ಲೈಂಗಿಕಾತ್ಮಕತೆ ಮತ್ತು ಅಧಿಕಾರ

ಲೈಂಗಿಕಾತ್ಮಕತೆ ಮತ್ತು ಅಧಿಕಾರ

ಕ್ರಿಶ್ಚಿಯನ್ ಧಾರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಿಷೆಲ್ ಫುಕೋನ ಚಿಂತನೆಗಳು

ಈ ದಿನ ನಾನು ನನ್ನ ಪ್ರಮೇಯವನ್ನು ಮಂಡಿಸಲು ಯತ್ನಿಸುತ್ತೇನೆ. ಈಗ ನಾನು ಲೈಂಗಿಕಾತ್ಮಕತೆಯ ಚರಿತ್ರೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಆರು ಸಂಪುಟಗಳಲ್ಲಿ ಬರೆಯಬೇಕೆಂದಿದ್ದೇನೆ . ಲೈಂಗಿಕಾತ್ಮಕತೆಯ ಚರಿತ್ರೆಯನ್ನೇ ಏಕೆ ತೆಗೆದುಕೊಂಡೆ? ಅದಕ್ಕೆ ಕಾರಣ ನನಗೊಂದು ವಿಷಯ ಹೊಳೆದಿತ್ತು. ಫ್ರಾಯ್ಡ್ ನ ಮನೋವಿಶ್ಲೇಷಣೆ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಚಾರಿತ್ರಿಕ ರೂಪವನ್ನು ಪಡೆದುಕೊಂಡಿತ್ತು, ಅಲ್ಲದೆ ಪಾಶ್ಚಾತ್ಯ ಸಮಾಜದಲ್ಲಿ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಈ ಅಂಚಿಗೆ ತಳ್ಳಲ್ಪಟ್ಟ ವೈದ್ಯರನ್ನು ಆಕರ್ಷಿಸಿತ್ತು. ಒಂದಲ್ಲ ಒಂದು ವಿಧದಲ್ಲಿ ಈ ಸಮಸ್ಯೆಗಳು ವೈದ್ಯರನ್ನು ಕಾಡುತ್ತಿತ್ತು. ಮುಖ್ಯವಾಗಿ, ಹಿಸ್ಟೀರಿಯಾ. ಹಿಸ್ಟೀರಿಯಾ ಒಂದು ರೀತಿಯ ಮರೆವಿನ ಕಾಯಿಲೆ. ವ್ಯಕ್ತಿ ತನ್ನನ್ನು ತಾನೇ ತಪ್ಪು ಅರ್ಥ ಮಾಡಿಕೊಳ್ಳುವ ಅಥವಾ ಇಡೀ ದೇಹವನ್ನೇ ಮರೆತು ಬದುಕುವ ರೀತಿ. ಇದನ್ನು ಫ್ರಾಯ್ಡ್ ಗುರುತಿಸುತ್ತಾನೆ, ಅಲ್ಲದೆ ಒಂದು ಸಿದ್ಧಾಂತಕ್ಕೆ ಬದ್ಧಗೊಳಿಸಿ ಪ್ರಾಯೋಗಿಕ ಪರೀಕ್ಷೆಗೆ ಇದನ್ನು ಒಳಪಡಿಸುತ್ತಾನೆ.

ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ ವಿಜ್ಞಾನಿಗಳು ಪಾಶ್ಚಾತ್ಯ ದೇಶದಲ್ಲಿ ಎರಡು ಸ್ತರಗಳಲ್ಲಿ ಮನುಷ್ಯನ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿದ್ದರು. ಮೊದಲನೆಯದು ಸಾಮಾನ್ಯಸ್ತರ, ವ್ಯಕ್ತಿಗತವಾದದ್ದು. ಇದು ಹಿಸ್ಪೀರಿಯಾಗೆ ಕಾರಣವಾಯಿತು. ಎರಡನೆಯದು ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ ಸೈದಾಂತಿಕವಾಗಿ ಲೈಂಗಿಕಾತ್ಮಕತೆಯ ಬಗೆಗಿನ ಅತೀ ಜ್ಞಾನ. ಇವೆರಡೂ ಒಂದಕ್ಕೊಂದು ವಿರುದ್ಧವಾಗೇನಿರಲಿಲ್ಲ, ಇವೆರಡೂ ಪಶ್ಚಿಮದಲ್ಲಿ ಜೊತೆ ಜೊತೆಗೇ ಇದ್ದವು.

ಆದರೆ ಈ ಲೈಂಗಿಕಾತ್ಮಕತೆಯ ಬಿರುಕಿಗೆ ಮನೋವೈಜ್ಞಾನಿಕ ವಿಶ್ಲೇಷಣೆ ನೇರವಾಗಿ ಉತ್ತರಿಸಿಲ್ಲ. ಆದರೆ ಅದನ್ನು ಸಂಪೂರ್ಣ ನಿರ್ಲಕ್ಷಿಸಿಯೂ ಇಲ್ಲ. ಪ್ರಾರಂಭದಲ್ಲಿ ಈ ವೈಯಕ್ತಿಕ ಮನೋವಿಶ್ಲೇಷಣೆ ಪಶ್ಚಿಮದಲ್ಲಿ ಕೆಲವು ತಪ್ಪು ಕಲ್ಪನೆಗಳಿಂದ ಕೂಡಿತ್ತು. ಲೈಂಗಿಕಾತ್ಮಕತೆ ಭಾಷೆಗೆ ಸಾಮಾಜಿಕ ಮುಖವಿರುವುದನ್ನು ಮರೆಯಿತು. ಈ ಭಾಷೆ ತಪ್ಪು ಕಲ್ಪನೆಯ, ಅವೈಜ್ಞಾನಿಕ ವಿಶ್ಲೇಷಣೆ ಲೈಂಗಿಕಾತ್ಮಕತೆಯಾ ಸ್ಥಾನವನ್ನು ಎರಡು ರೀತಿಯಲ್ಲಿ ವಿವರಿಸತೊಡಗಿತು . ಮೊದಲನೆಯದಾಗಿ ಮಕ್ಕಳು ತಮ್ಮ ಹುಟ್ಟಿನ ಬಗ್ಗೆ ಅಥವಾ ಹಂದು ಹೆಣ್ಣಿನ ಬಗ್ಗೆ ಇರುವ ಅಥವಾ ಇಲ್ಲದಿರುವ ಲೈಂಗಿಕಾತ್ಮಕ ಪರಿಕಲ್ಪನೆಯ ಬಗ್ಗೆ ಇದ್ದ ತಿಳುವಳಿಕೆ ಮಾಡಿದ ವಿಶ್ಲೇಷಣೆ. ಫ್ರಯಾಯ್ಡ್ ಈ ರೀತಿಯ ಮಕ್ಕಳಲ್ಲಿ ಇರುವ ಲೈಂಗಿಕಾತ್ಮಕತೆಯಾ ಜ್ಞಾನದ ಬಗ್ಗೆ ಮತ್ತು ಪಾಶ್ಚಿಮಾತ್ಯ ಧರ್ಮದಲ್ಲಿ ಇರುವ ಕಲ್ಪನೆಯ ಬಗ್ಗೆ ಸಂಶೋಧನೆ ನಡೆಸಿದ ಆದರೆ ಈ ಮನೋವೈಜ್ಞಾನಿಕ ವಿಶ್ಲೇಷಣೆಯು ಲೈಂಗಿಕಾತ್ಮಕತೆಯ ಸಿದ್ಧಾಂತಗಳು ಪಾಶ್ಚಾತ್ಯ ಸಮಾಜದಲ್ಲಿ ಹೇಗೆ ಹುಟ್ಟುತ್ತವೆ ಎಂಬುದನ್ನು ಗಮನಿಸಲಿಲ್ಲ ಎಂದು ನನ್ನ ನಂಬಿಕೆ.

ಬೃಹದಾಕಾರವಾಗಿ ಬೆಳೆದು ನಿ೦ತ ಈ ಸಾಮಾಜಿಕ ಲೈಂಗಿಕಾತ್ಮಕತೆ ಸೈಂಟ್ ಅಗಸ್ಟೀನನ ಕಾಲದಷ್ಟು, ಆದರೆ, ಕ್ರಿಶ್ಚಿಯನ್ ಧರ್ಮದ ಪ್ರಾರಂಭದಷ್ಟು ಹಳೆಯದು. ಈ ವಿಷಯವನ್ನು ಕೇವಲ ಮಿಥ್ ಎಂದು ಭಾವಿಸಿ, ಸರಳೀಕರಿಸಿ ಮಾದರಿಗಳ ಮಟ್ಟಕ್ಕೆ ಇಳಿಸಿ ಹೇಳಲು ಬರುವುದಿಲ್ಲ.

ಲೈಂಗಿಕಾತ್ಮಕತೆಯ ಚರಿತ್ರೆಯನ್ನು ರಚಿಸುವ ನನ್ನ ಯೋಜನೆ ಮನೋವಿಶ್ಲೇಷಣೆ ತಪ್ಪು ಎಂದು ಪರಿಗಣಿಸುವುದಿಲ್ಲ. ಈ ಮನೋವಿಶ್ಲೇಷಣೆಯ ಲೈಂಗಿಕತೆಯ ಸಾಮಾಜಿಕ ಸಾಂಸ್ಕೃತಿಕ ಆಯಾಮಗಳ ಜ್ಞಾನ ಅದರ ಮೂಲ ರೂಪದಲ್ಲೇ ಹೇಗೆ ಅತಿಯಾಯಿತು ಎಂದು ತಿಳಿದುಕೊಳ್ಳುವುದಾಗಿದೆ. ಅಲ್ಲದೆ ಈ ಲೈಂಗಿಕಾತ್ಮಕತೆಯನ್ನು ಆಕಾಂಕ್ಷೆಯ ತಾರ್ಕಿಕ ಜ್ಞಾನದ ತಳಹದಿಯಾಗಿ ತಾನೇ ಹೇಗೆ ಪ್ರತಿಫಲನಗೊಳ್ಳುತ್ತದೆ ಎಲ್ಲದು ತಿಳಿಯುವುದಾಗಿದೆ. ಲೈಂಗಿಕಾತ್ಮಕತೆಯ ಜ್ಞಾನ ವಿಮರ್ಶಾತ್ಮಕ ನೆಲೆಯಲ್ಲಿ ತನ್ನನ್ನು ತಾನೇ ಹೇಗೆ ಬಿಚ್ಚಿಟ್ಟುಕೊಳ್ಳುತ್ತದೆ ಎಂದು ತಿಳಿಯುವುದಾಗಿದೆ. ನಾನಿಲ್ಲಿ ಅಭ್ಯಸಿಸುವುದು ಮನೋವಿಶ್ಲೇಷಣೆಗೆ ವಿರುದ್ಧವಾದ ವಾದವನ್ನು ಹುಟ್ಟು ಹಾಕುವುದಿಲ್ಲ. ಲೈಂಗಿಕಾತ್ಮಕತೆಯ ಸಮಸ್ಯೆಯನ್ನು ಅಂದರೆ ಅದರ ಬಗೆಗಿನ ಜ್ಞಾನವನ್ನು ಅದು ಹೇಗೆ ಸಾಮಾಜಿಕ – ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜ್ಞಾನ ಅತಿಯಾಯಿತು ಎನ್ನುವುದನ್ನು ವಿಶ್ಲೇಷಿಸುವುದಾಗಿದೆ.

ಅಧಿಕವಾದ ಲೈಂಗಿಕಾತ್ಮಕತೆಯ ಸೈದ್ಧಾಂತಿಕ ಜ್ಞಾನವನ್ನು ಅಭ್ಯಸಿಸಬೇಕಾದರೆ ಮೊದಲು ಪಾಶ್ಚಾತ್ಯ ಸಂಸ್ಕೃತಿಯು ಅದರ ಬಗ್ಗೆ ನಡೆಸಿರುವ ಸಂವಾದಗಳನ್ನು ಅಭ್ಯಸಿಸಬೇಕು. ಪಾಶ್ಚಾತ್ಯರಲ್ಲಿ ಇದು ಬಹಳ ಹಿಂದಿನಿಂದಲೂ ‘ವೈಜ್ಞಾನಿಕ’ ಎಂಬಂತೆ ಚರ್ಚಿಸಲ್ಪಟ್ಟಿತ್ತು. ವೈಜ್ಞಾನಿಕ ಅಂದರೆ ಅದೊಂದು ‘ತರ್ಕಬದ್ಧ ಸಂವಾದ ‘ ಎಂದು ನಾನು ತಿಳಿದಿಲ್ಲ. ನಾವು ವೈಜ್ಞಾನಿಕ ಸತ್ಯ ಎಂದು ಈಗ ಪರಿಗಣಿಸಿರುವ ರೀತಿಯಲ್ಲಿ ಅದು ಇರಲಿಲ್ಲ. ಇದನ್ನು ಹದಿನೆಂಟನೆ ಶತಮಾನದ ಅರ್ಥದಲ್ಲಿ ಅಥವಾ ಹದಿನೇಳನೆ ಶತಮಾನದ ಅಥವಾ ಮಧ್ಯಯುಗೀನ ಧಾರ್ಮಿಕ ನೀತಿಯ ಅರ್ಥದಲ್ಲಿ ತೆಗೆದುಕೊಳ್ಳಬೇಕು.

ಆಗ ಲೈಂಗಿಕಾತ್ಮಕತೆ ಮತ್ತು ಅದರ ಇಚ್ಚೆ ಹೇಗಿತ್ತೆಂಬ ಊಹೆಯ ಆಧಾರದ ಮೇಲೆ ಆ ಸಂವಾದ ಹೇಗೆ ನಡೆಯುತ್ತಿತ್ತೆಂಬ ಆಧಾರದ ಮೇಲೆ ಪಾಶ್ಚಿಮಾತ್ಯ ಸಮಾಜಗಳು ಹೇಗಿದ್ದವೆಂಬುದನ್ನು ಊಹಿಸಬಹುದಾಗಿದೆ.

ನಾನು ಇಲ್ಲಿ ನನ್ನ ಮೊದಲ ಸಂಪುಟದ ಬರಹವನ್ನು ಪರಾಮರ್ಶಿಸುತ್ತೇನೆ, ನಮ್ಮ ಪಾಶ್ಚಿಮಾತ್ಯ ದೇಶಗಳಲ್ಲಿ ಲೈಂಗಿಕಾತ್ಮಕತೆಯ ಬಗ್ಗೆ ವೈಜ್ಞಾನಿಕವಾಗಿ ನಡೆಸುವ ಸಂವಾದಗಳು ತಳಮಟ್ಟದಲ್ಲಿ ನಡೆಯುತ್ತಿರುತ್ತದೆ. ಆದರೆ ಅದಕ್ಕೊಂದು ವೈಜ್ಞಾನಿಕತೆಯನ್ನು ಆರೋಪಿಸುವುದಿಲ್ಲ. ಇದಕ್ಕೆ ಬದಲಾಗಿ ಅದೊಂದು ಕಲೆ ಎಂದು, ಅದನ್ನು ಸೃಜಿಸುವ ರೀತಿಯನ್ನು ಲೈಂಗಿಕ ಸಂಬಂಧ ಅಥವಾ ಲೈಂಗಿಕ ಅಂಗಾಂಗಗಳ ಮೂಲ ಸಿಗುವ ಸುಖವನ್ನು ಅತೀವವಾಗಿ ಅನುಭವಿಸುವುದನ್ನೂ ವಿವರಿಸುತ್ತದೆ. ಇದನ್ನು ಅನೇಕ ಪೌರಾತ್ಯ ದೇಶಗಳಲ್ಲಿ ನಾವು ಕಾಣಬಹುದು. ರೋಮ್ ಮತ್ತು ಪುರಾತನ ಗ್ರೀಕ್ ಸಂಸ್ಕೃತಿಯಲ್ಲೂ ಇದನ್ನು ಕಾಣಬಹುದು. ಲೈಂಗಿಕ ಸುಖಾನುಭವದ ಹುಡುಕಾಟದ ಅನೇಕ ಸಂವಾದಗಳನ್ನು ಹುಡುಕಬಹುದು. ಆದರೆ ಮಧ್ಯಯುಗೀನ ಪಾಶ್ಚಾತ್ಯ ಸಂವಾದವು ಸಂಪೂರ್ಣ ಭಿನ್ನವಾಗಿದೆ.

ಪಶ್ಚಿಮದಲ್ಲಿ ಪ್ರಚೋದಕ ಕಲೆ ನಮಗೆ ಕಂಡು ಬರುವುದಿಲ್ಲ, ಪ್ರೀತಿ ಮಾಡುವುದು ಹೇಗೆ ಎನ್ನುವುದನ್ನು ವ್ಯಕ್ತಿಗಳು ಕಲಿಯುವುದಿಲ್ಲ. ಸುಖಾನುಭವಕ್ಕೆ ತಮ್ಮನ್ನು ತಾವು ಓಪ್ಪಿಸಿಕೊಳ್ಳುವುದಿಲ್ಲ. ಮತ್ತೊಬ್ಬರಲ್ಲಿ ಈ ಸುಖವನ್ನು ಸೃಷ್ಟಿಸುವುದು ಹೇಗೆ ಎಂದು ಕಲಿಯುವುದಿಲ್ಲ. ಪ್ರೀತಿಯ ಶಿಖರಕ್ಕೆ ಕೊಂಡೊಯ್ಯುವುದು ಗೊತ್ತಿಲ್ಲ, ಮತ್ತೊಬ್ಬರ ಸುಖದ ಮೂಲಕ ತಮ್ಮ ಸುಖವನ್ನು ಹೆಚ್ಚಿಸಿಕೊಳ್ಳುವುದು ಗೊತ್ತಿಲ್ಲ. ಪಾಶ್ಚಾತ್ಯರು ಇದನ್ನು ಕಲಿಯುವುದು ಸುಲಭವಲ್ಲ, ಈ ಪ್ರಚೋದಕ ಕಲೆ ಮತ್ತು ಅದರ ಬಗೆಗಿನ ಚರ್ಚೆ ಆಂತರಿಕವಾಗಿ, ಖಾಸಗಿಯಾಗಿ ಮಾತ್ರ ಇರಬಲ್ಲದು. ಇದರ ಬದಲಾಗಿ ಲೈಂಗಿಕತೆಯನ್ನು ವಿಜ್ಞಾನದ ರೀತಿಯಲ್ಲಿ ಕಲಿಯಲು ಪ್ರಯತ್ನಿಸುತ್ತಾರೆ. ಆದರೆ ಅದರ ಆನಂದವನ್ನಲ್ಲ. ವೈಯಕ್ತಿಕವಾಗಿ ಆ ಆನಂದವನ್ನು ತೀವ್ರವಾಗಿ ಅನುಭವಿಸುವುದಿಲ್ಲ, ಆದರೆ ಅದರ ಸತ್ಯ ಏನು ಎಂಬುದರ ಕಡೆಗೆ ಇರುತ್ತದೆ. ಪಾಶ್ಚಿಮಾತ್ಯರಲ್ಲಿ ಎರಡು ರೀತಿಯ ವಿಶ್ಲೇಷಣೆಗಳಿವೆ. ಎರಡು ರೀತಿಯ ಸಂಶೋಧನೆಗಳಿವೆ. ಅದನ್ನು ಎರಡು ರೀತಿಯ ಸಂಪೂರ್ಣ ಭಿನ್ನ ಸಮಾಜಗಳಲ್ಲಿ ಕಾಣಬಹುದು. ಸ್ವಲ್ಪ ವಿಷಯಾಂತರ ಮಾಡಿ ಹೇಳ ಬಯಸುತ್ತೇನೆ. ಅದೆಂದರೆ ಈ ವಿಷಯವನ್ನು ಸಾಂಸ್ಕೃತಿಕವಾಗಿ ಚಾರಿತ್ರಿಕವಾಗಿ ನನಗಿಂತ ವಿಭಿನ್ನ ಹಿನ್ನೆಲೆಯಲ್ಲಿ ಇರುವ (ಪೌರಾತ್ಯ) ಜನಗಳೊಡನೆ ಚರ್ಚಿಸಬಯಸುತ್ತೇನೆ. ಈ ಬಗ್ಗೆ ಪಾಶ್ಚಾತ್ಯರಿಗೆ ಹೆಚ್ಚು ತಿಳಿದಿಲ್ಲ. ಪೌರಾತ್ಯರಲ್ಲಿರುವ ‘ಪ್ರಚೋದಕ ಕಲೆ’ ಹೇಗೆ ಹುಟ್ಟಿತು ಎಂಬ ವಿಷಯ ತಿಳಿಯಲು ಇಚ್ಛಿಸುತ್ತೇನೆ. ಪೌರಾತ್ಯ ಪಾಶ್ಚಿಮಾತ್ಯ ‘ಪ್ರಚೋದಿತ ಕಲೆ’ಯನ್ನು ಹೋಲಿಸಿ ನೋಡಲು ಕುತೂಹಲಕಾರಿಯಾಗಿದೆ. ಈಗ ಮತ್ತೆ ಪಶ್ಚಿಮದ ಕಡೆಗೆ ತಿರುಗಿನೋಡೋಣ. ಲೈಂಗಿಕಾತ್ಮಕತೆಯ ಚರಿತ್ರೆಯ ಕೃತಿಯಲ್ಲಿ ಅದರ ವಿವಿಧ ಪರಿಕಲ್ಪನೆಗಳನ್ನು ಸಿದ್ದಾಂತಗಳನ್ನು ಹೇಳಿಕೆಗಳನ್ನು ವಿಶ್ವಕೋಶದ ರೀತಿಯಲ್ಲಿ ಹೇಳುವುದು ನನ್ನ ಉದ್ದೇಶವಲ್ಲ. ಪಾಶ್ಚಾತ್ಯ ಯೂರೋಪಿಯನ್ ಸಮಾಜದಲ್ಲಿ ಏಕೆ ಇಷ್ಟೊಂದು ವಿಪರೀತ ಲೈಂಗಿಕ ವಿಜ್ಞಾನ ಹುಟ್ಟಿತು ಎಂದು ವಿಶ್ಲೇಷಿಸುವುದು ನನ್ನ ಗುರಿ. ಯಾವ ಕಾರಣಕ್ಕಾಗಿ ಶತಮಾನಗಳಿಂದ ಇದನ್ನು ಚರ್ಚೆಗೆ ಒಳಪಡಿಸಿದರು ಎಂದೂ ತಿಳಿಯಬೇಕಾಗಿದೆ. ಯೂರೋಪಿಯನ್ನರು ಯಾಕಾಗಿ ಸಹಸ್ರಮಾನಗಳಿಂದ ಲೈಂಗಿಕತೆಯ ಸತ್ಯವನ್ನು ತಿಳಿಯಲು ಆಶಿಸಿದರು. ಲೈಂಗಿಕತೆಯ ಆನಂದವನ್ನು ಏಕೆ ಅನುಭವಿಸಲು ಮುಂದಾಗಲಿಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ತಕ್ಷಣ ನನ್ನ ಮನಸ್ಸಿಗೆ ಬರುವುದು ಫ್ರಾಯ್ಡ್. ಫ್ರಾಯ್ಡ್ನ ಮೂಲಕ ರಾಜಕೀಯ, ಸಾಮಾಜಿಕ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಚಳುವಳಿಗಳಿಂದ ಲೈಂಗಿಕಾತ್ಮಕತೆಯನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದವು, ಶತಶತಮಾನಗಳಿಂದ ಈ ವಿಷಯದ ಬಗ್ಗೆ ಮಾತನಾಡದೆ ಮೌನ ವಹಿಸದ್ದೆವು. ಈಗ ನಾವು ಇದರಿಂದ ಬಿಡುಗಡೆ ಪಡೆಯುವ ಹಾದಿಯಲ್ಲಿದ್ದೇವೆ. ತಿಳುವಳಿಕೆಯನ್ನು ಆಹ್ವಾನಿಸುತ್ತಿದ್ದೇವೆ. ಈ ಹಿಂದೆ ಅನೇಕ ಶತಮಾನಗಳಲ್ಲಿ ಬೂರ್ಜ್ವಾ ನೈತಿಕತೆ ಮತ್ತು ಕ್ರಿಶ್ಚಿಯಾನಿಟಿ ನೈತಿಕತೆ, ಲೈಂಗಿಕಾತ್ಮಕತೆಯ ಬಗ್ಗೆ ಮಾತನಾಡಲು, ಪ್ರಯತ್ನಿಸಲು ಪಾಶ್ಚಿಮಾತ್ಯ ದೇಶಗಳು ತಡೆಹಿಡಿದ್ದವು. ಚಾರಿತ್ರಿಕವಾಗಿ ಈ ಮೂರು ಅಂಶಗಳು ಇದಕ್ಕೆ ಕಾರಣ.

ಮೊದಲ ಚಳುವಳಿ ಗ್ರೀಕ್ ಮತ್ತು ರೋಮ್ ನ ಪ್ರಾಚೀನತೆ. ಇಲ್ಲಿ ಲೈಂಗಿಕಾತ್ಮಕತೆಯನ್ನು ಯಾವ ಕಷ್ಟವೂ ಇಲ್ಲ ಸ್ವಚ್ಛಂದವಾಗಿ , ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಬಹುದಾಗಿತ್ತು. ಪ್ರಚೋದಕ ಕಳೆಯ ಮೂಲಕ ತೋರಿಸಬಹುದಾಗಿತ್ತು. ಆಗ ಕ್ರಿಶ್ಚಿಯನ್ ಧಾರ್ಮ ತನ್ನ ತಲೆ ತೂರಿಸಿತು. ಪಾಶ್ಚಾತ್ಯರಲ್ಲಿ ಮೊದಲ ಬಾರಿಗೆ ಲೈಂಗಿಕಾತ್ಮಕತೆಯ ಬಗ್ಗೆ ವಿರೋಧವನ್ನು ಹೇರಿತು. ಲೈಂಗಿಕ ಭೂಗವನ್ನು ತಿರಸ್ಕರಿಸಿತು. ಇದಕ್ಕೆ ನೈತಿಕತೆಯ ಕಾರಣವನ್ನು ಮುಂದೊಡ್ಡಿತು. ಹದಿನಾರನೇ ಶತಮಾನಾದ ಬೂರ್ಜ್ಜಾ ಸಂಸ್ಕೃತಿಗೆ ತೆರೆದುಕೊಂಡು ಸಾಂಸ್ಕೃತಿಕ ಸ್ವಾಮ್ಯವನ್ನು ಹೇರಿತು. ಇನ್ನೂ ತೀವ್ರವಾಗಿ, ಕ್ರಿಶ್ಚಿಯನ್ ಧರ್ಮದ ಹಿನ್ನೆಲೆವಲ್ಲಿ ಲೈಂಗಿಕಾತ್ಮಕತೆಯ ಮೇಲೆ ಕಡಿವಾಣ ಹಾಕಿತು. ಅಲ್ಲದೆ ಹತ್ತೊಂಬತ್ತನೆಯ ಶತಮಾನದ ತನಕ ಇದನ್ನು ಮುಂದುವರೆಸಿತು . ಹತ್ತೊಂಬತ್ತನೆಯ ಶತಮಾನದಲ್ಲಿ ಫ್ರಾಯ್ಡ್ನ ಮೂಲಕ ಇದರ ಮುಸುಕನ್ನು ತೆರೆಯಲಾಯಿತು.

ಹೀಗೆ ಪಶ್ಚಿಮದಲ್ಲಿ ಲೈಂಗಿಕಾತ್ಮಕತೆಯ ಬಗ್ಗೆ ಚಾರಿತ್ರಿಕವಾಗಿ ಯೋಜನಾ ಬದ್ಧತೆಯಿಂದ ನಿರೋಧವನ್ನು ಹೇರಲಾಯಿತು, ಅದುಮಿಡಲಾಯಿತು, ತಿರಸ್ಕರಿಸಲಾಯಿತು . ಚರ್ಚಿನಿಂದ ಹೊರಗಿಡಲಾಯಿತು. ಕ್ರಿಶ್ಚಿಯನ್ ಧಾರ್ಮ ಇದನ್ನು ಯೋಜನ್ನ ಬದ್ದವಾಗಿ ಹೇರಿತು. ಲೈಂಗಿಕಾತ್ಮಕತೆಯ ತ್ರೈಸ್ಕಾರವನ್ನು ತಿಳಿಯುವ ನನ್ನ ಈ ಅಧ್ಯಯನದಲ್ಲಿ ಈ ರೀತಿಯ ಪ್ರಯತ್ನವಾಗಿದೆ. ಲೈಂಗಿಕಾತ್ಮಕತೆಯ ಚರಿತ್ರೆಯನ್ನು ರಚಿಸುವಲ್ಲಿ ನಿರ್ಬಂಧ ಮತ್ತು ಪ್ರಚೋದನೆಯ ಹಿನ್ನೆಲೆ ಏನು ಎಂದು ತಿಳಿಯುವುದು ಮುಖ್ಯ.

ಪಾಲ್ ಮೈನೆ ಎಂಬ ಚರಿತ್ರೆಕಾರನು ಕ್ರಿಶ್ಚಿಯಾನಿಟಿ ಮುಂಚೆ ಇದ್ದ ರೋಮ್ ನ ಲೈಂಗಿಕಾತ್ಮಕತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾನೆ. ಆತ ಅನೇಕ ಪ್ರಮುಖ ಆವಿಷ್ಕಾರಗಳನ್ನು ಮಾಡಿದ್ದಾನೆ. ಅವುಗಳನ್ನು ನಾವು ಪರಿಗಣಿಸಬೇಕು.

ಲೈಂಗಿಕಾತ್ಮಕತೆಯ ಬಗ್ಗೆ ಕ್ರಿಶ್ಚಿಯನ್ ನೀತಿಯನ್ನು ಗುಣಗಳನ್ನು ತಿಳಿಯಬೇಕಾದರೆ ವೇಗನ್ ನ ಗ್ರೀಕ್ ಅಥವಾ ರೋಮನ್ ನೀತಿಗಳನ್ನು ಹೋಲಿಸಿ ನೋಡಬೇಕು. ಮೊತ್ತ ಮೊದಲಾಗಿ ಕ್ರಿಶ್ಚಿಯಾನಿಟಿ ಪುರಾತನ ಸಮಾಜದ ಮೇಲೆ ಅನೇಕ ನಿಯಮಗಳನ್ನು ಹೇರಿತು. ಎರಡನೆಯದಾಗಿ, ಜೇವಸೃಷ್ಟಿಯು ಒಂದು ಕ್ರಿಯೆ ಅಷ್ಟೇ. ಮೂರನೆಯದಾಗಿ, ಎಲ್ಲಕ್ಕಿಂತ ಮಿಗಿಲಾಗಿ ಕೇವಲ ಲೈಂಗಿಕ ಭೋಗವನ್ನು ಲೈಂಗಿಕ ಭೋಗವು ಎಂದು ಪರಿಗಣಿಸಬೇಕುಂಬು ಕೆಡುಕಿನದು. ಎಷ್ಟು ಕೆಡುಕೆಂದರೆ ಅದನ್ನು ಸಂಪೂರ್ಣ ನಿಷೇಧಿಸಬೇಕು. ಅದ್ಕಕೆ ಕನಿಷ್ಠ ಆದ್ಯತೆಯನ್ನು ನೀಡಬೇಕು. ಎಷ್ಟೆಂದರೆ ಮಕ್ಕಳನ್ನು ಪಡೆಯುವಷ್ಟು. ಈ ಮಕ್ಕಳನ್ನು ಮದುವೆಯ ಮೂಲಕವೇ ಪಡೆಯಬೇಕು. ಅದು ಮಾನ್ಯವಾಗಿರಬೇಕು, ಈ ಮೂರು ಗುಣಗಳನ್ನು ಕ್ರಿಶ್ಚಿಯನ್ ಧರ್ಮವನ್ನು ನಿರ್ಧರಿಸುತ್ತವೆ. ಪಾಲ್ ಮೈನೆಯ ಅಧ್ಯಯನ ಲೈಂಗಿಕಾತ್ಮಕತೆಯ ಈ ಮೂರು ಮುಖ್ಯ ಧ್ಯೇಯಗಳು ರೋಮನ್ ಪ್ರಪಂಚದಲ್ಲಿ ಕ್ರಿಶ್ಚಿಯಾನಿಟಿ ಮುಂಚೆಯೂ ಇದ್ದವೆಂದು ತಿಳಿಸುತ್ತದೆ.

ಮದುವೆಯಾಗುವುದು, ಹೆಂಡತಿಯನ್ನು ನೋಡಿಕೊಳ್ಳುವುದು, ಅವಳನ್ನು ಮಾತ್ರ ಪ್ರೀತಿಸಿ ಮಕ್ಕಳನ್ನು ಪಡೆಯುವುದು . ಲೈಂಗಿಕ ಭೋಗದಿಂದ ಬಿಡುಗಡೆ ಪಡೆಯಲೆತ್ನಿಸುವುದು ಇವೆಲ್ಲವನ್ನೂ ಆಗಿನ ಕಾಲದ ರೋಮನ್ ಚಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧಾರ್ಮ ವಿರೋಧಿಸಲಿಲ್ಲ ಎಂದು ಹೇಳಬಹುದು. ಬಹುಪತ್ನಿತ್ವ , ವಿವಾಹ ಬಾಹಿರ ಸಂಬಂಧ ಇವೆಲ್ಲ ಕ್ರಿಶ್ಚಿಯನ್ ಧರ್ಮದ ಮುಂಚೆಯೇ ಅನುಸರಿಸಲ್ಪಟ್ಟಿತ್ತು ಎಂದು ಹೇಳಬಹುದು. ಕೆಲವು ಶ್ರೀಮಂತರು , ಕೆಲವು ವಿಶೇಷ ಸೌಲಭ್ಯ ಪಡೆದವರು ಈ ನಿಯಮವನ್ನು ಅನುಸರಿಸಬೇಕಾಗಿರಲಿಲ್ಲ.

ಅಂದರೆ ಕ್ರಿಶ್ಚಿಯನ್ ಧರ್ಮವು ಲೈಂಗಿಕಾತ್ಮಕತೆಯ ಚರಿತ್ರೆಯಲ್ಲಿ ಯಾವ ಪಾತ್ರವನ್ನೂ ವಹಿಸಲಿಲ್ಲವೆಂದು ಅರ್ಥವೇ? ಕ್ರಿಶ್ಚಿಯನ್ ಧಾರ್ಮ ಇದರಲ್ಲಿ ತನ್ನ ಪಾತ್ರವನ್ನು ವಹಿಸಿಲ್ಲದೇ ಇರಬಹುದು. ಆದರೆ ಅದು ಲೈಂಗಿಕ ನೈತಿಕತೆಯಲ್ಲಿ ಹೊಸ ತಂತ್ರವನ್ನು ಬಳಸಿತು. ರೋಮ್ ಚಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧಾರ್ಮ ಪ್ರವೇಶಿಸಿ ಬಹಳ ಬೇಗ ಪ್ರಭುತ್ವದ ಧರ್ಮವಾಯಿತು. ಧರ್ಮಾಧಿಕಾರದ ತಂತ್ರವನ್ನು ಬಳಸಿತು. ನೈತಿಕ ಹಾಗೂ ಧಾರ್ಮಿಕ ನಿಷೇಧಕ್ಕಿಂತ ಅಧಿಕಾರದ ಪ್ರಭಾವವನ್ನು ಹೇರುವುದಕ್ಕೆ ಲೈಂಗಿಕಾತ್ಮಕತೆಯನ್ನು ವಿಶ್ಲೇಷಿಸಬೇಕು . ಈಗ ಪ್ರಶ್ನೆ ಏನೆಂದರೆ ಕ್ರಿಶ್ಚಿಯನ್ ಧಾರ್ಮ ರೋಮನ್ ಚಕ್ರಾಧಿಪತ್ಯದೊಳಗೆ ಪ್ರಯೋಗಿಸಿದ ಅಧಿಕಾರದ ಹೊಸ ತಂತ್ರವೇನೆಂಬುದು.

ಈ ಅಧಿಕಾರವನ್ನು ಏನೆಂದು ಕರೆಯಬಹುದು. ಇದು ಸಮಾಜದಲ್ಲಿ ಇರುವ ಸಾಮಾನ್ಯ ವ್ಯಕ್ತಿಗಳ ವರ್ಗ. ಈ ವರ್ಗ ಸಮಾಜದಲ್ಲಿ ತಮ್ಮ ಅಂತಸ್ತೇನು ಎಂದು ಗುರುತಿಸಿಕೊಂಡಿರುವುದಿಲ್ಲ. ಇವರು ಬುದ್ದಿವಂತಿಕೆ, ನೈತಿಕ ಅರ್ಹತೆ ಎಂದರೇನು ಏನು ಗೊತ್ತಿಲ್ಲದ ಜನ. ಕ್ರಿಶ್ಚಿಯನ್ ಧರ್ಮದಲ್ಲಿ ಪ್ಯಾಸ್ಟರ್ ನ ಪಾತ್ರವೊಂದಿದೆ. ಕುರಿಗಾಹಿಗಳು ಎಂದು ಇವರನ್ನು ಕರೆಯಬಹುದು. ಉಳಿದ ವ್ಯಕ್ತಿಗಳು ಕುರಿಗಳು ಅಥವಾ ಕುರಿಮಂದೆ ಎಂದು ಹೇಳಬಹುದು. ಈ ರೀತಿಯ ಪೌರತಂತ್ರವನ್ನು ಸೃಷ್ಟಿಸಿ ಪ್ರಾಚೀನ ರೋಮ್ ನ ಸಮಾಜದ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸಿದರು. ನನ್ನ ಪ್ರಕಾರ ಇದೊಂದು ಬಹಳ ಪ್ರುಮುಖ ತಂತ್ರ.

ಇದರ ಪರಿಣಾಮವೆಂದರೆ ಪ್ರಾಚೀನ ಗ್ರೀಕ್ ಮತ್ತು ರೋಮಿನಲ್ಲಿ ಕೆಲವು ವ್ಯಕ್ತಿಗಳು ಕುರಿಗಾಹಿಯ ಪಾತ್ರವನ್ನು ವಹಿಸಿ ಉಳಿದವರನ್ನು ಅವರ ಜೀವನ್ ಪೂರ್ತ ಹುಟ್ಟಿನಿಂದ ಸಾವಿನವರೆಗೆ ನಿಯಂತ್ರಿಸಬಹುದೆಂಬ ಕಲ್ಪನೆ ಇರಲಿಲ್ಲ. ಗ್ರೀಕ್ ಮತ್ತು ರೋಮ್ ನ ಸಾಹಿತ್ಯದಲ್ಲಿ ‘ಕುರಿಗಾಹಿ’ ಎಮ್ಬ ಪರಿಕಲ್ಪನೆಯೇ ಇರಲಿಲ್ಲ. ‘ರಾಜ’ ಏನಂದ್ರೆ ಯಾರು ಎಂದು ಪಿಲಾಟೆಯೋ ತನ್ನನ್ನು ತಾನೇ ಕೇಳಿಕೊಂಡು ಅದಕ್ಕೆ ಈ ರೀತಿ ಉತ್ತರ ಕೊಟ್ಟಿದ್ದಾನೆ. ಅವನು ಕುರಿಗಾಹಿಯ ಬಗ್ಗೆ ಮಾತನಾಡುವುದಿಲ್ಲ. ಅವನು ರಾಜನೆಂದರೆ ನೇಕಾರನೆಂದು ಕರೆದು, ಈ ನೇಕಾರ ಸಮಾಜದ ವ್ಯಕ್ತಿಗಳನ್ನು ದಾರಕ್ಕೆ ಹೋಲಿಸುತ್ತಾನೆ. ಈ ನೇಕಾರ ದಾರವನ್ನು ನೇಯ್ದು ಸುಂದರ ಬಟ್ಟೆಯನ್ನು ನೇಯುವವನು ಎಂದು ಕರೆದಿದ್ದಾನೆ. ಪ್ರಭುತ್ವ, ಪಠಣ, ಇದು ಬಟ್ಟೆ, ಪ್ರಜೆಗಳು ಈ ಬಟ್ಟೆಯ ದಾರ. ಅಲ್ಲಿ ಕುರಿ ಮಾತು ಕುರಿಗಾಹಿಯ ಪರಿಕಲ್ಪನೆ ಇರಲಿಲ್ಲ.

ಅಂದರೆ ಕುರಿಗಾಹಿಯಾಗಿ ಕುರಿಯ ಮಂದೆಯ ಗೌರವಕ್ಕೆ ಪಾತ್ರನಾಗುವ ಮುಂದಾಳು ಎಂಬ ಪರಿಕಲ್ಪನೆ ರೋಮ್ ಜಗತ್ತಿನದಲ್ಲ. ಇದು ಪೂರ್ವ ಮೆಡಿಟೆರೇನಿಯನ್ ಪ್ರಪಂಚದ್ದು. ಈ ಪರಿಕಲ್ಪನೆಯನ್ನು ಈಜಿಪ್ಟಿನಲ್ಲಿ ಕಾಣಬಹುದು. ಅದರಲೂ ಹೀಬ್ರೂ ಸಮಾಜದಲ್ಲಿ ‘ಕುರಿಮಂದೆ’ ಮತ್ತು ‘ಕುರಿಗಾಹಿ’ ಪರಿಕಲ್ಪನೆ ಆ ಸಮಾಜದ ಮೂಲಭೂತ ಪರಿಕಲ್ಪನೆಯಾಗಿತ್ತು. ದೇವರು ತನ್ನ ಪ್ರಜೆಗಳನ್ನು ಕಾಯುವ ಕುರುಬ. ಜೆಹೋವಾಹದ ಜನರು ಕುರಿಮಂದೆ. ಇಸ್ರೇಲಿನ ಮೊದಲ ದೊರೆ ಡೇವಿಡ್ ದೇವರ ಕೈಯಿಂದ ಜನರನ್ನು ಕುರಿಮಂದೆಯಾಗಿಯೂ ಅವರನ್ನು ಕಾಯುವ ಕುರುಬನಾಗಿ ತಾನು ಕಾರ್ಯನಿರ್ವಹಿಸುವ ಹೊಣೆಯನ್ನು ಹೊತ್ತುಕೊಳ್ಳುತ್ತಾನೆ. ಈ ಜ್ಯುಯಿಷ್ ಜನರಿಗೆ ಮುಕ್ತಿ ಸಿಗುವುದು ಅಂದರೆ ಮಂದೆಯನ್ನು ಮತ್ತೆ ದೇವರ ಹತ್ತಿರ ಕಳುಹಿಸುವುದನ್ನು ಈ ಕುರುಬ ಗ್ಯಾರಂಟಿ ಮಾಡುತ್ತಾನೆ. ಆದ್ದರಿಂದ ಈ ಕುರಿಗಾಹಿಯ ಕಥೆ ಪೂರ್ವ ಮೆಡಿಟರೇನಿಯನ್ ಸಮಾಜದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ಆಗ ಈ ವ್ಯವಸ್ಥೆ ಗ್ರೀಕರಲ್ಲಾಗಲಿ , ರೋಮನ್ನರಲ್ಲಾಗಲೀ ಇರಲಿಲ್ಲ.

ಈಜಿಪ್ಟ್ ಅಸ್ಪೀರಿಯಾದ.ಹೀಬ್ರೂಗಳಲ್ಲಿ ಬೆಳೆದು ಬಂದ ಈ ಪ್ಯಾಸ್ಪೋರಲ್ ಅಧಿಕಾರ ಶಕ್ತಿ ಅಂದರೆ ಏನು ? ಅದನ್ನು ಹೇಗೆ ತಿಳಿಯಬಹುದು ಎಂದು ನೋಡೋಣ, ಪ್ಯಾಸ್ಟೊರಲ್ ಅಧಿಕಾರದ ಗುಣಲಕ್ಷಣಗಳನ್ನು ಹೀಗೆ ಹೇಳಬಹುದು. ಈ ಅಧಿಕಾರವು ಮಾಮೂಲು ಪರಂಪರಾಗತ ರಾಜಕೀಯ ಅಧಿಕಾರಕ್ಕೆ ವಿರುದ್ಧವಾದುದು, ಇದು ದೇಶದ ಮೇರೆಯಲ್ಲಿ ಮಾತ್ರ ಹಬ್ಬವುದಿಲ್ಲ, ಕುರುಬ ಮೇರೆಯನ್ನು ಆಳುವುದಿಲ್ಲ. ಆತ ಅಸಂಖ್ಯತ ವ್ಯಕ್ತಿಗಳನ್ನ ಆಳುತ್ತಾನೆ. ಕುರಿ, ದನ, ಪ್ರಾಣಿಗಳನ್ನು ಆಳುತ್ತಾನೆ. ನಿರಂತರ ಚಲನೆಯಲ್ಲಿರುವ ಮಂದೆಯನ್ನು ಆಳುತ್ತಾನೆ. ಹೀಗೆ ಜಂಗಮ ಸ್ಥಿತಿಯಲ್ಲಿರುವ ಪ್ರಾಣಿಗಳನ್ನು ಆಳುತ್ತಿರುತ್ತಾನೆ.

ಇದೇ ಆ ಕುರುಬನ ಪಾತ್ರ. ಇಲ್ಲಿ ಗೆಲುವು ಸೋಲಿನ ಪ್ರಶ್ನೆಯೇ ಇಲ್ಲ. ಏಕೆಂದರೆ ಇಲ್ಲಿ ದೇಶದ ಮೇರೆಗಳೇ ಇರುವುದಿಲ್ಲ. ಆದ್ದರಿಂದ ಯುದ್ಧ ಮಾಡಿ ಕೊಳ್ಳೆಹೊಡೆದು ಸಂಪಾದಿಸಿದ ಐಶ್ವರ್ಯವಿಲ್ಲ. ಅ೦ತೆಯೇ ಗುಲಾಮರೂ ಇಲ್ಲಿ ವೈರಿಗೆ ತೊಂದರೆ ಕೊಡುವುದು ಈ ಕುರುಬನ ಕರ್ತವ್ಯವಲ್ಲ. ಇಲ್ಲಿ ಕಾವಲುಗಾರ ಕಾಯಲ್ಪಟ್ಟ ಪ್ರಾಣಿಗಳಿಗೆ ಒಳಿತನ್ನ ಮಾಡುವುದು ಮುಖ್ಯ. ಅಂದರೆ ಭೌತಿಕವಾಗಿ ಒಳಿತನ್ನ ಮಾಡುವುದು. ಕುರಿಗಳಿಗೆ ಚೆನ್ನಾಗಿ ಮೇವು ಉಣಿಸುವುದು, ಹುಲ್ಲುಗಾವಲನ್ನು ಹುಡುಕಿಕೊಡುವುದು, ಕುಡಿಯಲು ನೀರು ಒದಗಿಸುವುದಷ್ಟೇ . ಹೀಗೆ ಈ ಅಧಿಕಾರ ವ್ಯಕ್ತಿಗಳಿಗೆ ಮತ್ತು ಗುಂಪಿಗೆ ಆಧಾರವಾಗಿರುವುದು. ಇಲ್ಲಿ ಪರಂಪರಾಗತ ರಾಜ್ಯದಲ್ಲಿರುವ ಆಢಳಿತದಂತೆ ವೈರಿಗಳ ಮೇಲೆ ಜಂತುಗಳಿಸಿ ಸಂಪಾದಿಸುವ ಅಧಿಕಾರವಲ್ಲ, ಇದು ಒಂದು ರೀತಿಯಲ್ಲಿ ಫಲಾನುಭವಿಗಳ ಅಧಿಕಾರ.

ಮೂರನೇ ರೀತಿಯ ಪ್ಯಾಸ್ಪೋರಲ್ ಅಧಿಕಾರ ಈ ನಾಗರಿಕತೆಯಲ್ಲಿ ಹುಟ್ಟಿದ್ದೆಂದರೆ ಮಂದೆಗೆ ಬದುಕಲು ಬೇಕಾದ ಮೂಲಾಧಾರಗಳನ್ನು ಒದಗಿಸುವುದು. ಇಲ್ಲಿ ಕುರುಬನಿಗೆ ಒಂದು ನೈತಿಕ ಗುಣವಿರಬೇಕಾಗುತ್ತದೆ, ಆತ ಭಕ್ತಿಯಿಂದಿರಬೇಕಾಗುತ್ತದೆ. ಸಮಯ ಬಿದ್ದರೆ ಕುರಿಗಳಿಗಾಗಿ ತನ್ನ ಜೀವವನ್ನು ತ್ಯಾಗ ಮಾಡಿಯಾದರೂ ಅವನ್ನು ರಕ್ಷಿಸಬೇಕಾಗುತ್ತದೆ. ಬೈಬಲ್ ಪಠ್ಯದಲ್ಲಿ ಇದಕ್ಕೆ ಸಂಬಂಧಪಟ್ಟ ಅನೇಕ ಸುಪ್ರಸಿದ್ದ ದೃಷ್ಟಾಂತಗಳಿವೆ. ಒಳ್ಳೆಯ ಕುರುಬ ಕುರಿಗಳಿಗಾಗಿ ತನ್ನ ಪ್ರಾಣವನ್ನೇ ಕೊಡುತ್ತಾನೆ. ಪಾರಂಪರಿಕ ಅಧಿಕಾರದಲ್ಲಿ ಈ ತಂತ್ರ ಹಿಂದು ಮುಂದಾಗುತ್ತದೆ. ಅಲ್ಲಿ ಒಬ್ಬ ಒಳ್ಳೆಯ ನಾಗರಿಕ ಎನ್ನಿಸಿಕೊಳ್ಳಬೇಕಾದರೆ ತನ್ನ ರಾಜನಿಗೆ ತನ್ನ ಪ್ರಾಣವನ್ನು ಕೊಡುತ್ತಾನೆ. ಪಾಸ್ಟೊರಲ್ ಅಧಿಕಾರದಲ್ಲಿ ಕುರುಬ ತನ್ನ ಪ್ರಾಣವನ್ನು ಕೊಡಲು ಸಿದ್ಧನಾಗಿರುತ್ತಾನೆ.

“ಸಾಮಾನ್ಯವಾಗಿ ಪಶ್ಚಿಮದ ಮನುಷ್ಯನಿಗೆ ಜೀವನ ಎಂಬುದರ ಅರ್ಥವೇನು? ಅದರಲ್ಲುವು ಈ ರೀತಿಯ ಪ್ಯಾಸ್ಟೋರಲ್ ಅಧಿಕಾರದ ಹಿನ್ನೆಲೆಯಲ್ಲಿ ಏನು ಎಂದು ತಿಳಿಯಬೇಕು . ಮೊದಲನೆಯದಾಗಿ ಪ್ಯಾಸ್ಟೋರಲ್ ನ ಇರುವು ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತಿ ಪಡೆಯುವ ಮಾರ್ಗವನ್ನು ಕಡ್ಡಾಯವಾಗಿ ತಿಳಿಸಿಕೊಡಬೇಕು. ಪಶ್ಚಿಮದ ಕ್ರಿಶ್ಚಿಯನರಲ್ಲಿ ತಾನಿ ವೈಯಕ್ತಿಕವಾಗಿ ಮುಕ್ತಿಯನ್ನು ಕಾಣಬೇಕಾಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ”

ಕೊನೆಯದಾಗಿ ಬಹಳ ಮುಖ್ಯವಾದ ಗುಣವೆಂದರೆ- ಈ ಪಾಸ್ಟೊರಲ್ ಅಧಿಕಾರ ವ್ಯಕ್ತಿಗತ ಅಧಿಕಾರ, ಅಂದರೆ ರಾಜ ಅಥವಾ ಮ್ಯಾಜಿಸ್ಟ್ರೇಟನು ತನ್ನ ರಾಜ್ಯವನ್ನು, ಮೇರೆಯನ್ನು ಪಟ್ಟಣವನ್ನು ಪ್ರಜೆಗಳನ್ನು ಕಾಪಾಡುವ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ಇಲ್ಲಿ ಪ್ಯಾಸ್ಟರನು ವ್ಯಕ್ತಿಗಳನ್ನು ಒಬ್ಬೊಬ್ಬನನ್ನಾಗಿ ಕಾಯುತ್ತಾನೆ. ಇದು ಜಾಗತಿಕ ಅಧಿಕಾರವಲ್ಲ. ಕುರುಬನು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮುಕ್ತಿಗೆ ಕೆಲಸ ಮಾಡಬೇಕು. ಈ ವಿಷಯವನ್ನು ಈಜಿಪ್ಟ್, ಅಸ್ಪೀರಿಯನ್ನ ಅನೇಕ ಪಠ್ಯಗಳಲ್ಲಿ ಕಾಣಬಹುದು. ಅಂದರೆ, ಅಧಿಕಾರ ಅಸಂಖ್ಯಾತ ವ್ಯಕ್ತಿಗಳ ಮೇಲೆ ಪಸರಿಸುತ್ತದೆ . ಒಂದು ಕೇಂದ್ರದಿಂದ ಮತ್ತೊಂದು ಚಲಿಸುವ ವ್ಯಕ್ತಿಗಳಿಗಾಗಿ ತ್ಯಾಗ ಮಾಡುವ ಅಧಿಕಾರವಿರುತ್ತದೆ.

ರೋಮನ್ ಸಾಮ್ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯಾಗಿ ಕ್ರಿಶ್ಚಿಯನ್ ಧಾರ್ಮ ಬಂಡ ಕ್ಷಣದಲ್ಲೇ ಮೇಲೆ ಹೇಳಿದೆ ರೀತಿ ಅಧಿಕಾರವನ್ನು ಚಲಾಯಿಸಿತು . ಈ ಬದಲಾವಣೆ ಹೇಗೆ ಗಟ್ಟಿಯಾಗಿ ಆಯಿತೆಂದು ಹೇಳಬಹುದು. ಕ್ರಿಶ್ಚಿಯನ್ ಧರ್ಮವು ಹೇಗೆ ಚರ್ಚ್ ಆಗಿ ಬೆಳೆಯಿತು, ಚರ್ಚ್ ಒಳಗೆ ಹೇಗೆ ಫ್ರಿಸ್ಟ್ಗಳು ತಮ್ಮ ಸ್ಥಾನವನನ್ನು ಭದ್ರಪಡಿಸಿಕೊಂಡರು, ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಎತ್ತಿಕೊಂಡರು. ಎಷ್ಟು ಪರಿಣಾಮಕಾರಿಯಾಗಿ ‘ಕುರಿಗಾಹಿ’ಗಳಾದರು ಎಂಬುದನ್ನು ವಿಶ್ಲೇಷಿಸಬೇಕಾಗುತ್ತದೆ. ಕ್ರಿಶ್ಚಿಯನ್ ಸಮಾಜದಲ್ಲಿ ಮೂರನೇ ಶತಮಾನದಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಒಂದು ಶಕ್ತಿಯಾಗಿ ಚಾರಿಟಿಕವಾಗಿ ಬೆಳೆಯಿತು. ಇದರಿಂದ ಲೈಂಗಿಕಾತ್ಮಕತೆಯ ಮೇಲೆ ಬೀರಿದ ಪರಿಣಾಮವನ್ನು ವಿಶ್ಲೇಷಿಸಬೇಕಾಗುತ್ತದೆ.

ಸಾಮಾನ್ಯವಾಗಿ ಪಶ್ಚಿಮದ ಮನುಷ್ಯನಿಗೆ ಜೀವನ ಎಂಬುದರ ಅರ್ಥವೇನು? ಅದರಲ್ಲೂ ಈ ರೀತಿಯ ಪ್ಯಾಸ್ಟೋರಲ್ ಅಧಿಕಾರದ ಹಿನ್ನೆಲೆಯಲ್ಲಿ ಎಂದು ಎಂದು ತಿಳಿಯಬೇಕು. ಮೊದಲನೆಯದಾಗಿ ಪ್ಯಾಸ್ಟೊರಾಲ್ ನ ಇರುವು ಪ್ರತಿಯೊಬ್ಬ ವ್ಯಕ್ತಿಗೂ ಮುಕ್ಕಾಟಿ ಪಡೆಯುವ ಮಾರ್ಗವನ್ನು ಕಡ್ಡಾಯವಾಗಿ ತಿಳಿಸಿಕೊಡಬೇಕು. ಪಶ್ಚಿಮ ಕ್ರಿಶ್ಚಿಯನ್ನರಲ್ಲಿ ತಾನು ವೈಯಕ್ತಿಕವಾಗಿ ಮುಕ್ತಿಯನ್ನು ಕಾಣಬೇಕಾಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ. ಕ್ರಿಶ್ಚಿಯನ್ ಸಮಾಜದಲ್ಲಿ ವ್ಯಕ್ತಿಯು ‘ನನಗೆ ಮುಕ್ತಿ ಬೇಡ’ ಎಂದು ಹೇಳುವ ಸ್ವಾತಂತ್ರ್ಯವಿಲ್ಲ. ಪ್ರತಿಯೊಬ್ಬನೂ ಮುಕ್ತಿಯನ್ನು ಪಡೆಯಬೇಕು. ‘ನಿನ್ನನ್ನು ಕಾಪಾಡಲಾಗುವುದು’ ಎಂದರೆ ನಿನ್ನ ಉಳಿಸಿಕೊಳ್ಳಲು ನೀನು ಧಾರ್ಮ ಹೇಳುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಇದೆ ಪ್ರಪಂಚದಲ್ಲಿ ನಿನ್ನನ್ನು ನವಿ ಶಿಕ್ಷಿಸುವ ಹಕ್ಕನ್ನು ಪಡೆದಿದ್ದೇವೆ ಎಂಬ ಅಧಿಕಾರ ಚರ್ಚಿಗೆ ಇದೆ. ಆದ್ದರಿಂದ ಇದೊಂದು ರೀತಿಯಲ್ಲಿ ಐಚ್ಛಿಕವಾಗಿ ಮುಕ್ತಿ ಪಡೆಯುವ ಅಥವಾ ಪಡೆಯದೇ ಇರುವ ಹಕ್ಕು ಇಲ್ಲಿ ಇಲ್ಲ.

ಎರಡನೆಯದಾಗಿ , ಈ ಅನೈಚ್ಛಿಕ ಮುಕ್ತಿಯನ್ನು ತನ್ನಿಂದ ತಾನೇ ಪಡೆಯಲಾಗುವುದಿಲ್ಲ. ಅಧಿಕಾರವನ್ನು ಮಾನ್ಯ ಮಾಡಿದಾಗ ಮಾತ್ರ ಇದು ಸಾಧ್ಯ. ಮಾನ್ಯ ಮಾಡುವುದೆಂದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕ್ರಿಯೆಯನ್ನು ಪ್ಯಾಸ್ಟರನಿಗೆ ತಿಳಿಸಲೇಬೇಕು. ಒಪ್ಪಿಗೆ ಕೊಡುವುದು ಅಥವಾ ಬಿಡುವುದು ಪ್ಯಾಸ್ಟರನಿಗೆ ಬಿಟ್ಟಿದ್ದು. ಅಂದರೆ ಹಳೆಯ ಕಾಲದ ಅಧಿಕಾರದ ಪರಿಧಿಯ ರಚನೆಯೊಳಗೆ ಬರಬೇಕು . ಹೆಚ್ಚು ಕಡಿಮೆಯಾದರೆ ಅಥವಾ ನಿಯಮ ಉಲ್ಲಂಘನೆಯಾದರೆ ಶಿಕ್ಷೆ ಮಾಡುವ ಅಧಿಕಾರವೂ ಇರುತ್ತದೆ. ಇದಕ್ಕಾಗಿ ಶಿಕ್ಷೆಯ ರೀತಿ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತಿರುತ್ತದೆ. ಆಗ ವ್ಯಕ್ತಿಯ ಮುಕ್ತಿಗಾಗಿ ಹೆಚ್ಚು ಹೆಚ್ಚು ನಿಯಂತ್ರಣವನ್ನು ಈ ವ್ಯವಸ್ಥೆ ಹೊಂದುತ್ತಾ ಹೋಗುತ್ತದೆ

ಮೂರನೆಯದಾಗಿ, ಕ್ರಿಶ್ಚಿಯನ್ ಸಮಾಜದಲ್ಲಿ ಪ್ಯಾಸ್ಟರನು ವ್ಯಕ್ತಿಗಳನ್ನು ವಿಧೇಯತೆಯಿಂದಿರಲು ಸಂಪೂರ್ಣ ನಿಯಂತ್ರಣವನ್ನು ಹೊಂದಬಹುದು . ಇದು ಇನ್ನೂ ಮುಖ್ಯವಾದ ಅಧಿಕಾರ. ಗ್ಯಾಲೋ ರೋಮನ್ ಸಮಾಜವು ಈ ನಿಯಮಗಳನ್ನು ತಿಳಿದಿತ್ತು . ಆದರೆ ಪ್ರಾಚೀನ ಗ್ರೀಕ್ ಅಥವಾ ರೋಮನ್ ಸಮಾಜವು ಸಂಪೂರ್ಣವಾದ ನಿಯಂತ್ರಣವನ್ನು ಜನರ ಮೇಲೆ ವಿಧೇಯತೆಯನ್ನು ತರುವ ಅಧಿಕಾರವನ್ನು ಹೊಂದಿರಲಿಲ್ಲ.

ಆದರೆ ಈ ಅಧಿಕಾರವನ್ನು ಕ್ರಿಶ್ಚಿಯನ್ ಸಮಾಜ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿತು. ಪ್ಯಾಸ್ಟರನು ವ್ಯಕ್ತಿಗಳ ಮೇಲೆ ತನ್ನ ಸಂಪೂರ್ಣ ಅಧಿಕಾರವನ್ನು ಚಲಾಯಿಸಬಹುದು. ಪ್ಯಾಸ್ಟರನ ಆಳ್ವಿಕೆಯ ಅಧಿಕಾರ ಎಷ್ಟಿರುತ್ತದೆಂದರೆ ಅವನು ಹೇಳಿದ್ದೆ ಆಜ್ಞೆ ಮಾಡಿದ್ದೆ ನಿಯಮ. ಕ್ರಿಶ್ಚಿಯನ್ ಧರ್ಮದಲ್ಲಿ ಯಾವ ಜೀವನದಲ್ಲಿ ಫಲಿತಾಂಶದ ನಿರೀಕ್ಷೆಗಾಗಿ ಕಾನೂನನ್ನು ಅನುಸರಿಸುವುದಿಲ್ಲ ಅಥವಾ ಯಾವ ಸಾಮಾಜಿಕ ಅಭಾಸಕ್ಕೂ ಆತ ಗೌರವಕ್ಕೂ ಪಾತ್ರನಾಗಲು ಸಾಧ್ಯವಿಲ್ಲ, ಈ ಧರ್ಮದಲ್ಲಿ ನಿಜವಾದ ಗೌರವವೆಂದರೆ ವಿಧೇಯವಾಗಿ ಬಾಳುವುದು, ವಿಧೇಯತೆಯೇ ಅವನ ಮೂಲ ನಿಯಮ. ಪ್ಯಾಸ್ಟರನಿಗೆ ಮಾತ್ರ ವಿಧೇಯನಾಗಿರಬೇಕು . ವಿಧೇಯತೆಯನ್ನು ಅಂತರ್ಗತ ಮಾಡಿಕೊಂಡಿರಬೇಕು. ನನಗೆ ಆಜ್ಞೆಯನ್ನು ಕೊಡುವವನಿಗೆ ನಾನು ವಿಧೇಯಕನಾಗಿರುತ್ತಾನೆ. ಅದೇ ದೇವರಿಗೆ ವಿಧೇಯಕನಾಗಿರುವುದು ಎಂದು ನಂಬಿರುತ್ತೇನೆ. ಪ್ಯಾಸ್ಟರನ್ನ ಇಚ್ಛೆ – ದೇವರ ಇಚ್ಚೆ.

ಕೊನೆಯದಾಗಿ ಮೊದಲ ಸಮಸ್ಯೆಗೆ ಪುನಃ ಬರಬೇಕಾಗುತ್ತದೆ. ಅದೆಂದರೆ ಲೈಂಗಿಕಾತ್ಮಕತೆಯ ಚರಿತ್ರೆ ಪ್ಯಾಸ್ಟರನ್ನು ಸತ್ಯ ಮತ್ತು ಸತ್ಯವನ್ನು ಸೃಷ್ಟಿಸುವ ಸಂಪೂರ್ಣ ತಂತ್ರ ಮತ್ತು ವಿಧಾನವನ್ನು ತನ್ನ ಜೊತೆ ತಂದ, ಕ್ರಿಶ್ಚಿಯನ್ ಪ್ಯಾ ಸ್ಟರನ್ನು, ವಿವೇಕವನ್ನು ಬೋಧಿಸುವವನಾಗಿರುತ್ತಾನೆ. ಸತ್ಯವನ್ನು ಹೇಳುವ ಗುರುವಾಗಿರುತ್ತಾನೆ. ಪುರಾತನ ತತ್ವಜ್ಞಾನಿಯಾಗಿರುತ್ತಾನೆ. ಆದನ್ನು ಬೋಧಿಸುತ್ತಾನೆ.ಅವನು ಸತ್ಯವನ್ನು , ಬರವಣಿಗೆಯನ್ನು ನೀತಿಯನ್ನು ಭೋದಿಸುತ್ತಾನೆ . ಹೀಗೆ ಆತ ಒಬ್ಬ ಗುರು . ಆದರೆ ಕ್ರಿಶ್ಚಿಯನ್ ಪ್ಯಾಸ್ಟರನು ಇನ್ನೊಂದು ಅರ್ಥದಲ್ಲೂ ಗುರು. ಅವನು ತನ್ನ ಜವಾಬ್ದಾರಿಯನ್ನು ತಿಳಿದಿರಬೇಕಾಗುತ್ತದೆ. ಅವನ ಕುರಿಗಳು ಏನೇನು ಮಾಡುತ್ತವೆ. ಅವನ ಮಂದೆ ಯಾವ ಕ್ಷಣದಲ್ಲಿ ಏನೇನು ಮಾಡುತ್ತಿರುತ್ತದೆ ಎಂದು ತಿಳಿದಿರಬೇಕು, ಪ್ರತಿಯೊಬ್ಬ ವ್ಯಕ್ತಿಯ ಆತ್ಮದೊಳಗೆ, ಹೃದಯದಲ್ಲಿ ಇರುವ ಗುಟ್ಟಗಳನ್ನಿಲ್ಲಿ ತಿಳಿದಿರಬೇಕು. ಕ್ರಿಶ್ಚಿಯನ್ ಧರ್ಮದ ಪ್ಯಾಸ್ಟರ್ ತನ್ನ ಧರ್ಮವನ್ನು ಪಾಲಿಸಲು ವ್ಯಕ್ತಿಗಳ ಅಂತರಾತ್ಮವನ್ನು ತಿಳಿದಿರಬೇಕು.

ವ್ಯಕ್ತಿಯ ಅಂತರಾತ್ಮದ ಜ್ಞಾನ ಎಂದರೇನು? ಅದೇನೆಂದರೆ ಪ್ಯಾಸ್ಟರನು ವ್ಯಕ್ತಿಯ ಮನಸ್ಸನ್ನು ವಿಶ್ಲೇಷಣೆ ಮಾಡುವ ವಿಧಾನ, ಹೊಳಹು , ಏನು ನಡೆಯುತ್ತದೆ ಎಂಬುದರ ಪರಿವೆ ಇರಬೇಕು. ಕ್ರಿಶ್ಚಿಯನ್ನಾದವನು ತನ್ನ ಆತ್ಮದಲ್ಲಿ ನಡೆಯುತ್ತಿರುವ ಗುತ್ತಿನ ವ್ಯಾಪಾರವನ್ನು ತಿಳಿಸಬೇಕು. ಅಂದರೆ ಯಾವಾಗಲೂ ತಪ್ಪೊಪ್ಪಿಗೆಯನು ಮಾಡಿಕೊಳ್ಳಬೇಕು. ಈ ನಿರಂತರ ತಪ್ಪೊಪ್ಪಿಗೆ ಸತ್ಯವನ್ನು ಹೊರಗೆಡುಹುತ್ತದೆ. ಈ ತಪ್ಪೊಪ್ಪಿಗೆ, ಸತ್ಯಶೋಧ ಇವೆಲ್ಲ ಮನಸ್ಸಿನ , ಆತ್ಮದ ಮೂಲಕ ನಡೆಯುತ್ತಿರುತ್ತದೆ. ಈ ಸತ್ಯ ಕುರುಬನಿಗೂ , ಮಂದೆಗೂ ನಡುವೆ ಬಾಂಧ್ಯವ್ಯವನ್ನು ಬೆಸೆಯುತ್ತದೆ.

ಈಗ ನಾವು ಲೈಂಗಿಕಾತ್ಮಕತೆಯ ಸಮಸ್ಯೆಯ ಕಡೆಗೆ ಬರಬಹುದು . ಕ್ರಿಶ್ಚಿಯನ್ ಧರ್ಮಕ್ಕೂ ಇದಕ್ಕೂ ಮೂರನೇ ಶತಮಾನದಿಂದಲೂ ಇರುವ ಸಂಬಂಧವನ್ನು ನೋಡಬಹುದು. ಆಗಾಗಲೇ ರೋಮನ್ ಸಮಾಜವು ತನ್ನ ನೈತಿಕತೆಗೆ ಸಂಬಂಧಿಸಿದಂತೆ ಏಕಪತ್ನಿತ್ವ, ಲೈಂಗಿಕತೆ, ಸಂತಾನ ಇದರ ಬಗ್ಗೆ ನಾನು ಆಗಲೇ ಹೇಳಿದಂತೆ ಒಪ್ಪಿಕೊಂಡಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಈ ಮಾದರಿ ತನ್ನ ಮುಂದೆ ಇತ್ತು ಇದರ ಹಿಂದೆ ಇದ್ದದ್ದು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಪ್ರಚಲಿತವಿದ್ದ ಸನ್ಯಾಸಿ ಜೀವನದ ಮಾದರಿ. ಪೂರ್ವ ಮೆಡಿಟರೇನಿಯನ್ ಭಾಗದಲ್ಲಿದ್ದ ಕ್ರಿಶ್ಚಿಯನ್ ಸನ್ಯಾಸಿಗಳು ಈ ಹಿಂದೂ ಮತ್ತು ಬೌದ್ದ ಸನ್ಯಾಸಿ ಜೀವನ ಕ್ರಮವನ್ನು ಅಭಾಸ ಮಾಡಿಕೊಂಡರು. ನಾಗರಿಕ ಸಮಾಜವು ಒಪ್ಪಿಕೊಂಡಿದ್ದ ಕೆಲವು ನೈತಿಕ ನೇಮಗಳನ್ನು ಸನ್ಯಾಸತ್ವಗಳನ್ನು ಸ್ವೀಕರಿಸಿದರು. ಆದರೆ ಕ್ರಿಶ್ಚಿಯನ್ ಧರ್ಮ ಡೋಲಾಯಮಾನ ಸ್ಥಿತಿಯಲ್ಲಿತ್ತು, ಒಂದು ಕಡೆ ಬೌದ್ಧ ಧರ್ಮದ ಸನ್ಯಾಸದ ಮಾದರಿಯನ್ನು ಕರಗತ ಮಾಡಿಕೊಳ್ಳಲು ಯತ್ನಿಸಿತು. ಮತ್ತೊಂದು ಕಡೆ ರೋಮನ್ ಸಾಮ್ರಾಜ್ಯದ ನಾಗರಿಕ ಸಮಾಜದ ಮಾದರಿಯನ್ನೂ ಇಟ್ಟುಕೊಂಡಿತ್ತು.

ಇದರ ಫಲಿತಾಂಶವೇನಾಯಿತೆಂದರೆ ಸನ್ಯಾಸದಲ್ಲಿ ಈ ಭೌತಿಕ ಪ್ರಪಂಚದ ತಿರಸ್ಕಾರ ಮತ್ತು ನಾಗರೀಕ ಸಮಾಜದ ಆಸೆ ಇವೆರಡರ ಮಧ್ಯೆ ಕ್ರಿಶ್ಚಿಯನ್ ಧರ್ವು ಹೊಯ್ದಾಡತೊಡಗಿತು. ಇದರ ಮಧ್ಯೆ ವ್ಯಕ್ತಿಗಳನ್ನು ಅವರ ಲೈಂಗಿಕಾತ್ಮಕತೆಯ ಮೇಲೆ ನಿಯಂತ್ರಣ ಹೇರುವುದರ ಮೂಲಕ ತನ್ನ ಅಧಿಕಾರವನ್ನು ಸ್ಥಾಪಿಸಿತು. ವ್ಯಕ್ತಿಗಳ ಲೈಂಗಿಕಾತ್ಯಕತೆಯ ಪ್ರಚೋದನೆ ಮತ್ತು ಅದರೊಳಗೆ ಬೀಳುವ ಆಕಾಂಕ್ಷೆ ಇದರ ಮೇಲೆ ಆಟವಾಡಿತು, ಮತ್ತು ದೇಹದ ಕಾಮನೆಯಿಂದ ಉಂಟಾಗುವ ಎಲ್ಲ ಅಪೇಕ್ಷೆಗಳನ್ನು ತಿರಸ್ಕರಿಸುವುದಾಗಿತ್ತು ಈ ದೇಹದ ಸುಖ, ಅದರ ಲೈಂಗಿಕ ಆಕಾಂಕ್ಷೆ, ಸಮಾಜದಲ್ಲಿ ಅದರ ಕ್ರಿಯೆಯ ಅವಶ್ಯಕತೆ, ಸಂಸಾರ , ವಂಶಾಭಿವೃದ್ಧಿ ಇವುಗಳನ್ನು ಪ್ರಶ್ನಿಸಬೇಕಾಗಿತ್ತು. ಅಂದರೆ ಈ ದೇಹ ಸಂಪೂರ್ಣವಾಗಿ ಕೆಟ್ಟದ್ದು ಎಂದೂ ಹೇಳಬರುತ್ತಿರಲಿಲ್ಲ, ಆದರೆ ಲೈಂಗಿಕತೆಯನ್ನು ನಿಯಂತ್ರಿಸಬೇಕಾಗಿತ್ತು. ಅದಕ್ಕಾಗಿ ಒಂದು ಒಪ್ಪಿತವಾದ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.

ಕ್ರಿಶ್ಚಿಯನ್ ಧರ್ಮವು ಈ ರೀತಿಯಲ್ಲಿ ಸನ್ಯಾಸ ಮತ್ತು ನಾಗರಿಕ ಸಮಾಜದ ನಡುವಿನ ನೈತಿಕತೆಯನ್ನು ಸ್ಥಾಪಿಸಿಕೊಳ್ಳಬೇಕಾಯಿತು.

(ಮಿಷಲ್ ಫುಕೊ (೧೯೨೬-೧೯೭೪): ಈತ ಮುಖ್ಯವಾಗಿ ಲೈಂಗಿಕಾತ್ಮಕತೆ ಮತ್ತು ಸ್ತ್ರೀ ವಿಮೋಚನಾ ಚಳುವಳಿಯ ಚಿಂತನಾಕ್ರಮದ ಮುಂಚೂಣಿಯಲ್ಲಿದ್ದ ವಿದ್ಯಾಮ್ಸ. ಲೈಂಗಿಕಾತ್ಮಕತೆಯ ಬಗ್ಗೆ ಆರು ಸಂಪುಟಗಳಲ್ಲಿ ಬರೆಯ ಹೊರಟಿದ್ದ ಫುಕೋ ಮೂರು ಸಂಪುಟಗಳನ್ನು ಮಾತ್ರ ಪೂರ್ತಿಗೊಳಿಸಿದ. ಮೇಲಿನ ಚಿಟನೆಗಳು ಇವನ sexuality and knowledge ಗ್ರಂಥವನ್ನು ಆಧರಿಸಿವೆ . ಈತ ೨೦ನೇ ಶತಮಾನದ ವಿಶ್ವದ ಐದು ಪ್ರಮುಖ ವಿದ್ವಾಂಸರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದ ಫ್ರಾನ್ಸ್ ದೇಶದ ಮಹಾನ್ ಚಿಂತಕ )

Leave a Reply

Your email address will not be published. Required fields are marked *