ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ
ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ. ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ…