಲೋಕೋತ್ತರ ವಿಷಯವನ್ನ ತೆಗೆದುಕೊಂಡಿರುತ್ತಾರೆ. ಆದರೆ ಒಂದು  ಅವರ ಸಾಹಿತ್ಯದಲ್ಲಿ ಎಲ್ಲಯೂ ರಿಚುಯಲ್ಸ್ ಅನ್ನೋದು ಬರೋದಿಲ್ಲ. ಯಾವುದೇ ಜಾತಿಗೆ ಸೇರಿದ ಕ್ರಿಯಾವಿಧಿಗಳು ಅವರ ಸಾಹಿತ್ಯದಲ್ಲಿ ಬರುವುದಿಲ್ಲ. ಇದು ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಆಳವಾಗಿ ನೋಡಿದಾಗ ಕುವೆಂಪು ಕೃತಿಗಳಲ್ಲಿ ಇದು ಕಂಡು ಬರೋದಿಲ್ಲ. ಹಾಗೆಯೇ ಅವರ ಯಾವುದೇ ಸಾಹಿತ್ಯ ಕೃತಿಯಲ್ಲಿ ರಿಚುಯಲ್ಸ್ ಬರೋದಿಲ್ಲ. ನಾವು ಬಹಳ ಮುಖ್ಯವಾಗಿ ಗಮನಿಸಬೇಕಾದದ್ದು ಒಂದು ಆಚಾರ ಇನ್ನೊಂದು ವಿಚಾರ. ಆಚಾರದ ವಿಷಯಕ್ಕೆ ಬಂದಾಗ ಕುವೆಂಪು ಆಚಾರವನ್ನ ಎಲ್ಲೂ ತರುವುದಿಲ್ಲ. ತರುವುದಕ್ಕೆ ಸುಮಾರು ಚಾನ್ಸ್  ಗಲಿದೆ. ಆದ್ರೆ ತರೋಲ್ಲ . ವಿಚಾರವನ್ನು ತರುತ್ತಾರೆ. ವಿಹಕಾರದ ಭಾಗಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಮತ್ತೆ ಅವರು ನಾಟಕಗಳಲ್ಲಿ ರೇಗೆದುಕೊಂಡ ವಿಷಯಗಳನ್ನ ನೋಡಿ ಒಂದು ರೀತಿಯ ಸಂಧ್ಯಾಯುಗವನ್ನ ತೆಗೆದುಕೊಳ್ಳುತ್ತಾರೆ. ಸ್ಮಶಾನ ಕುರುಕ್ಷೇತ್ರದಲ್ಲಿರಬಹುದು . ಒಂದು ಸಂಧ್ಯಾಯುಗ. ದ್ವಾಪರ ಮತ್ತು ಕಲಿಯುಗ ಮೀಟಾಗುವಂಥಹ ಒಂದು ಕಾಲವನ್ನು ತೆಗೆದುಕೊಂಡು ಅಲ್ಲಿ ನಾಟಕವನ್ನ ರಚಿಸುತ್ತಾರೆ. ಅಲ್ಲಿ ಬರುವ ಪಾತ್ರಗಳೆಲ್ಲವೂ ತಮ್ಮ ಭೂತಕಾಲವನ್ನು ನೋಡಿಕೊಂಡು ಬರುತ್ತವೆ, ವರ್ತಮಾನದಲ್ಲಿ ಅದನ್ನ ಇಟ್ಟು ಚರ್ಚೆ ಮಾಡುತ್ತವೆ. ಕೃಷ್ಣ ಆಗಲಿ, ದುರ್ಯೋಧನ ಆಗಲಿ ರಣರಂಗದಲ್ಲಿ ಸತ್ತೋಗಿದ್ದಾರೆ. ಪ್ರಾಯಶಃ ಪಾಂಡವರು ಮತ್ತು ದುರ್ಯೋಧನ ಮುಖ್ಯಪಾತ್ರಗಳಲ್ಲಿ ಇವರು ಮಾತ್ರ ಉಳಿದುಕೊಂಡಿದ್ದಾರೆ. ದುರ್ಯೋಧನ ಇನ್ನೂ ಸತ್ತಿಲ್ಲ ತೊಡೆ ಮುರಿದು ಬಿದ್ದಿದ್ದಾನೆ. ಅಲ್ಲಿ ಬರುವಾಗಲೂ ಅಷ್ಟೇನೆ ಅವರು ತಮ್ಮ ಭೂತಕಾಲವನ್ನ ರಿವೀವ್ ಮಾಡಿಕೊಳ್ಳುತ್ತಾರೆ. ಏನೇನು ಮಾಡಿದ್ವಿ ಅಂತ . ಆಮೇಲೆ ಅಲ್ಲಿ ವರ್ತಮಾನವನ್ನು ತೆಗೆದುಕೊಂಡು ಬರುತ್ತಾರೆ. ಸಾಮಾನ್ಯ ಜನರನ್ನು ಅಲ್ಲಿ ತಂದು ರಾಜರಾಜರಿಗೆ ಆಗಿರುವ ಯುದ್ಧ ಇದು ಅಂತಾನೂ ತೋರಿಸುತ್ತಾರೆ. ಅಂದ್ರೆ ಸಾಮಾನ್ಯ ಮನುಷ್ಯನ, ಸೈನಿಕನ, ಹೋರಾಟಗಾರನ ಸಂಸಾರದ ಹಿನ್ನೆಲೆಯನ್ನೂ . ಅದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಅದು ಬರೀ ಪಾಂಡವ ಕೌರವರ ಚರಿತ್ರೆಯಲ್ಲ. ಆ ಚರಿತ್ರ ಸಾಮಾನ್ಯ ಜನರ ಚರಿತ್ರೆಯಾಗಿಯೂ ಮತ್ತು ವರ್ತಮಾನವನ್ನ ಹೇಳುವ ಒಂದು ಸ್ಥಿತಿಯನ್ನ ಸೃಷ್ಟಿ ಮಾಡುವ ಕ್ರಿಯೆಯಾಗಿ ತರುತಾರೆ, ಆಮೇಲೆ ನಾಟಕದ ಕೊನೆಯಲ್ಲಿ ಅಲ್ಲಿ ಕಲಿ ಬಂದು ಮುಂದೆ ಏನಾಗುತ್ತೆ ಅಂತ ಹೇಳ್ತಾನೆ. ಅದು ಆ ನಾಟಕದ ಭಾಗವಾಗಿ ಬಂದಿರುವಂತದು ಬಹಳ ಮುಖ್ಯವಾದು ಮುಂದೆ ಭಾರತಾಂಬೆ ಹೀಗಾಗ್ತಾಳೆ,. ಬ್ರಿಟೀಷರ ಆಳಾಗ್ತಾಳೆ , ಆಮೇಲಿನಿ೦ದ ಮೊಗಲರು ಬರ್ತಾರೆ , ಎಲ್ಲಾನು ಹೇಳಿ, ರಷ್ಯದಲ್ಲಿ ಹೀಗಾಗುತ್ತ, ರಾಮಕೃಷ್ಣ ಪರಮಹಂಸರು ಹುಟ್ಟಿಬರುತಾರೆ. ವಿವೇಕಾನಂದರು ಬರುತ್ತಾರೆ ಅನ್ನುವ ಭವಿಷ್ಯತ್ತನ್ನ ಹೇಳುವಂತ ಒಂದು ಕ್ರಿಯೆಯನ್ನ ನಡಿಸ್ತಾರೆ. ಇಲ್ಲಿ ನೋಡಿ ಮತ್ತೆ ಜಾಗತೀಕರಣದ ವಿರುದ್ದ ಹೋರಾಡುವ ಮನಸ್ಸು ಇಲ್ಲಿದೆ. ಇದು ಸ್ಥಳೀಯ ಮನಸ್ಸು . ಈ ಸ್ಥಳೀಯ ಮನಸ್ಸು ಹೇಗೆ ಘಟನೆಯನ್ನು ಗ್ರಹಿಸುತ್ತದೆ ಅನ್ನೋದು ಬಹಳ ಮುಖ್ಯ. ಒಂದು ಮಿಥ್ ಆಗಬೇಕಾದರೆ ಕಾಲದ ಮೂರು ಪರಿಕಲ್ಪನೆಗಳು ಒಂದಾಗಿ ಬ೦ದಾಗ ಅದು ಮಿಥ್ ಆಗುತ್ತದೆ. ಮಿಥ್ (ಪುರಾಣ)ನ ಡೆಪ್ಪೆಷನ್ ಅದು. ಅಂದ್ರೆ ಕುವೆಂಪು ಒಂದು ಹೊಸ ಮಿಥ್ ನ ಕ್ರಿಯೇಟ್ ಮಾಡ್ತಾ ಇದ್ದಾರೆ. ಮಿಥ್ ಮೇಕಿಂಗ್ ಅಂಡ್ ಮಿಥ್ ಬ್ರೇಕಿಂಗ್ . ಅಂದ್ರೆ ಏನು ದೇವ್ರು ಅಂತ ಇರೋಂದು ಬರೀ ಒಂದು ಜಾತಿಯಲ್ಲಲ್ಲ ಅಥವಾ ವರ್ಗದಲ್ಲಲ್ಲ. ಅವನು ಅತ್ಯಂತ ಸಾಮಾನ್ಯ ಕೆಳಜಾತಿವನಲ್ಲಿಯೂ ಇರುತ್ತಾನೆ. ಬರೀ ಇರುತ್ತಾನೆ ಅಲ್ಲ, ಅವನ ನಿಜವಾದ ಅರ್ಥವನ್ನ ಆ ಕೆಳಜಾತಿಯವ ತಿಳಿದಿರುತಾನೆ ಅನುವಂಥದು ಮೇಲುನೋಟದ ರಿಚುವೆಲ್ ಅವನಿಗೆ ಮುಖ್ಯವಾಗೋಲ್ಲ, ಜಲಗಾರ ಕೇಳ್ತಾನೆ ಜಾತ್ರೆಯಿಂದ ಏನ್ ತಂದೆ ಎಂದು. ಅದಕ್ಕವನು ಹಣ್ಣುಕಾಯಿ ಅಂತ ಹೇಳ್ತಾನೆ . ಅವನು ದೇವರನ್ನ ಜಾತ್ರೆಯಿಂದ ತರೋದಕ್ಕೆ ಆಗಲ್ಲ. ಆದ್ರೆ ಜಲಗಾರ ದೇವರನ್ನ ಯಾವಾಗಲೂ ತನ್ನ ಜೊತೆಯಲ್ಲೇ ಇರುವಂತೆ ಮಾಡಿಕೊಳ್ಳುತ್ತಾನೆ. ಬಹಳ ಚೆನಾಗಿದೆ ಕಾಮೆಂಟು, ಶಿವನನ್ನು ಏನೇನೋ ಮಾಡಿಬಿಟ್ಟಿದ್ದಾರೆ. ನಿಜವಾಗಲೂ ಅವನು ಶೂದ್ರದೇವರು. ಅವನಿಗೆ ಜನಿವಾರ ಹಾಕಿದ್ದಾರೆ ಅವನು ಕ್ಲೀನ್ ಆಗಿಲ್ಲ, ಬೂದಿ ಬಳಿದುಕೊಂಡಿದ್ದಾನೆ ಅಂತ ಗಂಗೇನ ತಲೆ ಮೇಲೆ ಇಟ್ಟಿದ್ದಾರೆ. ಇಲ್ಲಿ ನಿಮಗೆ ಕುವೆಂಪುರವರು ರಿಚುಯಲ್ಸ್ ಕಟ್ಟಿಕೊಡೋದನ್ನ ಪರಂಪರೆಯಾಗಿ ಬಂದದ್ದನ್ನ ಹೊಡೆಯೋದಕ್ಕೆ ಪ್ರಯತ್ನಪಡುತ್ತಾರೆ. ಅದನ್ನ ಮಿಥ್ ಬ್ರೇಕಿಂಗ್ ಅಂತೀವಿ. ಅದಕ್ಕೋಸ್ಕರ ಕ್ಲೀನ್ ಮಾಡಲಿಕ್ಕೆ ತಲೆ ಮೇಲೆ ಗಂಗೇನಂತೆ , ಈಥವರೆಲ್ಲ ಸೃಷ್ಟಿಸಸಿದ್ದೀರಲ್ಲ ಇದು ಅಲ್ಲ ಅಂತ ಹೇಳುತ್ತಾರೆ. ಕೊಂಡಿಗೆ ಜಲಗಾರನ ಜೊತೆಗೆ ಶಿವ ಬಂದುಬಿಡುವಂತದ್ದು . ಇಲ್ಲಿ ನೋಡಿ ಹೊಸ ಮಿಥ್ ನ ಪುನಃ ಕ್ರಿಯೆಟ್ ಮಾಡುವಂತದ್ದು. ಇಲ್ಲಿ ರಿಚುಯಲ್ಸ್ ಅಲ್ಲೂ ಜಾಗ ಇಲ್ಲ, ಆದ್ರೆ ಕುವೆಂಪು ಹೊಸ ರೀತಿಯ ಪುರಾಣವನ್ನು ಕಟ್ಟಿಕೊಡುತ್ತಾರೆ. ಇಲ್ಲಿ ನೋಡು ವಿಚಾರವಾದ ಹೇಗಿಡೇ ಅಂತ . ಹಾಗೇನೇನೇ ಶೋತೃ ತಪಸ್ವಿಯಲ್ಲಿ ಶಂಬೂಕ . ಇಲ್ಲಿ ನಿಜವಾದ ತಪಸ್ವಿ ಯಾರು? ಈ ಹಿನ್ನೆಲೆಯಲ್ಲಿ ಅವರು ನೋಡುವಂತಹದ್ದು ಬಹಳ ಮುಖ್ಯ. ರಾಮಕೃಷ್ಣ ಪರಮಹಂಸರಿಂದ, ವಿವೇಕಾನಂದರಿಂದ ಅವರು ಬಹಳವಾಗಿ ಪ್ರಭಾವಿತರಾದವರು . ಆದರೆ ನಾವು ಇನ್ನೂ ಕುವೆಂಪುರವರ ಕೆಲವು ಕೃತುಗಳನ್ನ ನೋಡುತ್ತಾ ಹೋದಾಗ ಈ ಅಂಶಗಳು ಈ ನಾಟಕದಲ್ಲಿದ್ದಂತೆ ಬೆಳಿತಾ ಹೋಗುತ್ತದೆ. ೧೯೩೦ರಲ್ಲಿ ಅವರು ಸ್ಮಶಾನ ಕುರುಕ್ಷೇತ್ರ ಬರೆದರು . ಆಗಲೇ ರಾಮಾಯಣ ದರ್ಶನಂ ಬರೆದಾಗಿತ್ತು, ಅಲ್ಲೂ ಸಹ ಯುದ್ಧದ ವಿಷಯವನ್ನ ಚರ್ಚೆ ಮಾಡಿದ್ದಾರೆ. ಅಲ್ಲಿಯೂ ಸಹ ಕಾಲದ ವಿಷಯವನ್ನ ಚರ್ಚೆ ಮಾಡಿದ್ದಾರೆ, ಪ್ರಸ್ತುತಕ್ಕೆ ಬರುತ್ತಾರೆ, ಒಂದು ಹೊಸ ಮಿಥ್ನ ಕ್ರಿಯೇಟ್ ಮಾಡಿಕೊಳ್ಳುತ್ತಾರೆ.

k2ಅದೇ ರೀತಿ ಅವರ ಕಾದಂಬರಿ ಇದೆಯಲ್ಲ ‘ಮಲೆಗಳಲ್ಲಿ ಮದುಮಗಳು ‘ , ಅಲ್ಲಿ ಮೊನ್ನೆ ಜಿ. ಹೆಚ್ . ನಾಯಕರು ಚರ್ಚೆ ಕೆಲವು ಪ್ರಶ್ನೆಗಳನ್ನು ಎತ್ತಿದರು. ನಾವು ಕುವೆಂಪುರವರನನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಲ್ಲಿ ಬರುವ ಪುರ್ನಜನ್ಮದ ಪ್ರಶ್ನೆ ಮತ್ತೆ ಯಾರಿಗೋ ದೇಹ ಇದು ಅವನಿಗೆ ಯಾವುದೋ ಆವಾಹನೆಯಾಗಿ ಇರುವಂತದ್ದು. ಇದನ್ನೆಲ್ಲಾ ಹೇಗೆ ನೋಡಬೇಕು? ಇದರಿಂದ ಕುವೆಂಪುರವರನ್ನ ಹೇಗೆ ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯ? ಇವೆಲ್ಲ ತೊಡಕಲ್ಲವೇ? ಎನ್ನುವಂಥ ಪ್ರಶ್ನೆಯನ್ನು ಎತ್ತಿದರು. ಆದರೆ ಈ ರೀತಿ ವೈಚಾರಿಕತೆಯಿಂದ ನೋಡಿದರೆ ಅಲ್ಲಿ ಸಮಸ್ಯೆ ಬಗೆಹರಿಯಲ್ಲ ಅಲ್ಲಿ ಮುಖ್ಯವಾಗಿ ಕುವೆಂಪುರವರು ನಾಟಕಗಳಲ್ಲಿ ಮಾಡಿದಂತೆ ಏನ್ ಮಾಡಿದ್ದಾರೆ ಅಂತಂದ್ರೆ ಅಲ್ಲಿ ಒಬ್ಬ ಸೂರ್ಯೋದಯವಾಗುವ ಸಮಯದಲ್ಲಿ ಸುಮ್ಮನೆ ಕುಳಿತಿರುತ್ತಾನೆ. ಅಲ್ಲಿ ಅವನಿಗೆ ಕಾಣುವಂತದ್ದೇನೆಂದರೆ ಯುಗ ಯುಗಾಂತರಗಳಿಂದ ಮನುಷ್ಯನ ಸೂಕ್ಷ್ಯ ಭಿತ್ತಿಯಲ್ಲಿ ಮನಸ್ಸಿನಲ್ಲಿ ಇದ್ದಂತ ಇನ್ಸ್ಟಿಂಗ್ಸ್, ಅದು ಅವನನ್ನ ವಿಶ್ವ ಪ್ರಜೆಯನಾಗಿ ಮಾಡುತ್ತ ಅ೦ತ ಹೇಳುತ್ತಾರೆ, ಯಾಕೆಂದರೆ ನಿಮಗೆ ಗೊತ್ತಿದೆ ಜಿಂಕೆ ಮೊದಲನೇ ಸಲ ಹುಲಿ ಏನಾದ್ರೂ ಓದಿಸಿಕೊಂಡು ಬಂದಾಗ ಅದರ ವಾಸನೆ ಕಂಡ ತಕ್ಷಣವೇ ತಾಪಿಇಸಿಕೊಳ್ಳಲಿಕ್ಕೆ ಪ್ರಾಯ್ಟ್ನ ಮಾಡುತ್ತೆ. ಇದನ್ನ ಅದಕ್ಕೆ ಯಾರೂ ಹೇಳಿಕೊಟ್ಟಿರುವುದಿಲ್ಲ.ನಮಗೂ ಅಷ್ಟೇ ಬೆಂಕಿ ಶಾಖ ತಗುಲಿತು ಅಂದ ತಕ್ಷಣವೇ ಕೈಯನ್ನು ಹಿಂದೆ ತಗದುಕೊಳ್ಳುತ್ತೇವೆ. ಈ ರೀತಿಯ ಒಂದು ಮನಸ್ಸು ಕೆಲಸ ಮಾಡುತ್ತಾ ಇರುತ್ತದೆ. ಪ್ರತಿಯೊಬ್ಬರೂ ಜೀವಿಯಾಗಿರುವುದರಿಂದ ವಿಶ್ವಜೀವಿಯಾಗಿರುತ್ತಾರೆ ಅನ್ನವಂತ ಮಾತನ್ನ ಆಡುತಾರೆ. ಅಮೇಲೆ ಇನ್ನೂ ಒಂದು ರೀತಿಯ ಟೈಂ ಬರುತ್ತ ಅಲ್ಲಿ , ಇದೆಲ್ಲ ನೋಡಿ ಕಾಲದ ಬೇರೆ ಬೇರೆ ಪರಿಕಲ್ಪನೆಯನ್ನ ಅವರು ಉಪಯೋಗಿಸಿಕೊಂಡು ನಮಗೆ ಏನನ್ನೋ ಹೇಳಲಿಕ್ಕೆ ಪ್ರಯತ್ನಪಡುತ್ತಾ ಇದ್ದಾರೆ ಅನ್ನುವಂತದ್ದನ್ನ ನಾವು ಗುರುತಿಸಿಕೊಳ್ಳಬೇಕಾಗಿದೆ. ಒಂದು ಸ್ವತಿ ಹಿಂದಿನದೆಲ್ಲ ಜ್ಞಾಪಕಕ್ಕೆ ಬರುವಂತದು. ಅಲ್ಲಿ ಒಂದು ಹುಡುಗಿ ‘ಚೆನ್ನಿ ಏನ್ ಹೇಳಾಳೆ ಅಂತಂದ್ರೆ ಮೊದಲನೆ ಬಾರಿ ತನ್ನ ಗಂಡನಾಗುವವನ ಮನೆಗೆ ಹೋಗುತ್ತಾ ಇದ್ದಾ ಳೆ, ಅಜ್ಜಿ ರಸ್ತೆ ತಪ್ಪುತಾಳೆ. ಆದರೆ ಈ ಚಿಕ್ಕ ಹುಡುಗಿ ಅಲ್ಲಲ್ಲಿ ರಸ್ತೆ ಇಲ್ಲಿ ಹೋಗೋದು ಬಾ ಅಂತ ಹೇಳಿ ಮುಕುಂದಯ್ಯನ ಮನೆಗೆ ಕರೆದುಕೊಂಡು ಹೋಗುತ್ತಾಳೆ.. ಅವನೇ ನನಗೆ ಗಂಡ ಆಗಿದ್ದ ಅಂತ ಹೇಳಾಳೆ, ಮತ್ತೆ ಸ್ವತಿ ಆಮೇಲೆ ದೊಡ್ಡಣ್ಣ ಹೆಗ್ಗಡೆ ಪಾತ್ರ ಬರುತ್ತದೆ. ಅವನು ಎಲ್ಲೋ ಯಾತ್ರೆಗೆ ಹೋಗಿದ್ದವನು ಕಾಯಿಲೆಗೆ ಒಳಗಾಗಿ ಜ್ಞಾನವನ್ನ ಕಳೆದುಕೊಳ್ಳುತ್ತಾನೆ. ಅವನ ಸ್ಮೃತಿ ಹೋಗುತ್ತೆ. ಅವನು ಯಾರು ಅಂತ ಅವನಿಗೆ ಗುರುತಿಸುವಕ್ಕೆ ಆಗೋದಿಲ್ಲ. ಇದು ವಿಸ್ಮೃತಿ. ಸ್ಮೃತಿ ಇದೆ, ವಿಸ್ಮೃತಿ ಇದೆ. ಮತ್ತೆ ಅಸ್ಮೃತಿ ಸಹ ಇದೆ. ಇದನ್ನ ಯಾಕೆ ಕುವೆಂಪುರವರು ತಮ್ಮ ಹೆಚ್ಚಿನ ರಚನೆಗಳಲ್ಲಿ ಬಳಸಿಕೊಳ್ಳುತ್ತಾರೆ ಅಂತಂದ್ರೆ ಕಾಲವನ್ನು ಹಿಡಿಯಲು ಪ್ರಯತ್ನಪಡುವಂಥಹದ್ದು . ಕಾಲವನ್ನು ಯಾವುದರಲ್ಲಿ ಹಿಡಿತಾ ಇದ್ದಾರೆ ಅಂತಂದ್ರೆ ಅವರು ಸ್ಪೇಸ್ ನೋಡಿ ಯಾವತ್ತೋ ಒ೦ದು ದಿವಸ 1894ನೇ ಇಸವಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದ್ದನ್ನ ಕೇಳಿ ಇಲ್ಲಿ ಒಂದು ರಿಯಾಕ್ಷನ್ ಇರುತ್ತೆ. ಎಲ್ಲಿ ? ಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿ. ಕಾಲ ಮತ್ತು ದೇಶವನ್ನ ಗೆಲ್ಲುವ ಕ್ರಿಯೆ. ಇದೆ ವಿಶ್ವಮಾನವ ಗೀತೆ. ಕುವೆಂಪುರವರ ವೈಚಾರಿಕತೆಯ ಬಗ್ಗೆ ನಾನು ಕೊನೆಗೆ ಬರುತ್ತಾ ಇದ್ದೇನೆ. ಅವರು ಯಾತಕ್ಕೆ ಇದನ್ನ ತರುತ್ತಾರೆ ಅಂತಂದ್ರೆ ಕಾಲ ಮತ್ತು ದೇಶವನ್ನು ಗೆಲುವ ಪರಿ ಹೇಗೆ? ಹಾಗೆ ಮಾಡಿದಾಗ ಮಾತ್ರ ವಿಶ್ವಮಾನವನಾಗಬಲ್ಲ ಅನ್ನುವಂತಹದ್ದು . ಇಲ್ಲದಿದ್ದರೆ ಅವನು ವಿಶ್ವಮಾನವನಾಗಲು ಸಾಧ್ಯವಿಲ್ಲ. ಅವನು ವಿಶ್ವಮಾನವನಾಗಬೇಕಾದರೆ ಅವನೇನು ವಿಶ್ವಪರ್ಯಟನೆ ಮಾಡಬೇಕಾಗಿಲ್ಲ . ಕುಳಿತ ಕಡೆನೆ ಒಬ್ಬ ಮನುಷ್ಯ ವಿಶ್ವಮಾನವನಾಗಬಹುದು ಅನ್ನುವಂತದು ಇದು ಅವರ ವೈಚಾರಿಕತೆಯ ತುತ್ತ ತುದಿ ಅಂತ ನಾನು ತಿಳಿದುಕೊಂಡಿದ್ದೇನೆ. ಅದಕ್ಕೋಸ್ಕರ ಅವರು ಇದೆಲ್ಲವನ್ನು ಓದಿ ಕೊನೆಗೆ ‘ಓ ನನ್ನ ಚೇತನ’ವನ್ನು ನಾವು ಹಾಡೋದಕ್ಕೆ ಹೋದರೆ ಪ್ರಾಯಶಃ ವಿಶ್ವಮಾನವಗೀತೆ ಅಂತ ಯಾಕೆ ಇದನ್ನ ಕರೀತಾರೆ ಅಂತ ಹೇಳಿ , ಚೇತನ ಎಲ್ಲೆಲ್ಲೋ ಸುತ್ತಾಡಬೇಕಾಗಿಲ್ಲ, ತನ್ನೊಳಗೇ ಇದ್ದು ವಿಶ್ವವನ್ನ ಸೆಳೆದುಕೊಳ್ಳಬಹುದು ಅನ್ನುವಂತದ್ದು. ಇದು ಕುವೆಂಪುರವರ ವೈಚಾರಿಕತೆ. ಇದನ್ನ ನಾನು ಒಂದು ಜಾಹಿರಾತಿನ ಉದಾಹರಣೆ ಕೊಟ್ಟೆನಲ್ಲ ಯಾಕೆ ಕೊಟ್ಟೆ ಅಂತಂದ್ರೆ ಒಂದು ರೀತಿ ಸೆಂಟ್ರಲೈಝಷನ್ ಇರುತ್ತೆ. ಈ ಕೇಂದ್ರೀಕೃತವಾದ ಒಂದು ಶಕ್ತಿ ಇದೆಯಲ್ಲ ಅದು ಉಳಿದ ಕಡೆಯ ಶಕ್ತಿಯನ್ನೆಲ್ಲ ನಿಯಂತ್ರಣದಲ್ಲಿ ಇಟ್ಟುಕೊಳ್ಳಲ್ಲು ಪ್ರಯತ್ನಪಡುತ್ತಿರುತ್ತದೆ. ಆದರೆ ಕುವೆಂಪುರವರ ವಿಶ್ವಮಾನವತೆ ಯಾವ ಥರದ್ದು ಅಂತಂದ್ರೆ ತನ್ನ ಒಳಗೆ ತಾನು ಅರಳಿ ವಿಶ್ವವನ್ನ ಗ್ರಹಿಸುವಂತದ್ದು. ಇಲ್ಲಿ ಜಾಗತೀಕರಣದ ಥರ ಯಾವ ಹೀರಿಕೆಯೂ ಇರುವುದಿಲ್ಲ. ಯಾವ ಹೀರಿಕೆಯೂ ಇರುವುದಿಲ್ಲ . ಇದು ಅರಳುವಿಕೆ . ಒಂದು ಹೀರುವಿಕೆಯಾದರೆ ಇನ್ನೊಂದು ಅರಳುವಿಕೆ . ಇಲ್ಲಿ ಪ್ರಾಯಶಃ ಜಾಗತೀಕರಣವನ್ನ ಹೆದರಿಸಬೇಕಾದರೆ ನಾವು ಕುವೆಂಪುರವರಿಂದ ಪಡೆದರೆ ನಮ್ಮ ದೇಶೀಯತೆ ಇದೆಲ್ಲವನ್ನು ತರುವ, ಅಥಮಾಡಿಕೊಳ್ಳುವ ವೈಚಾರಿಕತೆ ಅಂದ್ರೆ ಏನು ಅಂತ ತಿಳಿದುಕೊಳ್ಳುವ ಕೆಲವು ಪರಿಕಲ್ಪನೆ ನಮಗೆ ಬರುತ್ತೆ ಅಂತ ತಿಳಿದುಕೊಂಡು ನಾನು ಇಲ್ಲಿ ಬಂದು ಮಾತನಾಡಲಿಕ್ಕೆ ಅನುವು ಮಾಡಿಕೊಟ್ಟ ದೇಸಿರಂಗ ತಂಡಕ್ಕೆ ವಂದಿಸುತ್ತೇನೆ.

 

 

Leave a Reply

Your email address will not be published. Required fields are marked *