Browsed by
Month: December 2016

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯ ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ…

Read More Read More

ದಮನಿತರಿಗೆ ಧ್ವನಿ ಕೊಡುವ ಕೆಲಸ

ದಮನಿತರಿಗೆ ಧ್ವನಿ ಕೊಡುವ ಕೆಲಸ

ನಮ್ಮ ‘ಅರಿವಿನ ಸ್ಫೋಟ’ (epistomological break) ಹೋಲಿಸಿದ ಅನೇಕ ಬರಹಗಳ ವಿಶ್ವವಿದ್ಯಾಲಯದ ಭದ್ರ ಗೋಡೆಯ ಆಚೆ ನಡೆಯುತ್ತಿರುತ್ತವೆ. ಗೆಲಿಯಾನೋನಾ ‘ಬೆಂಕಿಯ ನೆನಪು’ ಹೀಗೊಂದು ಕೃತಿ. ಈ ಕೃತಿ ಯಾವ ಚರಿತ್ರೆಯ ಸಿದ್ದಾಂತಗಳ ಭಾರದಿಂದಲೂ ಕುಸಿದಿರದ ಕಥಾನಕ. ಈ ಚರಿತ್ರೆಯನ್ನು ಕಾಣಲು ಸಾಧ್ಯವಾಗುವುದು ಔಪಚಾರಿಕ ಹಿನ್ನೆಲೆಯಲ್ಲಿ ಕಲಿತ ಸಿದ್ದಾಂತಗಳನ್ನು ಮರೆಯುವ ಸಾಧ್ಯತೆ ಇದ್ದಾಗ ಮಾತ್ರ. ಗೆಲಿಯಾನೋನನ್ನು ಓದಿದ ಮೇಲೆ ಚರಿತ್ರೆ ಯಾವುದೆಂದರೆ ಇದಲ್ಲ, ಇದಲ್ಲ, ಇದಲ್ಲ, ಹಾಂ! ಇದು ! ಎನ್ನಿಸುವ ಮನಸ್ಸನ್ನು ಸೃಷ್ಟಿಸುವುದು. ‘ಅವರ ಬಿಟ್ಟು, ಅವರ ಬಿಟ್ಟು ಅವರ್ಯಾರು?” ಎಂದು ಕೇಳಿ ತಿಳಿಯುವ ಸಾಮರ್ಥ್ಯವನ್ನು ಹೀಗೆ ನೀಡುವ ರೂಪ ಮತ್ತು ರೂಪಕ ಎರಡೂ ಆದ ‘ಬೆಂಕಿಯ ನೆನಪು’. ಹೀಗೆಂದಾಕ್ಷಣ ರಾಜಕೇಂದ್ರಿತ ಚರಿತ್ರೆ, ಅಧಿಕಾರಶಾಹಿ ರಚಿಸಿದ ಚರಿತ್ರೆ, ಜನ ಕಟ್ಟಿದ ಜನಪದ ಚರಿತ್ರೆ…

Read More Read More

ವಚನವೊಂದರ ವಿಶ್ಲೇಷಣೆ

ವಚನವೊಂದರ ವಿಶ್ಲೇಷಣೆ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ; ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ; ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ; ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು; ಕೂಡಲಸಂಗಮದೇವಾ . ಪ್ರೊ . ಎಂ . ಜಿ .ಕೃಷ್ಣಮೂರ್ತಿಯವರು ಈ ವಚನವನ್ನು ಬಹಳ ಸಮರ್ಥವಾಗಿ ವಿಶ್ಲೇಷಣೆ ಮಾಡುತ್ತಾ : ೧)ಕವನದ ಮೊದಲು ಮೂರು ಸಾಲುಗಳಲ್ಲಿ ‘ತಂದೆ’ ಪದದ ಪುನುರುಕ್ತಿ ಹಾಗೂ ಆ ಪದದ ಸಾಮಾನ್ಯ ಮತ್ತು ಧ್ವನಿತಾರ್ಥಗಳನ್ನು ಗುರುತಿಸಿದ್ದಾರೆ. ೨)ಮೊದಲ ಮೂರು ಸಾಲಿನ ನಿಷೇಧಕಕ್ಕೂ , ಕೊನೆಯ ಸಾಲಿನ ನಿಷೇಧಕಕ್ಕೂ ಇರುವ ಸಂಬಂಧ  – ವ್ಯತ್ಯಾಸ , ಪರಿಮಿತಿ – ಶಕ್ತಿಗಳನ್ನು ಗುರುತಿಸಿದ್ದಾರೆ. ೩) ಕೂಡಲ ಸಂಗಮ ದೇವಾ – ಎಂಬ ಪದ(ಪುಂಜ) ಕೆರಳಿಸುವ ಕುತೂಹಲವನ್ನು ವಿಶ್ಲೇಷಿಸುತ್ತಾ : ”…

Read More Read More

ಕುವೆಂಪು ನಾಟಕಗಳ ವೈಚಾರಿಕತೆ

ಕುವೆಂಪು ನಾಟಕಗಳ ವೈಚಾರಿಕತೆ

ಪುಸ್ತಕ – ರಂಗಭೂಮಿಯ ಸವಾಲುಗಳು  ಸ್ನೇಹಿತರೆ ಈಗಾಗಲೇ ಬೆಳಗ್ಗಿನಿಂದ ಕುವೆಂಪುರವರ ಕೃತಿಗಳನ್ನ ಜಾಗತೀಕರಣದ ಸಂದರ್ಭದಲ್ಲಿ ಇತ್ತು ಮತ್ತೆ ಸ್ಥಳೀಯತೆಯ ಬಗ್ಗೆ ಅನೇಕ ವಿಷಯಗಳು ಮಂಡಿತವಾಗಿವೆ. ಆದರೆ ನಾನು ಈಗ ಕುವೆಂಪು ನಾಟಕಗಳಲ್ಲಿ ವೈಚಾರಿಕತೆಯ ಬಗ್ಗೆ ಮಾತನಾಡಲಿಕ್ಕೆ ಹೊರಟಿದ್ದೇನೆ. ಅದಕ್ಕೆ ಮುಂಚೆ ವೈಚಾರಿಕತೆ ಅಂತಂದ್ರೆ ಏನು? ನಾವು ಅದನ್ನು ಯೋಚನೆ ಮಾಡಿದ್ದೇವೆಯಾ? ಯಾವುದನ್ನು ನಾವು ವೈಚಾರಿಕತೆ ಅಂತೀವಿ? ಯಾವುದನ್ನು ವೈಚಾರಿಕತೆ ಅಲ್ಲ ಅಂತೀವೇ. ಇದನ್ನ ಒಂದು ದೃಷ್ಟಾಂತದ ಮೂಲಕ ನಿಮಗೆ ಹೇಳಿ ಆಮೇಲೆ ಕುವೆಂಪುರವರು ವೈಚಾರಿಕತೆಯನ್ನು ಯಾವ ರೀತಿ ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನೋದರ ಬಗ್ಗೆ ಹೇಳುತ್ತೇನೆ. ಈ  ಒಂದು ತಿಂಗಳ ಹಿಂದೆ ಜಾನಪದ ವಿಷಯದ ಬಗ್ಗೆ ಕ್ಷೇತ್ರಕಾರ್ಯಕ್ಕೆ ಅಂತ ಹೋಗಿ, ಅಂದ್ರೆ “ಬೀದಿ ಬದಿಯ ದೇವರುಗಳು” ಅನ್ನುವ ವಿಷಯದಲ್ಲಿ ಒಂದು ಕ್ಷೇತ್ರಕಾರ್ಯಕ್ಕೆ ಅಂತ ಹೋಗಿದ್ವಿ. ಅದರಲ್ಲಿ…

Read More Read More