ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ
ಪುಸ್ತಕ: ಆಲೆಮನೆ ಒಂದರ್ಥದಲ್ಲಿ ಪ್ರತಿಯೊಂದು ಕ್ರಿಯಾತ್ಮಕ ಬರಹವೂ ಒಂದು ಸಮಾಜ. ಸಂಸ್ಕೃತಿ ಮತ್ತು ಚರಿತ್ರೆಯೋಡನೆ, ಒಟ್ಟಿನಲ್ಲಿ ಜೀವದೊಡನೆ ಸೂಕ್ಷ್ಮವಾಗಿ ನಡೆಸುವ ಸಂವಾದವಾಗುವುದರ ಜೊತೆಗೆ ವ್ಯಾಖ್ಯಾನವೂ ಆಗಿರುತ್ತದೆ. ಕ್ರಿಯಾತ್ಮಕ ಬರಹಗಾರ ಸಮಾಜವನ್ನು ಭಿನ್ನವಾಗಿ ಗ್ರಹಿಸಿ ಅದನ್ನು ಪ್ರಸ್ತುತಪಡಿಸುವುದಕ್ಕಾಗಿ, ಓದುಗರೊಡನೆ ಸಂವಹನ ನಡೆಸುವುದಕ್ಕಾಗಿ ವಿಭಿನ್ನವಾಗಿ ಭಾಷೆಯನ್ನೂ ಬಳಸುತ್ತಾನೆ. ಏಕೆಂದರೆ ಸಾಹಿತ್ಯಕ್ಕೆ ಭಾಷೆಯೇ ದ್ರವ್ಯ. ಕಥೆಗಾರ ತಾನು ಅಂದುಕೊಂಡ ಪರಿಣಾಮವನ್ನು ಒಡ ಮೂಡಿಸಲು, ಈವರೆಗೂ ಓದುಗನ ಅನುಭವಕ್ಕೆ ಬಾರದಿರುವ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಾನೆ. ಹೀಗೆ ಹೇಳುವಾಗ ಸಾಮಾನ್ಯ ಭಾಷೆ ಸಾಕಾಗದಿದ್ದಾಗ ಮೇಲ್ನೋಟಕ್ಕೆ ಅಸಂಬದ್ದಿವಾಗಿ ಕಾನುವನ್ತೆಯೂ ಚಿತ್ರಿಸುತಾನೆ. ಸಾಮಾನ್ಯ ಕ್ರಮವನ್ನು ಬಿಟ್ಟು ವಿಶಿಷ್ಟ ಕ್ರಮವನ್ನು ಅನುಸರಿಸುತ್ತಾನೆ. ಹೀಗೆ ತಾನು ನಿರೀಕ್ಷಿಸಿದ ಪರಿಣಾಮವನ್ನು ಉಂಟು ಮಾಡಲು ಬಳಸುವ ವಿಧಾನವನ್ನು ತಂತ್ರ ಎಂದು ಕರೆಯಬಹುದು. ಹಾಗೆ ನೋಡಿದರೆ ತಂತ್ರ, ಸಂವಿಧಾನ, ಸಂಕೇತ,…