Browsed by
Month: November 2016

In Alva’s Nudisiri 2016, Moodubidare

In Alva’s Nudisiri 2016, Moodubidare

Prof.Kikkeri Narayana gave half an hour speech on “Kannada – Tomorrow” topic in Alva’s College , Moodubidare for “NudiSiri” programme on 18/11/2016. Invitation for programme :alvas_nudisiri_2016                                                             ನಾವು ಬಾಷೆ ಅಂದ್ರೆ ಸಾಹಿತ್ಯ ಅಂತ ಮಾತ್ರ ತಿಳಿಯುತ್ತೇವೆ. ಜನಸಂಸ್ಕೃತಿಯೂ ಭಾಷೆಯ ಭಾಗ. – ಪ್ರೊ. ಕಿಕ್ಕೇರಿ ನಾರಾಯಣ Facebook page share : https://www.facebook.com/Alvasnudisiri/posts/10154725554845818?pnref=story Speech Audio:

ಜೇನುಕುರುಬ ಶಮಣರು(ಗುಡ್ಡರು) ಭಾಗ -೨

ಜೇನುಕುರುಬ ಶಮಣರು(ಗುಡ್ಡರು) ಭಾಗ -೨

Aruhu Kuruhu ಫಲವಂತಿಕೆಯ ಪೂಜೆಗೆ ಸುಮಾರು ಮುವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾಗ್ ಇತಿಹಾಸಕಾರರು ತಮ್ಮ ವೈಜ್ಞಾನಿಕ ವಿಧಾನದಿಂದ ಇದನ್ನು ಖಚಿತಪಡಿಸಿದ್ದಾರೆ. ಆದಿಮಾನವನ ಗುಹಾಂತರ್ಗತ ಚಿತ್ರಗಳೆ ಇದಕ್ಕೆ ಸಾಕ್ಷಿ. ಪ್ರಪಂಚದಾದ್ಯಂತ, ಅದರಲ್ಲೂ ಮಧ್ಯ ಮತ್ತು ಉತ್ತರ ಏಷ್ಯಾದಲ್ಲಿ, ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ, ಯೂರೋಪ್ ದೇಶಗಳಲ್ಲಿ ಚೈನಾ ಮತ್ತು ಟಿಬೆಟ್ಗಳಲ್ಲಿ ಈ ಫಲವಂತಿಕೆಯ ಕ್ರಿಯಾವಿಧಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಕಂಡುಬರುವ ಬಾದಾಮಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಪಕ್ಕಿಹಾಳ, ತೆಕ್ಕಲಕೋಟೆ ಮತ್ತು ಸಂಗನಕಲ್ಲುಗಳಲ್ಲಿ ಕಂಡುಬರುವ ಗವಿಗಳಲ್ಲಿ ಇರುವ ಕಲ್ಲಾಸರೆಯ ಬಣ್ಣದ ಚಿತ್ರಗಳು ಇಲ್ಲಿಯೂ ಸಹ ಫಲವಂತಿಕೆಯ ಕ್ರಿಯಾವಿಧಿಯನ್ನು ಆಚರಿಸುವ ಕ್ರಮವಿತ್ತೆಂದು ಕಂಡುಬರುತ್ತದೆ. ಇಂತಹ ಚಿತ್ರಗಳನ್ನ ವಿಶ್ಲೇಷಿಸಿರುವ ಮಿರ್ಸಿಯ ಎಲಿಯೆಡ್’ 1964ರಲ್ಲಿ ಮೊದಲ ಬಾರಿಗೆ ಮೇಲೆ ಕೊಟ್ಟಿರುವ ಚಿತ್ರವನ್ನು (ಚಿತ್ರ-1) ವಿಶ್ಲೇಷಿಸಿ ಇದು ಶಮಣರ (ಜೇನುಕುರುಬ ಭಾಷೆಯಲ್ಲಿ…

Read More Read More

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

Tingalu – Febraury 2010 “ಕತೆ ಹಿರಿದಾದರೂ ಆ ಕತೆಯ ಮೈಗೆಡಲೀಯದೆ – ಈ ಹಿಂದೆ “ಸಮಸ್ತ। ಭಾರತ’ವನ್ನು (ಹೀಗೆ) ಅಪರೂರ್ವವಾಗಿ ಸಲ್ಲುವಂತೆ (ಸ್ವಾಗತರ್ಹವಾಗುವಂತೆ) ಹೇಳಿದ ಕವೀಶ್ವರರಿಲ್ಲ. “ವರ್ಣಕ”ವು ಕತೆಯಲ್ಲಿ ಔಚಿತ್ಯ ಪಡೆಯುವಂತೆ ಹೇಳುವುದಾದರೆ – ಪಂಪನೇ ಹೇಳುವ(ಅಂಥವ)ನು ಎಂದು ಪಂಡಿತರೆ ಬಿಡದೆ ಪ್ರಶಂಸೆ ಮಾಡಲು ಈ ಆಗ ನಾನು ಈ ಪ್ರಬಂಧವನ್ನು ಹೇಳಲು ಪ್ರಾರಂಭಿಸಿದೆ (೧.೧೧)ಲಲಿತಪದ, ಪ್ರಸನ್ನ ಕವಿತಾಗುಣ – ಇವು ಎರಡೂ ಇಲ್ಲದೆ ಬರೆಯುವನೆಂದು ಕಾವ್ಯವನ್ನು ಹೇಳಿದ ಬೆಪ್ಪರ ಕೃತಿಬ೦ದವಾದರೋ ಬರೆಯುವರ (ಅಂದರೆ ಪ್ರತಿ ಎತ್ತುವರ) ಕೈಗಳ ಹಾಳು, ನುಣ್ಣನೆಯ ತಾಳೆಯ ಗರಿಗಳ ಹಾಳು, ಹೇಳಿಸಿದರೆ ಅರ್ಥದ  ಹಾಳು – ಎಂಬಂತೆ (ಕಾವ್ಯವನ್ನು) ಹೇಳಿ ಬೀಗಿ ಬಿರಿದು, ಕೀರ್ತಿಗೆ ಆಶೆ ಪಡುವ ದುಷ್ಕಮಿಯೂ ಒಬ್ಬ ಕವಿ ಎಂಬ  ಲೆಕ್ಕವೇ? (೧.೧೨)…

Read More Read More

ಮಿಖೈಲ್ ಬಖ್ತಿನ್

ಮಿಖೈಲ್ ಬಖ್ತಿನ್

tingalu – may 2009 ಇತ್ತೀಚಿನ ಕನ್ನಡಸಾಹಿತ್ಯವನ್ನು ಅರ್ಥೈಸುವ ವಿಧಾನಗಳಲ್ಲಿ ರೂಪವಾದ, ಸಂರಚನವಾದ, ರಚನೋತ್ತರವಾದ, ಓದುಗ-ಪ್ರತಿಕ್ರಿಯಾಸಿದ್ಧಾಂತ , ಮಾರ್ಕ್ಸ್ವಾದ, ಮನೋವೈಜ್ಞಾನಿಕ ಸಿದ್ಧಾಂತ, ದೇಸೀವಾದ, ಕಥಾನಕ ಮುಂತಾದ ಪರಿಕಲ್ಪನೆಗಳು  ಹೇರಳವಾಗಿ ಪ್ರಯೋಗವಾಗುತ್ತಿದೆ. ಈ ಪರಿಕಲ್ಪನೆಗಳು ಅನೇಕ ವಾಡ-ವಿವಾದಗಳನ್ನು ಸೃಷ್ಟಿಸಿದೆ. ಆದರೂ ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಸಾಂಸ್ಕೃತಿಕ ಪಟ್ಯಗಳ ವಿಶ್ಲೇಷಣೆಯಿಂದ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಈ ಸಿದ್ಧಾಂತಗಳು ಪಶ್ಚಿಮದಿಂದ ಬಂದಿದ್ದರಿಂದ ನಮ್ಮ ಭಾರತೀಯ ಸಾಹಿತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ನಮ್ಮದೇ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇಲ್ಲದೆ ಇಲ್ಲ . ಪಾಶ್ಚಿಮಾತ್ಯ ದೇಶಗಳಲ್ಲಿ ೨೦ನೆ ಶತಮಾನದ ಆದಿಯಲ್ಲಿ ಸಾಹಿತ್ಯ ಕೃತಿಗಳನ್ನು ನೋಡುವ ಮತ್ತು ವಿಶ್ಲೇಷಿಸುವ ದಿಕ್ಕಿನಲ್ಲಿ ಅರಿವಿನ ಸ್ಫೋಟ ಕಂಡುಬಂದಿತು. ಮುಖ್ಯವಾಗಿ ಭಾಷಾಶಾಸ್ತ್ರಜ್ಞ ಫ್ಹರ್ಡಿನಾಂದ್ ದಿ ಸೇಸ್ಯುರ್ ಭಾಷಾಸ್ತ್ರದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಇಡೀ ಮಾನವಶಾಸ್ತ್ರವನ್ನೇ ಹೊಸ ದಿಕ್ಕಿನೆಡೆಯಿಂದ ನೋಡುವಂತೆ ಮಾಡಿದ….

Read More Read More