ದಮನಿತರಿಗೆ ಧ್ವನಿ ಕೊಡುವ ಕೆಲಸ

ದಮನಿತರಿಗೆ ಧ್ವನಿ ಕೊಡುವ ಕೆಲಸ

ನಮ್ಮ ‘ಅರಿವಿನ ಸ್ಫೋಟ’ (epistomological break) ಹೋಲಿಸಿದ ಅನೇಕ ಬರಹಗಳ ವಿಶ್ವವಿದ್ಯಾಲಯದ ಭದ್ರ ಗೋಡೆಯ ಆಚೆ ನಡೆಯುತ್ತಿರುತ್ತವೆ. ಗೆಲಿಯಾನೋನಾ ‘ಬೆಂಕಿಯ ನೆನಪು’ ಹೀಗೊಂದು ಕೃತಿ. ಈ ಕೃತಿ ಯಾವ ಚರಿತ್ರೆಯ ಸಿದ್ದಾಂತಗಳ ಭಾರದಿಂದಲೂ ಕುಸಿದಿರದ ಕಥಾನಕ. ಈ ಚರಿತ್ರೆಯನ್ನು ಕಾಣಲು ಸಾಧ್ಯವಾಗುವುದು ಔಪಚಾರಿಕ ಹಿನ್ನೆಲೆಯಲ್ಲಿ ಕಲಿತ ಸಿದ್ದಾಂತಗಳನ್ನು ಮರೆಯುವ ಸಾಧ್ಯತೆ ಇದ್ದಾಗ ಮಾತ್ರ. ಗೆಲಿಯಾನೋನನ್ನು ಓದಿದ ಮೇಲೆ ಚರಿತ್ರೆ ಯಾವುದೆಂದರೆ ಇದಲ್ಲ, ಇದಲ್ಲ, ಇದಲ್ಲ, ಹಾಂ! ಇದು ! ಎನ್ನಿಸುವ ಮನಸ್ಸನ್ನು ಸೃಷ್ಟಿಸುವುದು. ‘ಅವರ ಬಿಟ್ಟು, ಅವರ ಬಿಟ್ಟು ಅವರ್ಯಾರು?” ಎಂದು ಕೇಳಿ ತಿಳಿಯುವ ಸಾಮರ್ಥ್ಯವನ್ನು ಹೀಗೆ ನೀಡುವ ರೂಪ ಮತ್ತು ರೂಪಕ ಎರಡೂ ಆದ ‘ಬೆಂಕಿಯ ನೆನಪು’.

ಹೀಗೆಂದಾಕ್ಷಣ ರಾಜಕೇಂದ್ರಿತ ಚರಿತ್ರೆ, ಅಧಿಕಾರಶಾಹಿ ರಚಿಸಿದ ಚರಿತ್ರೆ, ಜನ ಕಟ್ಟಿದ ಜನಪದ ಚರಿತ್ರೆ (heroic epicvs, ballads) ಇವು ಯಾವುವು ಸಂಪೂರ್ಣ ತಪ್ಪೆಂದಲ್ಲ. ಇವು ಪರಿಪೂರ್ಣ ಅಲ್ಲ ಎಂದಷ್ಟೇ. ಇವೆಲ್ಲವಕ್ಕೂ ತಮ್ಮದೇ ಆದ ನಿಳುವುಗಲಿರುತ್ತವೆ. ಕಾಣುವ ಕ್ರಿಯೆ ಇರುತ್ತದೆ. ಆದರೆ ಈ ಚರಿತ್ರೆಗಳಲ್ಲಿ ಮನಷ್ಯ ಮಾತ್ರ ಸ್ಥಾಪಿತವಾಗಿರುವುದಿಲ್ಲ. ಜನಪದ ಚರಿತ್ರೆಯಲ್ಲಿ ಮಾತ್ರ ಮನುಷ್ಯ ಪ್ರತಿಷ್ಟಾಪಿತನಾಗಿರುವುದನ್ನು ಕಾಣಬಹುದು. ಏಕೆಂದರೆ ಜನಪದರು ತ್ರಿಕಾಲವನ್ನು ಒಟ್ಟುಗೂಡಿಸಿ ಘಟನೆಯನ್ನು ನೋಡಲು ಪ್ರಯತ್ನಿಸುತ್ತಾರೆ. ಏಕ ಕಾಲದಲ್ಲಿ ಅದು ವರ್ತಮಾನ, ಭೂತ, ಭಾವಿಶಯತ್ತಿನ ಕಡೆಗೆ ಮುಖ ಮಾಡಿರುತ್ತದೆ, ಇವೆ ಪುರಾಣ – ಇತಿಹಾಸ ಸೃಷ್ಟಿಗೆ ನಾಂದಿಯಾಗುವುದು. ಇದು ಭಾರತ ದೇಶದ ಜನರು ಚರಿತ್ರೆಯನ್ನು ನೋಡುವ ಕ್ರಮ. ಆದ್ದರಿಂದ ಇದೊಂದು ರೀತಿಯ ಮನುಷ್ಯನ ಮನಸ್ಸನ್ನು ಹಿಡಿಯುವ ಚರಿತ್ರೆಯಾಗಿರುತ್ತದೆ. ಚರಿತ್ರೆಯಲ್ಲಿ ಮನುಷ್ಯನನ್ನು ಸ್ಥಾಪಿಸಿದಾಗಲೇ ಅದಕ್ಕೆ ಜೀವ ಬರುವುದು.

ಚರಿತ್ರೆಯು ಮನುಷ್ಯನ ಮನಸ್ಸಿನ ಬೆಳವಣಿಗೆಯ ಪ್ರತೀಕವಾದಾಗಲೇ ಹಿಸ್ಟರಿ ಆಫ್ ಐಡಿಯಾಸ್ ಆಗುತ್ತದೆ, ‘ಇತಿಹಾಸ’ ವಾಗುತ್ತದೆ. ಸಾಂಸ್ಕೃತಿಕ ಸಂವಾದವಾಗುತ್ತದೆ. ಕಥಾನಕವಾಗುತ್ತದೆ. ಇದನ್ನೇ ಭಾರತದಲ್ಲಿ ಪುರಾಣೆತಿಹಾಸ ಎಂದು ಕರೆಯುತ್ತಾರೆ.

ಕನ್ನಡದ ಸಂದರ್ಭದಲ್ಲಿ ಈ ರೀತಿಯ ಇತಿಹಾಸ ರಚಿತವಾಗಿರುವುದು ಶಿವರಾಮಕಾರಂತರ ‘ಮೂಕಜ್ಜಿಯ ಕನಸು’ ಕಥಾನಕದಲ್ಲಿ. ಇದು ಎ ದೇಶದ ಧರ್ಮಗಳ, ಹೆಣ್ಣು – ಗಂಡುಗಳು ಪರಸ್ಪರ ತಮ್ಮನ್ನು ಕಂಡುಕೊಳ್ಳುವ , ಸಾಮಾಜಿಕ ರೀತಿ – ನೀತಿಗಳನ್ನು, ಅವುಗಳು ಕಾಲದಿಂದ ಕಾಲಕ್ಕೆ ಬದಲಾಗುವ, ಆದರೆ ಮನಸ್ಸಿನ ತಳದಲ್ಲೆಲ್ಲೋ ‘ಆಡಿಮತೆ’ ಉಳಿದೇ ಬಿಟ್ಟಿರುವ ವಿವಿಧ ಮುಖಗಳನ್ನು ಚಿತ್ರಿಸುವ ಸಂವಾದವಾಗಿ ಬೆಳೆದು ಬಂದಿದೆ. ಆದ್ದರಿಂದ ಇದು ದಿನಾಂಕಗಳ ಚರಿತ್ರೆಯಲ್ಲ, ಕಾರ್ಯಕಾರಣ ಸಂಬಂಧದ ಚರಿತ್ರೆಯಲ್ಲ, ವರ್ಗ ಸಂಘರ್ಷದ ಚರಿತ್ರೆಯಲ್ಲ, ಆದರೆ ಅವೆಲ್ಲವುಗಳ ಪಾಕವಾಗಿದೆ. ಭೂತದೊಡನೆ ವರ್ತಮಾನ ನಡೆಸುವ ಅನುಸಂಧಾನವಾಗಿದೆ.

ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಚರಿತ್ರಯೆಂದರೆ ಮನದಾಳದಲ್ಲಿ ಸೂಕ್ಷ್ಮವಾಗಿ ಕೆತ್ತಿದ ರಚನಾ ಪ್ರಕ್ರಿಯೆಯಾಗಿರುತ್ತದೆ. ಇದನ್ನು ಕೆದಕಬೇಕೆಂದರೆ ನೆನಪುಗಳು ಒಂದು ಜನಾಂಗವನ್ನು ಒಂದುಗೂಡಿಸಿ ಮುನ್ನಡೆಸುವ ಪ್ರಕ್ರಿಯೆಯಾಗಿ ಕೆಲಸ ಮಾಡುತ್ತಿರುತ್ತದೆ.(ಒಡೆಯಲೂ ಸಹ).

ಇದಕ್ಕಾಗಿಯೇ ಗೆಲಿಯಾನೋ ತನ್ನ ಕಥಾನಕವನ್ನು ‘ಬೆಂಕಿಯ ನೆನಪುಗಳು’ ಎಂದು ಕರೆದಿದ್ದಾನೆ. ಈ ಬೇಂದ್ಕಿಯಂತಹ ನೆನಪುಗಳ ಪುನರ್ ಸೃಷ್ಟಿ ಕಾರ್ಯ ಈ ಕೃತಿಯಲ್ಲಿ ನಡೆಯುತ್ತಲೇ ಇರುತ್ತದೆ. ಆದ್ದರಿಂದಲೇ ತನ್ನ ಮುನ್ನುಡಿಯಲ್ಲಿ ‘ನಾನು ಇತಿಹಾಸಕಾರನಲ್ಲ, (ಮೂಲತಃ ಗೆಲಿಯಾನೋ ಇತಿಹಾಸದ ವಿದ್ಯಾರ್ಥಿ ) ನಾನೊಬ್ಬ ಬರೆಹಗಾರ, ಇಡೀ ಅಮೆರಿಕಾದ ಅದರಲೂ ನನ್ನ ಪ್ರೀತಿಯ ನೆಲವಾದ ತಿರಸ್ಕೃತ ಲ್ಯಾಟಿನ್ ಅಮೆರಿಕಾದ ‘ಅಪಹೃತ ಸ್ಮೃತಿ’ಯ ಬಿಡುಗಡೆಯ ಯತ್ನಕ್ಕೆ ಕಿಂಚಿತ್ ಕೊಡುಗೆ ನೀಡಬಯಸುವ ಲೇಖಕ’ ಎಂದು ವಿನಯಾಪೂರ್ನವಾಗಿ ಹೇಳಿಕೊಂಡಿದ್ದಾನೆ.ಒಂದು ರೀತಿಯಲ್ಲಿ ಮನುಷ್ಯನ ಇತಿಹಾಸವೇ ಒಬ್ಬನ ಮೇಲೆ ಇನ್ನೊಬ್ಬ ತನ್ನ ಅಧಿಕಾರವನ್ನು ಹೆರುವ ಇತಿಹಾಸ ಆಗಿಬಿಟ್ಟಿರುತ್ತದೆ. – ಭೌತಿಕವಾಗಿಯೂ, ಬೌಧಿಕವಾಗಿಯೂ. ಆದರೆ ನಮಗೆ ಕೇಳಿಸುವುದು ಮಾತ್ರ ಬಲಾಡ್ಯನ ಧ್ವನಿ. ಗೆಲಿಯಾನೋ ಈ ಕಥಾನಕದಲ್ಲಿ ಮಾಡಿರುವುದು ದಮನಕ್ಕೊಳಗಾದ ಲ್ಯಾಟಿನ್ ಅಮೆರಿಕಾದ ಜನಾಂಗಗಳಿಗೆ ಧ್ವನಿ ಕೊಡುವು ಕೆಲಸ. ಆದ್ದರಿಂದ ಈ ನೆನಪು ‘ಬೆಂಕಿಯ ನೆನಪು’.

‘ಬೆಂಕಿಯ ನೆನಪು’ ಕೃತಿಯನ್ನು ಕನ್ನಡಕ್ಕೆ ತಂದಿರುವ , ತನ್ನ ಅಸ್ತಿತ್ವದ ಇತಿಹಾಸವನ್ನೇ ಮತೆತಂತಿರುವ ನನ್ನ ಬಹುಕಾಲದ ಗೆಳೆಯ ಕೆ.ಪಿ.ಸುರೇಶ , ಈ ಕೃತಿಯನ್ನು ನನ್ನ ಕೈಗೆ ಕೊಟ್ಟಾಗ ಓದಿದೆ. ಒಮ್ಮೆಯಲ್ಲ , ಐದು ಬಾರಿ. ಐದು ಬಾರಿ ಓದಿದಾಗಲೂ ನನ್ನ ಬುದ್ದಿ ಕೋಶ ಭಾವಕೋಶದೊಳಗೆ ಅಡಗಿ ಕುಳಿತುಬಿಟ್ಟಿತು . ಪ್ರಜ್ಞಾಪೂರ್ವಕವಾಗಿ ಇದರ ಬಗ್ಗೆ ಆಲೋಚಿಸುವಾಗಲೆಲ್ಲಾ ಅಪ್ರಜ್ಞಾಪೂರ್ವಕವಾಗಿ ಭಾವಕೋಶಕ್ಕೆ ಜಾರಿಕೊಂಡುಬಿಟ್ಟಿದ್ದೇನೆ.

ಈ ತ್ರಿವಳಿ ಪುಸ್ತಕಗಳ ಮೊದಲ ಭಾಗ – ಕೊಲಂಬಸ್ ಬಂದು ಕಾಲೂರುವ ತನಕ ಪುರಾಣೆತಿಹಾಸ ಸ್ಥಲೇಎಯ ಅಮೆರಿಕನ್ನರು ತಮ್ಮನ್ನು, ತಮ್ಮ ಹುಟ್ಟನ್ನು, ತಮ್ಮ ಪ್ರಾಪಂಚಿಕ ದೃಷ್ಟಿಯನ್ನು ರೂಢಿಸಿಕೊಂಡು ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರು. ಕಾಲವನ್ನು ಗುರುತಿಸಲು ಕಲಿತರು, ತಮ್ಮದೇ ಆದ ಜಗತ್ತನ್ನು ಸೃಷ್ಟಿಸಿಕೊಂಡರು. ಗಂಡು – ಹೆಣ್ಣು ಜೊತೆಯಲ್ಲಿ ಬಾಳಿ ಬದುಕುವುದು, ಸ್ಸವನ್ನು ಎದುರಿಸುವುದನ್ನು ಕಲಿತರು. ‘ಹುಟ್ಟಿ ಸಾಯುವವರು, ಮತ್ತೆ ಹುಟ್ಟುವವರು, ಅವರು ಜನ್ಮಿಸುವುದಕ್ಕೆ ಅಂತ್ಯವಿಲ್ಲ. ಯಾಕೆಂದರೆ ಸಾವೆಂಬುದು ಮಿಥ್ಯ’ ತಮ್ಮಷ್ಟಕ್ಕೆ ತಾವು ಆಯಾ ದಿಂದ ಆಹಾರವನ್ನುಯ್ ಸಂಗ್ರಹಿಸಿಕೊಂಡು , ಹಂಚಿಕೊಂಡು ಇರುವ ಕಾಲ.

ಆದರೆ ಯುಕಾಟಿನ್ ಪುರೋಹಿತ ದೇವರ ಸಂದೇಶವನ್ನು ಕೇಳಿಸಿಕೊಂಡು ಹೇಳುವುದು ಅತ್ಯಂತ ಮಾರ್ಮಿಕವಾಗಿದೆ. ‘ಜಗದ ಉದ್ದಗಲಕ್ಕೂ ಹಾದಿ ಕುಣಿವ ಹೆನ್ನುಗಲಿರುತ್ತಾರೆ. ದುರಾಸೆಯ ಆಳ್ವಿಕೆಯ ಕಾಲದಲ್ಲಿ ಸಂಕಷ್ಟ ಅಧಿಕವಾಗಿರುತ್ತದೆ. ಮನುಷ್ಯರು ಗುಲಾಮರಾಗುತ್ತಾರೆ. ಸೂರ್ಯನ ಮುಖ ವಿಷಾದದಿಂದ ಕೂಡಿರುತ್ತದೆ. ಪ್ರಪಂಚದಲ್ಲಿ ಜನ ನಶಿಸುತ್ತಾರೆ. ಪ್ರಪಂಚ ಅವಮಾನದಿಂದ ಕುಬ್ಜವಾಗುತ್ತದೆ”.

ಆಳರಸರ, ಅಧಿಕಾರಶಾಹಿಗಳ ಚರಿತ್ರೆ ತಮ್ಮ ಧ್ವನಿಯನ್ನು ಮಾತ್ರ ಕೆತ್ತಿರುವಂತಹ ಚರಿತ್ರೆ. ಈ ಚಾರಿತ್ರಿಕ ಕಥನವು ನೆರವಾಗಲ್ಲದಿದ್ದರೂ, ಪರೋಕ್ಷವಾಗಿ ತಮ್ಮ ಚಹರೆಗಳನು ಬಿಟ್ಟಿರುತ್ತದೆ. ಈ ಚರೆಗಳು ಮೌನವಾಗಿ ಪಠ್ಯಗಳಲ್ಲಿ ಅಡಗಿ ಕುಳಿತಿರುತ್ತದೆ. ಇಂತಹ ಮೌನ, ಮಾತಿಗಾಗಿ ಗೆಲಿಯಾನೋನಂತಹ ಮನಸ್ಸುಳ್ಳ ವ್ಯಕ್ತಿಗಳಿಗಾಗಿ ಕಾಯುತ್ತಾ ಕುಳಿತ್ತಿರುತ್ತದೆ. ಅಧಿಕಾರಶಾಹಿ ಹೆಜ್ಜೆ ಗುರುತನ್ನು ಅನುಸರಿಸಿ ದಮಕ್ಕೊಳಗಾದವರ ಚರಿತ್ರೆಯನ್ನು, ಉಂಟಾಗಿರುವ ಗ್ಯಾಪ್ ಗಳನ್ನೂ ಗೆಲಿಯಾನೋ ತುಂಬಿಕೊಟ್ಟಿದ್ದಾನೆ. ಮೌನವಾಗಿ ಮಾತನಾಡಿಸಿದ್ದಾನೆ . ಇಂತಹ ಇತಿಹಾಸ ಬರೆದವರ ಭಾಷೆಯನ್ನೇ ಬಳಸಿ ಅವರಿಗೇ ತಿರುಗೇಟು ಕೊಡುತ್ತಾನೆ.

ಗೆಲಿಯಾನೋ ೧೬೯೩ರಿಂದ ಈಚಿನ ಲ್ಯಾಟಿನ್ ಅಮೆರಿಕಾದ ಇತಿಹಾಸವನ್ನು ಆ ಘಟನೆಗಳು ನಡೆದ ವರ್ಷಗಳನ್ನು ನಮೂದಿಸುತ್ತಾನೆ. ಹೀಗೆ ನಡೆದ ಘಟನೆಗಳ ಆಯ್ಕೆ ಮತ್ತು ಸಂಯೋಜನೆ ಚರಿತ್ರೆಯ ಆಧಾರ ಪಡೆದಿದ್ದರೂ ಚರಿತ್ರೆಯ ನಿರ್ವಹಣೆಯ ರೀತಿಯನ್ನೇ ಬದಲಾಯಿಸಿಬಿಡುತ್ತದೆ. ಈ ಎಲ್ಲಾ ನೆಗಳಿಂದ ತುಳಿತಕ್ಕೆ ಒಳಗಾದ ಮುಂಶ್ಯನ ಭಾವನೆ ಮುನ್ನೆಲೆಗೆ ಬರುವುದರಿಂದ; ಕಾಣದ ಮುಖಗಳು , ಅವುಗಳ ಮನಸ್ಸಿನೊಳಕ್ಕೆ ಓದುಗರನ್ನು ಸೆಳೆದುಕೊಂಡುಬಿಡುತ್ತದೆ.

ಧರ್ಮ ಮತ್ತು ಸಾಮ್ರಾಜ್ಯಶಾಹಿ ಬಲಗಳೆರಡೂ ಸೇರಿ ಮೂಲ ಅಮೆರಿಕಾದ ನಿವಾಸಿಗಳ ಮತ್ತು ಆಫ್ರಿಕಾದಿಂದ ಎಳೆದು ತಂದಿರುವ ಮನುಷ್ಯರ ದೇಹದ ಮೇಲೆ – ಅವರ ಮನಸ್ಸು ಇವರ ಕೈಗೆ ಸಿಗುವುದಿಲ್ಲವಲ್ಲ – ಆಡುವ ಆಟ.

ಆರು ಜನ ಇಂಡಿಯನ್ನರನ್ನು ಮರಕ್ಕೆ ಕಟ್ಟಿ ಜೀವಂತ ಸುಡುವ ಚಿತ್ರ. ಅವರು ಮಾಡಿದ್ದೆ ತಪ್ಪು ಇಷ್ಟೇ. ಮನ್ದಿಯೂರಿ ಪ್ರಾರ್ಥಿಸಿ ಎಂದು ಪಾದ್ರಿ ನೀಡಿದ ಏಸು ಕ್ರಿಸ್ತ ಮತ್ತು ಮೇರಿ ಪ್ರತಿಮೆಗಳನ್ನೂ ಈ ಆರು ಮಂದಿ ಇಂಡಿಯನ್ನು ನೆಲದಲ್ಲಿ ಹೊತಿದ್ದರು. ಧರ್ಮವನ್ನು ಅವಹೇಳನಗೊಳಿಸಿದ ಅಪರಾಧಕ್ಕೆ ಅವರನ್ನು ಜೀವಂತ ಸುಡಲಾಯಿತು. ಈ ಹೊಸ ದೇವರು ನಾಮಾ ನೆಲವನ್ನು ಫಲವತ್ತಾಗಿಸಲಿ – ಜೋಳ, ಕಾಳು, ಗೆದ್ದೇ, ಗೆಣಸು ಸಮೃದ್ಧವಾಗಲಿ ಎಂದು ಆಸೆಯ ಪ್ರಾರ್ಥನೆಯೊಂದಿಗೆ ಅವರು ಪ್ರತಿಮೆಗಳನ್ನು ಹೂತಿದ್ದರು.

‘ಲೋಕ ದೃಷ್ಟಿ’ಗಳು ಹಲವಿರುತ್ತದೆ. ಆದರೆ ‘ಅಧಿಕಾರ’ ಅವೆಲ್ಲವನ್ನು ಧ್ವಂಸಗೊಳಿಸಿ ತಮ್ಮ ‘ಲೋಕದೃಷ್ಟಿ’ಯೇ ಸಾಯಿ ಎಂಬ ‘ಅಹಂ’ ಅನ್ನು ಹೊಂದಿರುತ್ತದೆ.

ಆದರೆ ಅಧಿಕಾರ ಎನ್ನುವುದು ಯಾವಾಗಲೂ ಏಕಮುಖವಾಗಿ ವರ್ತಿಸುತ್ತಿದ್ದರೂ ಮೌನಿಗಳು, ದುರ್ಬಳರೂ ಈಅಧಿಕಾರವನ್ನು ಕೆಣಕುತ್ತಲೇ ಇರುತ್ತಾರೆ. ಒಂದು ಘಟ್ಟದಲ್ಲಿ ಗೆಲ್ಲುತ್ತಾರೆ ಕೂಡಾ. ಜಾಗತೀಕರಣಕ್ಕೆ ತಾವು ಸ್ಪೇಸ್ ನೀಡುತ್ತಿರುವವರು ಇದನ್ನ ಗಮನಿಸಬೇಕಾಗಿದೆ.

ಯಾವುದೇ ಅಧಿಕಾರ ಅಥವಾ ಶಕ್ತಿಯನ್ನು ಗಲೈಸಲೂ ಕೂಡ ಸಾಧನೆ ಮುಖ್ಯವಾಗುತ್ತದೆ. ಸಾಧನೆಗೆ ಶಿಸ್ತು ಬೇಕಾಗುತ್ತದೆ. ಅದು ಬೌಧಿಕತೆಯನ್ನು ಬೇಡುತ್ತದೆ. ಆದರೆ ಜ್ಞಾನ ಬೇಗ ನಾಶದ ಕಡೆಗೆ ಚಲಿಸುತ್ತಿರುತ್ತದೆ. ಈ ಶಕ್ತಿಯನ್ನುಯ್ ಸಮಾಜ ಒಳಿತಿಗಾಗಿ ಉಪಯೋಗಿಸಲು ‘ವಿವೇಕ’ ಬೇಕಾಗುತ್ತದೆ. ಈ ವಿಷಯವನ್ನು ಎರಡೆನೆಯ ಸಂಪುಟ ‘ಮುಖಗಳು ಮತ್ತು ಮುಖವಾಡಗಳು’ ವಿಷದವಾಗಿ ತಿಳಿಸುತ್ತವೆ.

ವಸಾಹತೀಕರಣವೆಂದರೆ ಇದು ಕೇವಲ ಆರ್ಥಿಕ ಆಯಾಮವನ್ನು ಮಾತ್ರ ಹೊಂದುವುದಿಲ್ಲ. ಆಳ್ವಿಕೆಗೆ ಒಳಪತ್ತವರ ದೇಹ ಮತ್ತು ಮನಸ್ಸಿನ ಆಳಕ್ಕೆ ಆಳುವವರ ವಿಚಾರಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇಲಿದುಬಿದುವಂತೆ ನೋಡಿಕೊಳ್ಳುವ ವಿಧಾನವಾಗಿರುತ್ತದೆ. ತನ್ನತನವನ್ನೇ ಮರೆಸಿ ವಿಸ್ಮೃತಿಗೆ ದೂಡಿಬಿಡುತ್ತದೆ, ಈ ತನ್ನದೆಲ್ಲವನ್ನೂ ಕೀಳರಿಮೆಗೆ ಒಳಪದಿಸಿಬಿದುತ್ತದೆ.

ಹೆಣ್ಣಿನ ಮೈಯಂತೂ ಕೇವಲ ಭೋಗದ ವಸ್ತುವಾಗಿಬಿಡುತ್ತದೆ. ಇವೆಲ್ಲವೂ ಪ್ರತಿ ಸಂಸ್ಕೃತಿಯನ್ನು ಸೃಷ್ಟಿಸಿಕೊಳ್ಳುತ್ತಾ ಹೋರಾಟವಾಗಿ ಮಾರ್ಪದಿಸಿಕೊಲ್ಲಬೇಕಾಗುತ್ತದೆ. ಇದಕ್ಕೆ ಅಪಾರ ದೈಹಿಕ, ಮಾನಸಿಕ ಶಕ್ತಿ ಬೇಕಾಗಾಗುತ್ತದೆ. ಗಾಂಧೀಜಿಯಂತಹವರು ಬೇಕಾಗುವುದು ಇಲ್ಲೇ. ಈ ವಿಚಾರಗಳನ್ನೆಲ್ಲಾ  ಗೆಲಿಯಾನೋ ಓದುಗರಿಗೆ ತನ್ನ ದೃಷ್ಟಿಕೋನದಿಂದ ನೀಡುತ್ತಾನೆ. ಹೊಸ ಚಾರಿತ್ರಿಕ ದೃಷ್ಟಿಕೋನವನ್ನು ಸೃಷ್ಟಿಸುತ್ತಾನೆ.

ಕನ್ನಡಕ್ಕೆ ಅತ್ಯಂತ ಸಮರ್ಪಕವಾಗಿ ಈ ಕೃತಿಯನ್ನು ಕೆ.ಪಿ.ಸುರೇಶ ತಂದಿರುವುದೇ ಅಲ್ಲದೆ ಮನುಕುಲದ ಚರಿತ್ರೆಯ ಕಾಣ್ಕೆಯನ್ನು ಹೊತ್ತು ತಂದಿದ್ದಾರೆ.

Leave a Reply

Your email address will not be published. Required fields are marked *