ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್
ತಿಂಗಳು –ನವೆಂಬರ್ ೨೦೦೯ ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ…