ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ
ಪುಸ್ತಕ ವಿಮರ್ಶೆ ವ್ಯಕ್ತಿ ಮೂಲತಃ ಕ್ರಿಯಾತ್ಮಕನಾದ ಅವನ ಅಭಿವ್ಯಕ್ತಿಯೂ ಸಹ radical ಆಗಿರುತ್ತದೆ. ಇದರ ಮೂಲಕ ತನ್ನ ಸಮಾಜಕ್ಕೆ ಸ್ಪಂದಿಸುತ್ತಾನೆ. ಈ ರೀತಿ ಸ್ಪಂದಿಸುವುದಕ್ಕಾಗಿ ಒಂದು ಮಾಧ್ಯಮವನ್ನು ಕಂಡುಕೊಳ್ಳುತ್ತಾನೆ.ಸಮಾಜದ ಸಂಕೀರ್ಣತೆಯೊಡನೆ ಬೆರೆತು ಸಂಕೀರ್ಣ ಅನುಭವವನ್ನು ಪಡೆಯುತ್ತಾನೆ. ಸಮಕಾಲೀನ ಸಮಸ್ಯೆಯನ್ನು ಅಭಿವ್ಯಕ್ತಿಸುವಾಗ ತಕ್ಷಣ ಯಾವ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆಗ ಆತ ಬುದ್ದಿವಂತನಾಗಿದ್ದರೆ suggestive ಆಗುತ್ತಾನೆ. ಈ ರೀತಿ suggestive ಆಗಿ ಸಮಾಜಕ್ಕೆ ತನ್ನ ಮಾಧ್ಯಮದಿಂದ ಜನರನ್ನು ಯೋಚನೆಗೆ ತೊಡಗಿಸುತ್ತಾನೆ. ಈ ರೀತಿ ಲಂಕೇಶರು ತಮ್ಮ ಮಾಧ್ಯಮಗಳನ್ನು ಬದಲಾಯಿಸುತ್ತಾ ಬಂದು ಈಗ ಒಂದು ವಿಶಾಲ canvas ಉಳ್ಳ ಮಾಧ್ಯಮವನ್ನು ತಲುಪಿದ್ದಾರೆ. ಸಾಹಿತ್ಯ ಕೇವಲ ‘ವಿದ್ಯಾವಂತ’ ರಿಗೆ ಮಾತ್ರ ತಲುಪುವ ಮಾಧ್ಯಮ. ಆದರೆ ಸಿನಿಮಾ ಶ್ರಾವಣ – ದೃಶ್ಯಗಳಿಂದ ಕೂಡಿದ್ದು ‘ವಿದ್ಯಾವಂತ’ ಅವಿದ್ಯಾವಂತರವರೆಗೂ ತಲುಪುವ ಮಾಧ್ಯಮ….