ಲೈಂಗಿಕಾತ್ಮಕತೆ ಮತ್ತು ಅಧಿಕಾರ
ಕ್ರಿಶ್ಚಿಯನ್ ಧಾರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಿಷೆಲ್ ಫುಕೋನ ಚಿಂತನೆಗಳು ಈ ದಿನ ನಾನು ನನ್ನ ಪ್ರಮೇಯವನ್ನು ಮಂಡಿಸಲು ಯತ್ನಿಸುತ್ತೇನೆ. ಈಗ ನಾನು ಲೈಂಗಿಕಾತ್ಮಕತೆಯ ಚರಿತ್ರೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಆರು ಸಂಪುಟಗಳಲ್ಲಿ ಬರೆಯಬೇಕೆಂದಿದ್ದೇನೆ . ಲೈಂಗಿಕಾತ್ಮಕತೆಯ ಚರಿತ್ರೆಯನ್ನೇ ಏಕೆ ತೆಗೆದುಕೊಂಡೆ? ಅದಕ್ಕೆ ಕಾರಣ ನನಗೊಂದು ವಿಷಯ ಹೊಳೆದಿತ್ತು. ಫ್ರಾಯ್ಡ್ ನ ಮನೋವಿಶ್ಲೇಷಣೆ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಚಾರಿತ್ರಿಕ ರೂಪವನ್ನು ಪಡೆದುಕೊಂಡಿತ್ತು, ಅಲ್ಲದೆ ಪಾಶ್ಚಾತ್ಯ ಸಮಾಜದಲ್ಲಿ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಈ ಅಂಚಿಗೆ ತಳ್ಳಲ್ಪಟ್ಟ ವೈದ್ಯರನ್ನು ಆಕರ್ಷಿಸಿತ್ತು. ಒಂದಲ್ಲ ಒಂದು ವಿಧದಲ್ಲಿ ಈ ಸಮಸ್ಯೆಗಳು ವೈದ್ಯರನ್ನು ಕಾಡುತ್ತಿತ್ತು. ಮುಖ್ಯವಾಗಿ, ಹಿಸ್ಟೀರಿಯಾ. ಹಿಸ್ಟೀರಿಯಾ ಒಂದು ರೀತಿಯ ಮರೆವಿನ ಕಾಯಿಲೆ. ವ್ಯಕ್ತಿ ತನ್ನನ್ನು ತಾನೇ ತಪ್ಪು ಅರ್ಥ ಮಾಡಿಕೊಳ್ಳುವ ಅಥವಾ ಇಡೀ ದೇಹವನ್ನೇ ಮರೆತು…